ಶಿವಮೊಗ್ಗ ಇಂಟರ್​ ಸಿಟಿ ಟ್ರೈನ್​ ಸೇರಿದಂತೆ ಹತ್ತಕ್ಕೂ ಹೆಚ್ಚು ಟ್ರೈನ್​ಗಳ ನಂಬರ್​ ಬದಲಾವಣೆ! ಹೊಸ ಸಂಖ್ಯೆ ತಿಳಿದುಕೊಳ್ಳಿ

ಹಂಚಿಕೊಳ್ಳಿ
WhatsApp Facebook X Telegram
Yesvantpur Talguppa SWR Special Train Shimoga Talaguppa Train Cancelled Shivamogga Train Timings Special Train South Western Railway train changes, Baiyyappanahalli yard work, train cancellations September 2025, train diversions SWR, train regulation Bangalore, SWR press release, train status check, SWR ticket booking, train schedule SWR, ಬೆಂಗಳೂರು ರೈಲು, ಬೈಯಪ್ಪನಹಳ್ಳಿ ಯಾರ್ಡ್, ರೈಲು ಮಾರ್ಗ ಬದಲಾವಣೆ, ರೈಲು ವೇಳಾಪಟ್ಟಿ Talaguppa-Yeshvantpur train
Yesvantpur Talguppa SWR Special Train Shimoga Talaguppa Train Cancelled TShivamogga Train Timings alaguppa-Yeshvantpur train

South Western Railway  : ಮಲೆನಾಡು ಟುಡೆ ಸುದ್ದಿ: ನೈಋತ್ಯ ರೈಲ್ವೆ ವಲಯದಲ್ಲಿ ಸಂಚರಿಸುವ ಹಲವು ಪ್ರಮುಖ ಎಕ್ಸ್‌ಪ್ರೆಸ್ ರೈಲುಗಳ ಸಂಖ್ಯೆ ಬದಲಾಗಿದೆ. ಆನ್​ಲೈನ್​ನಲ್ಲಿ ಟ್ರೈನ್​ಗಳನ್ನು ಹುಡುಕುವಾಗ ಹಾಗೂ ಟ್ರೈನ್​ಗೆ ಸಂಬಂಧಿಸಿದ ಟಿಕೆಟ್ ಬುಕ್ ಮಾಡುವ ಸಂದರ್ಭದಲ್ಲಿ ಈ ನಂಬರ್​ಗಳ ಅವಕಶ್ಯತೆ ಇರುತ್ತದೆ. ಈ ನಿಟ್ಟಿನಲ್ಲಿ ಹೊಸವರ್ಷದಿಂದ ಯಾವೆಲ್ಲಾ ಟ್ರೈನ್​ಗಳ ನಂಬರ್​ ಬದಲಾಗಿದೆ ಎಂಬುದರ ವಿವರ ಇಲ್ಲಿದೆ.  ವಿವಿಧ ಮಾರ್ಗಗಳಲ್ಲಿ ಸಂಚರಿಸುವ ಈ ರೈಲುಗಳ ಹೊಸ ಸಂಖ್ಯೆಗಳು ಫೆಬ್ರವರಿ 2026 ರಿಂದ ಜಾರಿಗೆ ಬರಲಿವೆ ಎಂದು ನೈರುತ್ಯ ರೈಲ್ವೆ ಇಲಾಖೆ (South Western Railway) ತನ್ನ ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದೆ. 

South Western Railway news timings

South Western Railway
South Western Railway

 ಶಿವಮೊಗ್ಗದ ಪ್ರಸಿದ್ದ ರೆಸಾರ್ಟ್​ಮಾಲೀಕರ ಕಾರು ಡ್ರೈವರ್​​ನ್ನು ಅಡ್ಡಗಟ್ಟಿ ದರೋಡೆ, ಹಲ್ಲೆ!

  • ಬೆಳಗಾವಿ ಮತ್ತು ಮೈಸೂರು ನಡುವೆ ನಿತ್ಯ ಸಂಚರಿಸುವ 17325 ಸಂಖ್ಯೆಯ ವಿಶ್ವಮಾನವ ದೈನಂದಿನ ಎಕ್ಸ್‌ಪ್ರೆಸ್ ರೈಲು ಫೆಬ್ರವರಿ 20, 2026 ರಿಂದ 20675 ಎಂಬ ಹೊಸ ಸಂಖ್ಯೆಯೊಂದಿಗೆ ಸಂಚರಿಸಲಿದೆ.
  • ಮೈಸೂರಿನಿಂದ ಬೆಳಗಾವಿ ಕಡೆಗೆ ಹೊರಡುವ 17326 ಸಂಖ್ಯೆಯ ವಿಶ್ವಮಾನವ ಎಕ್ಸ್‌ಪ್ರೆಸ್ ರೈಲು ಫೆಬ್ರವರಿ 19, 2026 ರಿಂದ 20676 ಸಂಖ್ಯೆಯಾಗಿ ಬದಲಾಗಲಿದೆ. 
  • ಗಾಂಧಿಧಾಮ ಮತ್ತು ಕೆಎಸ್ಆರ್ ಬೆಂಗಳೂರು ನಡುವಿನ ವಾರಕ್ಕೊಮ್ಮೆ ಸಂಚರಿಸುವ 16505 ಸಂಖ್ಯೆಯ ರೈಲು ಫೆಬ್ರವರಿ 24, 2026 ರಿಂದ 20685 ಸಂಖ್ಯೆಯನ್ನು ಪಡೆಯಲಿದೆ.
  • ಬೆಂಗಳೂರಿನಿಂದ ಗಾಂಧಿಧಾಮಕ್ಕೆ ಹೋಗುವ 16506 ಸಂಖ್ಯೆಯ ವಾರದ ಎಕ್ಸ್‌ಪ್ರೆಸ್ ಫೆಬ್ರವರಿ 21, 2026 ರಿಂದ 20686 ಸಂಖ್ಯೆಯ ಅಡಿಯಲ್ಲಿ ಕಾರ್ಯಾಚರಣೆ ನಡೆಸಲಿದೆ.
  • ಜೋಧಪುರ ಮತ್ತು ಬೆಂಗಳೂರು ನಡುವೆ ವಾರಕ್ಕೆ ಎರಡು ಬಾರಿ ಓಡಾಡುವ 16507 ಸಂಖ್ಯೆಯ ರೈಲು ಫೆಬ್ರವರಿ 26, 2026 ರಿಂದ 20693 ಸಂಖ್ಯೆ ಹೊಂದಲಿದೆ.
  • ಕೆಎಸ್ಆರ್ ಬೆಂಗಳೂರಿನಿಂದ ಜೋಧಪುರಕ್ಕೆ ತೆರಳುವ 16508 ಸಂಖ್ಯೆಯ ರೈಲು ಫೆಬ್ರವರಿ 23, 2026 ರಿಂದ 20694 ಎಂಬ ಹೊಸ ಸಂಖ್ಯೆಯೊಂದಿಗೆ ಕಾರ್ಯನಿರ್ವಹಿಸಲಿದೆ.
South Western Railway
South Western Railway

ಇನ್ಮುಂದೆ ಸೂಪರ್​ ಫಾಸ್ಟ್ ಆಗಿ ಓಡಲಿವೆ ಶಿವಮೊಗ್ಗ ಟ್ರೈನ್ಸ್! ಬೆಂಗಳೂರು, ಯಶವಂತಪುರ , ಎಂಜಿಆರ್​ ಚೆನ್ನೈ ಇನ್ನೂ ಹತ್ತಿರ

ಶಿವಮೊಗ್ಗ ಮತ್ತು ಬೆಂಗಳೂರಿನ ನಡುವೆ ಸಂಚರಿಸುವ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲುಗಳ ಸಂಖ್ಯೆಯಲ್ಲೂ ಬದಲಾವಣೆ ಮಾಡಲಾಗಿದೆ. ಯಶವಂತಪುರದಿಂದ ಶಿವಮೊಗ್ಗ ಟೌನ್ ನಡುವೆ ನಿತ್ಯ ಸಂಚರಿಸುವ 16579 ಸಂಖ್ಯೆಯ ದೈನಂದಿನ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲು ಫೆಬ್ರವರಿ 19, 2026 ರಿಂದ 20689 ನಂಬರ್​ನಲ್ಲಿ ಚಲಿಸಲಿದೆ. ಹಾಗೆ, ಶಿವಮೊಗ್ಗ ಟೌನ್‌ನಿಂದ ಯಶವಂತಪುರಕ್ಕೆ ಹಿಂದಿರುಗುವ 16580 ಸಂಖ್ಯೆಯ ಇಂಟರ್‌ಸಿಟಿ ರೈಲು ಫೆಬ್ರವರಿ 20, 2026 ರಿಂದ 20690 ಸಂಖ್ಯೆಯೊಂದಿಗೆ ಸಂಚರಿಸಲಿದೆ. 

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

 ನೈಋತ್ಯ ರೈಲ್ವೆ  ಶಿವಮೊಗ್ಗ ಇಂಟರ್‌ಸಿಟಿ ಸೇರಿದಂತೆ ಹಲವು ರೈಲುಗಳ ಸಂಖ್ಯೆ ಬದಲಾವಣೆ,  South Western Railway New Numbers for Vishwamanav and Shivamogga Intercity Trains

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor