ರೈಲು ಸೀಟಿನಲ್ಲಿ ಕುಳಿತಿದ್ದಾಗಲೇ ವ್ಯಕ್ತಿ ಸಾವು : ವಾರಸುದಾರರ ಪತ್ತೆಗೆ ಮನವಿ 

ಶಿವಮೊಗ್ಗ : ಶಿವಮೊಗ್ಗ ರೈಲು ನಿಲ್ದಾಣದ ವೇದಿಕೆ ಸಂಖ್ಯೆ ಒಂದರಲ್ಲಿ ನಿಂತಿದ್ದ ರೈಲುಗಾಡಿ ಸಂಖ್ಯೆ 16225 ರ ಕೋಚ್ ನಂಬರ್ 1245458 ರ ಸೀಟ್ ಸಂಖ್ಯೆ 85ರಲ್ಲಿ ಸುಮಾರು 45 ರಿಂದ 50 ವರ್ಷ ಪ್ರಾಯದ ವ್ಯಕ್ತಿಯೊಬ್ಬರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತ ವ್ಯಕ್ತಿಯ ಹೆಸರು ಅಥವಾ ವಿಳಾಸದ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಲಭ್ಯವಾಗಿಲ್ಲದ ಕಾರಣ ಪೊಲೀಸರು ಮೃತರ ಗುರುತಿನ ವಿವರಗಳನ್ನು ಬಿಡುಗಡೆ ಮಾಡಿದ್ದಾರೆ.

ಶಿವಮೊಗ್ಗದ ನೂತನ ಡಿಸಿ ಆಗಿ ಪ್ರಭುಲಿಂಗ ಕವಲಿಕಟ್ಟಿ ಪದಗ್ರಹಣ! ಅಧಿಕಾರ ಹಸ್ತಾಂತರ ಮಾಡಿ ಗುರುದತ್ ಹೆಗಡೆ

Unidentified Man ಅಂದಾಜು 5.4 ಅಡಿ ಎತ್ತರವಿರುವ ಈ ವ್ಯಕ್ತಿಯು ದೃಢಕಾಯ ಶರೀರ, ಗೋಧಿ ಮೈಬಣ್ಣ ಹಾಗೂ ದುಂಡು ಮುಖವನ್ನು ಹೊಂದಿದ್ದಾರೆ. ವಿಶೇಷ ಗುರುತಾಗಿ ಇವರ ಬಲಗೈ ತೋಳಿನ ಮೇಲೆ “ಓಂ” ಆಕೃತಿ ಮತ್ತು “PV” ಎಂಬ ಅಕ್ಷರದ ಹಚ್ಚೆ ಹಾಕಿಸಿಕೊಳ್ಳಲಾಗಿದ್ದು, ಎಡಗೈ ಮೊಣಕೈ ಮೇಲೆ ಸುಮಾರು ಮೂರು ಇಂಚು ಉದ್ದದ ಹಳೆಯ ಗಾಯದ ಗುರುತಿದೆ.

ಸಾವನ್ನಪ್ಪಿದ ಸಮಯದಲ್ಲಿ ಇವರು ಮೈಮೇಲೆ ಕೆಂಪು, ಬಿಳಿ ಮತ್ತು ಕಪ್ಪು ಬಣ್ಣದ ಅರ್ಧ ತೋಳಿನ ಟೀಶರ್ಟ್ ಹಾಗೂ ಕಪ್ಪು ಬಣ್ಣದ ಚೆಕ್ಸ್ ಇರುವ ಬರ್ಮುಡಾ ಧರಿಸಿದ್ದರು. ಮೃತರ ಬಗ್ಗೆ ಅಥವಾ ಅವರ ವಾರಸುದಾರರ ಬಗ್ಗೆ ಯಾವುದೇ ಮಾಹಿತಿ ತಿಳಿದಿರುವ ಸಾರ್ವಜನಿಕರು ತಕ್ಷಣವೇ ಶಿವಮೊಗ್ಗ ರೈಲ್ವೆ ಪೊಲೀಸ್ ಠಾಣೆಯನ್ನು ಖುದ್ದಾಗಿ ಭೇಟಿ ಮಾಡಬಹುದು ಅಥವಾ ದೂರವಾಣಿ ಸಂಖ್ಯೆ 

08182-222974 ಅಥವಾ ಮೊಬೈಲ್ ಸಂಖ್ಯೆ 9480802124 ಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ರೈಲ್ವೆ ಪೊಲೀಸ್ ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.

Unidentified Man Found Dead in Train at Shimogga