VISL ಉಳಿಸಲು ಮುಂದಾದ ಕೇಂದ್ರ ಗೃಹಸಚಿವ ಅಮಿತ್ ಶಾ? ಏನಿದು ಪತ್ರ ವಹಿವಾಟು

Malenadu Today

Shivamogga | Feb 8, 2024 | ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಹಿರಿಮೆ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ. ಸದ್ಯ ಸಂಸತ್ ಚುನಾವಣೆಯ ವಿಷಯವೂ ಆಗಿ ಕಾರ್ಖಾನೆ ಸುದ್ದಿಯಲ್ಲಿದೆ. ಈ ನಡುವೆ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವಿಐಎಸ್​ಎಲ್​ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಕೇಂದ್ರ ಉಕ್ಕು ಸಚಿವ ಜ್ಯೋತಿರಾದಿತ್ಯ ಸಿಂಧಿಯಾರಿಗೆ ಗೃಹ ಸಚಿವ ಅಮಿತ್ ಶಾ ಪತ್ರ ಬರೆದಿದ್ದಾರೆ.

ಅಮಿತ್ ಶಾ ಪತ್ರ ದಲ್ಲಿ ಏನಿದೆ

ತಮ್ಮ ಪತ್ರದಲ್ಲಿ ಕೇಂದ್ರ ಗೃಹಸಚಿವ  ಅಮಿತ್ ಶಾ  ರವರು ಮಾಜಿ ಸಿಎಂ ಬಿಎಸ್​.ಯಡಿಯೂರಪ್ಪ ರವರು ತಮಗೆ ಬರೆದ ಪತ್ರದ ಬಗ್ಗೆಯು ಉಲ್ಲೇಖಿಸಿದ್ದಾರೆ.  ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಪುನರುಜ್ಜಿವನಗೊಳಿಸುವ ಸಂಬಂಧ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಜನವರಿ13 ರಂದು ನನಗೆ ಮನವಿ ಸಲ್ಲಿಸಿದ್ದಾರೆ. 

ಮೈಸೂರು ಮಹಾರಾಜರಾದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯ‌ರ್,ಸರ್‌ಎಂವಿ ದೂರದೃಷ್ಟಿ,ಪರಿಶ್ರಮದಿಂದ 1918ರಲ್ಲಿ ಭದ್ರಾವತಿಯಲ್ಲಿ ಸ್ಥಾಪನೆಗೊಂಡಿದ್ದು, ಐತಿಹಾಸಿಕ ಮಹತ್ವ ಹೊಂದಿದೆ.

ಕೇಂದ್ರ ಸರ್ಕಾರ ವಿಐಎಎಲ್ ಸೇರಿ ದಂತೆ 2016ರ ವರ್ಷದಲ್ಲಿ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್‌ ಮೂರುಘಟಕಗಳಹೂಡಿಕೆ ಹಿಂಪಡೆಯಲು ಅನುಮೋದನೆ ನೀಡಿದೆ. ಅಲ್ಲದೆ ಇದೀಗ ಮುಚ್ಚುವ ತೀರ್ಮಾನ ಕೈಗೊಂಡಿದೆ. 

ಪ್ರಸ್ತುತ ಕಾರ್ಖಾನೆ ಬಳ್ಳಾರಿ ಜಿಲ್ಲೆಯಲ್ಲಿ 150 ಎಕರೆ ಸ್ವಂತ ಆದಿರಿನ ಗಣಿ ಹೊಂದಿದೆ. ಇದು 2025ರಿಂದ ಕಾರ್ಯಾರಂಭಗೊಳ್ಳಲಿದ್ದು, ಕಾರ್ಖಾನೆ ಪುನರುಜ್ಜಿವನಗೊಳಿಸಲು ಅವಕಾಶವಿದೆ ಎಂದು ಮನವಿಪತ್ರ ದಲ್ಲಿ ತಿಳಿಸಿದ್ದಾರೆ. 

ಈ ಹಿನ್ನೆಲೆಯಲ್ಲಿ ಫೆ 2ರಂದು ಗೃಹ ಸಚಿವರು ಪತ್ರ ಬರೆದು ಕೋರಿದ್ದಾರೆ.


Share This Article