ಮೇನ್ ರೋಡ್‌ನಲ್ಲಿ ಸಿಕ್ತು ಅಪರಿಚಿತ ವ್ಯಕ್ತಿ ಶವ ಹಾಗೂ ಅಪ್‌ಸೆಟ್ ಆದ ಓಮಿನಿ! ಸುಳಿವು ಸಿಗದ ಪ್ರಕರಣ ಏನಿದು?
Unidentified man's body and Omni found on Main Road What is the case where there is no clue? Bhadravathi Rural Police Station
Shivamogga Mar 31, 2024 ಅಪಘಾತದಲ್ಲಿ ಅಪರಿಚಿತ ವ್ಯಕ್ತಿ ಸಾವು
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಗ್ರಾಮಾಂತರ ಪೋಲಿಸ್ ಠಾಣೆ ವ್ಯಾಪ್ತಿಯ ತಮ್ಮಡಿಹಳ್ಳಿ ಗ್ರಾಮದ ಬಳಿ ಮಾ.29 ರಂದು ಬೆಳಗ್ಗಿನ ಜಾವ 4 ಗಂಟೆ ವೇಳೆಗೆ ಸುಮಾರು 35 ರಿಂದ 40 ವರ್ಷ ವಯಸ್ಸಿನ ಅಪಘಾತಕ್ಕೀಡಾದ ಪುರುಷನ ಶವ ಪತ್ತೆಯಾಗಿದೆ. ಈ ಮೃತದೇಹದ ಗುರುತು ಪತ್ತೆಗಾಗಿ ಪೊಲೀಸ್ ಇಲಾಖೆ ಪ್ರಕಟಣೆ ನೀಡಿದೆ
ಮೃತನ ವಾರಸುದಾರರು ಪತ್ತೆಯಾಗಿರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದ್ದು ಅಪಘಾತದ ಸ್ಥಳದಲ್ಲಿ ನಿಂತಿದ್ದ ಬಿಳಿ ಬಣ್ಣದ ಮಾರುತಿ ಓಮ್ನಿ ವ್ಯಾನ್ ಸಂಖ್ಯೆ ಕೆಎ 14 ಪಿ-6302 ಆಗಿರುತ್ತದೆ. ಹೆಚ್.ಕೆ ಜಂಕ್ಷನ್ ಕಡೆಯಿಂದ ಬೆಳಗಿನ ಜಾವ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಈ ಬಿಳಿ ಮಾರುತಿ ಓಮ್ನಿ ವಾಹನ ಚಾಲಕ ಅತಿ ವೇಗವಾಗಿ ಚಾಲನೆ ಮಾಡಿಕೊಂಡು ಬಂದು ಅಪಘಾತ ಮಾಡಿ, ವಾಹನ ಮುಂದೆ ಹೋಗಲು ಸಾಧ್ಯವಾಗದೇ ಸ್ಥಳದಲ್ಲೇ ಬಿಟ್ಟು ಹೋಗಿರಬಹುದಾಗಿದೆ.
ಮೃತ ವ್ಯಕ್ತಿಯ ಚಹರೆ ಸಾಧಾರಣ ಮೈಕಟ್ಟು. ಎಣ್ಣೆಗೆಂಪು ಮೈಬಣ್ಣ ಕೋಲುಮುಖ, ಕುರುಚಲು ಗಡ್ಡ ಮೀಸೆ ಬಿಟ್ಟಿರುತ್ತಾನೆ. ಮೃತನ ಮೈಮೇಲೆ ನೀಲಿ ಬಣ್ಣದ ಟೀ ಶರ್ಟ್, ಮಾಸಲು ಬಣ್ಣದ ಬನಿಯನ್,ಮಿಲಿಟರಿ ಖಾಕಿ ಬಣ್ಣದ ಚಡ್ಡಿ ಧರಿಸಿರುತ್ತಾನೆ.
ಈ ಮೃತ ವ್ಯಕ್ತಿಯ ವಾರಸ್ಸುದಾರರ ಬಗ್ಗೆ ಗುರುತು ಬಲ್ಲವರು ಪೊಲೀಸ್ ಕಂಟ್ರೋಲ್ ರೂಂ ನಂ.100 ಅಥವಾ ಭದ್ರಾವತಿ ಗ್ರಾಮಾಂತರ ಪೋಲಿಸ್ ಠಾಣೆ ಯನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಸಬ್ ಇನ್ಸ್ ಪೆಕ್ಟರ್ -9480803357 ಅಥವಾ 08282 270100 ಗೆ ಸಂಪರ್ಕಿಸುವಂತೆ ಭದ್ರಾವತಿ ಗ್ರಾಮಾಂತರ ಪೋಲಿಸ್ ಠಾಣೆ ಇನ್ಸ್ ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.