SSLC ವಿದ್ಯಾರ್ಥಿಗಳಿಗೆ ಮೂರು ಹಂತದ ಪ್ರಿಪರೇಟರಿ ಪರೀಕ್ಷೆಗೆ ಡೇಟ್ ಫಿಕ್ಸ್ :​ ವೇಳಾಪಟ್ಟಿಯ ಪೂರ್ಣ ಮಾಹಿತಿ  ಪಿಡಿಎಫ್​​ನಲ್ಲಿದೆ​ 

ಶಿವಮೊಗ್ಗ: 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ (SSLC) ವಿದ್ಯಾರ್ಥಿಗಳಿಗಾಗಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು  ಮೂರು ಹಂತದ ಪೂರ್ವ ಸಿದ್ದತಾ ಪರೀಕ್ಷೆಗಳ ಡೇಟ್​ನ್ನು ಫಿಕ್ಸ್​ ಮಾಡಿದೆ.

ಮೂರು  ಪೂರ್ವ ಸಿದ್ದತಾ ಪರೀಕ್ಷೆಗಳ ದಿನಾಂಕಗಳನ್ನು  ನೋಡುವುದಾದರೆ. ಮೊದಲನೆ ಹಂತದ  ಪರೀಕ್ಷೆ ಜನವರಿ 05 ರಿಂದ ಜನವರಿ 10 ರವರೆಗೆ ರಾಜ್ಯಾದ್ಯಂತ ನಡೆಯಲಿದೆ. ಎರಡನೇ ಹಂತದ ಪರೀಕ್ಷೆ  2026ರ ಜನವರಿ 27ರಿಂದ ಫೆಬ್ರುವರಿ 2ರ ವರೆಗೆ ನಡೆಯಲಿದ್ದು, ಮೂರನೇ ಹಂತದ ಪರೀಕ್ಷೆಯು ಮೂರನೇ ಹಂತ 2026ರ ಫೆಬ್ರವರಿ 23ರಿಂದ 28 ರವರೆಗೆ ನಡೆಯಲಿದೆ.

ಶಿವಮೊಗ್ಗ ಇಂಟರ್​ ಸಿಟಿ ಟ್ರೈನ್​ ಸೇರಿದಂತೆ ಹತ್ತಕ್ಕೂ ಹೆಚ್ಚು ಟ್ರೈನ್​ಗಳ ನಂಬರ್​ ಬದಲಾವಣೆ! ಹೊಸ ಸಂಖ್ಯೆ ತಿಳಿದುಕೊಳ್ಳಿ

SSLC Preparatory Exam 2026 ಹೆಚ್ಚಿನ ಮಾಹಿತಿ ಗಾಗಿ ಈ ಕೆಲಗಿನ ಪಿಡಿಎಫ್​ ಅನ್ನು ವೀಕ್ಷಿಸಿ

ಮೊದಲ ಹಂತದ ಪೂರ್ವ ಸಿದ್ದತಾ ಪರೀಕ್ಷೆಯ ವೇಳಾಪಟ್ಟಿ ಇಲ್ಲಿ ಡೌನ್​ಲೋಡ್​  ಮಾಡಿಕೊಳ್ಳಿ  :SSLC Preparatory Exam 2026 

ಎರಡನೇ ಹಂತದ ಪೂರ್ವ ಸಿದ್ದತಾ ಪರೀಕ್ಷೆಯ ವೇಳಾಪಟ್ಟಿ ಇಲ್ಲಿ ಡೌನ್​ಲೋಡ್​  ಮಾಡಿಕೊಳ್ಳಿ :SSLC Preparatory Exam 2026 

ಮೂರನೇ ಹಂತದ  ಪೂರ್ವ ಸಿದ್ದತಾ ಪರೀಕ್ಷೆಯ ವೇಳಾಪಟ್ಟಿ ಇಲ್ಲಿ ಡೌನ್​ಲೋಡ್​  ಮಾಡಿಕೊಳ್ಳಿ :SSLC Preparatory Exam 2026 

ಮುಖ್ಯ ಪರೀಕ್ಷೆಯ ಮಾದರಿಯಲ್ಲಿಯೇ ಈ ಪರೀಕ್ಷೆಯನ್ನು ನಡೆಸಲು ಉದ್ದೇಶಿಸಲಾಗಿದ್ದು, ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಯ ತಯಾರಿಗಾಗಿ ಇದು ಸಹಕಾರಿಯಾಗಲಿದೆ. ಜಿಲ್ಲಾ ಉಪನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮಾರ್ಗದರ್ಶನದಲ್ಲಿ ಅತ್ಯಂತ ಪಾರದರ್ಶಕವಾಗಿ ಪರೀಕ್ಷೆ ನಡೆಸಲು ಮಂಡಳಿಯು ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಮುಖ್ಯ ಶಿಕ್ಷಕರಿಗೆ ಪ್ರಮುಖ ಸೂಚನೆಗಳು 

2025-26 ನೇ ಸಾಲಿನ ರಾಜ್ಯಮಟ್ಟದ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ನೋಂದಾಯಿಸಿರುವ ಎಲ್ಲಾ ಶಾಲೆಗಳ ಮುಖ್ಯ ಶಿಕ್ಷಕರು ಮಂಡಲಿ ಜಾಲತಾಣದಿಂದ ಪೂರ್ವಸಿದತಾ ಪರೀಕ್ಷೆ-1ರ ವೇಳಾಪಟ್ಟಿಯನ್ನು ಡೌನ್‌ಲೋಡ್ ಮಾಡಿಕೊಳ್ಳುವುದು.

2025-26ನೇ ಸಾಲಿನ ಪೂರ್ವಸಿದ್ದತಾ ಪರೀಕ್ಷೆ-1ರ ಪ್ರಶ್ನೆಪತ್ರಿಕೆಗಳನ್ನು ಆಯಾ ವಿಷಯದ ಪರೀಕ್ಷಾ ದಿನದಂದು ಪೂರ್ವಾಹ್ನ 07.00 ಗಂಟೆಗೆ ಮಂಡಲಿಯಿಂದ ಶಾಲಾ ಮುಖ್ಯಶಿಕ್ಷಕರ ಲಾಗಿನ್‌ಗೆ ಅಪ್ ಲೋಡ್ ಮಾಡಲಾಗುವುದು. ಅಪ್‌ಲೋಡ್ ಮಾಡಲಾಗುವ ಪ್ರಶ್ನೆಪತ್ರಿಕೆಗಳನ್ನು ಸ್ವತ: ಶಾಲಾ ಮುಖ್ಯಶಿಕ್ಷಕರೇ ತಮ್ಮ ಶಾಲಾ ಲಾಗಿನ್ ಮಾಡಿ ಮೊಬೈಲ್ ಸಂಖ್ಯೆಗೆ ಬರುವ ಓ.ಟಿ.ಪಿ ನಮೂದಿಸುವ ಮೂಲಕ ಪ್ರಶ್ನೆಪತ್ರಿಕೆಗಳನ್ನು ಡೌನ್ಲೋಡ್ ಮಾಡಿಕೊಳ್ಳತಕ್ಕದು. ಆಯಾ ದಿನದ ಎಲ್ಲಾ ವಿಷಯದ ಪ್ರಶ್ನೆಪತ್ರಿಕೆಗಳು ಲಾಗಿನ್‌ನಲ್ಲಿ ಲಭ್ಯವಿರುವುದನ್ನು ಖಾತರಿಪಡಿಸಿಕೊಂಡು, ಗೌಪ್ಯತೆ ಕಾಪಾಡಿಕೊಂಡು ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಮುದ್ರಿಸಿಕೊಳ್ಳುವುದು.

ಪ್ರಶ್ನೆಪತ್ರಿಕೆಗಳ ಮುದ್ರಣ ಸಂದರ್ಭದಲ್ಲಿ ಪೆನ್‌ಡ್ರೈವ್ / ಹಾರ್ಡ್‌ ಡಿಸ್ಕ್ / ಮೊಬೈಲ್ ಫೋನ್ ಇತ್ಯಾದಿಗಳನ್ನು ಬಳಸದಂತೆ ಕ್ರಮವಹಿಸುವುದು.

ಮುದ್ರಣ ಕಾರ್ಯ ಮುಗಿದ ನಂತರ ಹೆಚ್ಚುವರಿಯಾಗಿ ಪ್ರಶ್ನೆಪತ್ರಿಕೆಗಳು ಉಳಿದಿದ್ದಲ್ಲಿ ಅವುಗಳನ್ನು ಸೂಕ್ತ ಭದ್ರತೆಯೊಂದಿಗೆ ಸುರಕ್ಷಿತವಾಗಿ ಸಂರಕ್ಷಿಸಿಕೊಂಡು ಪರೀಕ್ಷೆ ಮುಗಿದ ನಂತರ ಅವುಗಳನ್ನು ನಿಯಮಾನುಸಾರ ವಿಲೇ ಮಾಡುವುದು.

ಪ್ರಶ್ನೆಪತ್ರಿಕೆಗಳು ಮುದ್ರಣ ಕಾರ್ಯ ಪೂರ್ಣಗೊಂಡ ನಂತರ ಪ್ರಶ್ನೆಪತ್ರಿಕೆಗಳ ಎಲ್ಲಾ ಮಾಹಿತಿಗಳನ್ನು ಅಳಿಸಿ ಹಾಕಿರುವುದನ್ನು ಮತ್ತು ಯಾವುದೇ ಮಾಹಿತಿಯು ಗಣಕಯಂತ್ರದಲ್ಲಿ ಉಳಿದುಕೊಳ್ಳದಿರುವ ಬಗ್ಗೆ, ಖಾತ್ರಿಪಡಿಸಿಕೊಳ್ಳುವುದು.

ಮುದ್ರಣ ಕಾರ್ಯ ನಿರ್ವಹಿಸುವಾಗ ಸರಿಯಾಗಿ ಮುದ್ರಣ ಆಗದಿರುವ, ಬಳಸಲು ಯೋಗ್ಯವಲ್ಲದ ಅಥವಾ ಅಪೂರ್ಣವಾಗಿ ಮುದ್ರಿತವಾಗಿರುವ ಕಾಗದಗಳನ್ನು ಸಂಪೂರ್ಣವಾಗಿ ನಾಶಮಾಡುವುದು.

ಪರೀಕ್ಷಾ ನಂತರ ಉತ್ತರಪತ್ರಿಕೆಗಳ ಮೌಲ್ಯಮಾಪನವನ್ನು ಶಾಲಾ ಹಂತದಲ್ಲಿ ಮಾಡುವುದು.

SSLC Preparatory Exam 2026  Three Phase Schedule

SSLC Preparatory Exam 2026  Three Phase Schedule
SSLC Preparatory Exam 2026  Three Phase Schedule