ನಿಮ್ಮದು ಯಾವುದಾದರೂ ಹಳೆ ಅಕೌಂಟ್ ಇದ್ಯಾ!? ಯಾವುದಾದ್ರೂ ಬ್ಯಾಂಕ್​ನಲ್ಲಿ ದುಡ್ಡು ಇಟ್ಟಿದ್ದೀರಾ! ತಿಳ್ಕೊಳ್ಳುವುದು ಹೇಗೆ? ಇಲ್ಲಿದೆ ಮಾಹಿತಿ

ajjimane ganesh

Unclaimed Deposits ಮಲೆನಾಡು ಟುಡೆ ಸುದ್ದಿ, ಅಕ್ಟೋಬರ್ 23 2025 : ಯಾವುದಾದರು ಬ್ಯಾಂಕ್​ನಲ್ಲಿ ನಿಮ್ಮದು ಹಳೆ ಅಕೌಂಟ್​ ಇದೆಯಾ? ಅಕೌಂಟ್​ ಓಪನ್​ ಮಾಡಿ, ಆನಂತರ ಅದು ಮೆರೆತು ಹೋಗಿ, ಈಗ ನನೆಪಾಗ್ತಿದ್ಯಾ? ಹಾಗಾದ್ರೆ ನಿಮ್ಮ ಅಂದಕಾಲತ್ತಿಲ್ಲ್​ ಅಕೌಂಟ್​ಗಳಿರುವ ಹಣವನ್ನು ಮತ್ತೆ ಪಡೆಯುವ ಅವಕಾಶ ಇದೀಗ ಲಭ್ಯವಾಗುತ್ತಿದೆ. ಈ ಸಂಬಂಧ ನೀವು ಮಾಡಬೇಕಾಗಿರುವುದು ಸರಳ ಕೆಲಸ. ಸದ್ಯ ಹಳೆಯ ಅಕೌಂಟ್​ಗಳಲ್ಲಿರುವ ಹಣವನ್ನು ಬಿಡಿಸಿಕೊಳ್ಳುವಂತೆ ಗ್ರಾಹಕರಿಗೆ ಸೂಚಿಸಿದೆ. ಹಾಗೆ ಬ್ಯಾಂಕ್​ಗಳಿಗೂ 10 ವರ್ಷಕ್ಕಿಂತಲೂ ಹಳೆಯ ಅಕೌಂಟ್​ನಲ್ಲಿರುವ ಗ್ರಾಹಕರು ಬಿಡಿಸಿಕೊಳ್ಳದ ಹಣವನ್ನು ಗ್ರಾಹಕರಿಗೆ ತಲುಪಿಸುವಂತೆ ಸೂಚಿಸಿದೆ. ಈ ಸಂಬಂಧ ನಿಮ್ಮ ಹೆಸರಿನಲ್ಲಿ ಅಕೌಂಟ್​ ಇದೆಯಾ ಎಂದು ಚೆಕ್​ ಮಾಡಲು ಆನ್​ಲೈನ್​ ಲಿಂಕ್ ಕೂಡ ಆರ್​ಬಿಐ ಕ್ರಿಯೆಟ್ ಮಾಡಿದೆ. UDGAM ಪೋರ್ಟಲ್​ ಹೆಸರಿನಲ ಜಾಲತಾಣವನ್ನು ಸೃಷ್ಟಿಸಿದೆ. ಇದರಲ್ಲಿ ಓಲ್ಡ್ ಅಕೌಂಟ್ ಹೇಗೆ ಪತ್ತೆ ಮಾಡುವುದು ಎಂಬುದರ ವಿವರ ಇಲ್ಲಿದೆ 

ಸಾಗರ ಬಸ್​ ನಿಲ್ದಾಣದ ಬಳಿ ಬ್ರೇಕ್​ ಫೇಲ್! ಬೈಕ್​ಗಳ ಮೇಲೆ ಹರಿದ ಖಾಸಗಿ ಬಸ್​

- Advertisement -

UDGAM ಪೋರ್ಟಲ್ ಎಂದರೇನು?

UDGAM ಎಂದರೆ  ಬಿಡಿಸಿಕೊಳ್ಳದ ಠೇವಣಿಗಳ ಬಗ್ಗೆ ತಿಳಿದುಕೊಳ್ಳಲು RBI ಅಭಿವೃದ್ಧಿಪಡಿಸಿದ ಆನ್‌ಲೈನ್ ಪೋರ್ಟಲ್ ಆಗಿದೆ. ಇದು ನೋಂದಾಯಿತ ಬಳಕೆದಾರರಿಗೆ ವಿವಿಧ ಬ್ಯಾಂಕುಗಳಲ್ಲಿ ತಮ್ಮ ಅಕೌಂಟ್​ ಇದೆಯಾ ಎಂದು ಪರಿಶೀಲಿಸಲು ಅವಕಾಶ ಮಾಡಿಕೊಡುತ್ತೆ 

ಎಲ್ಲಾ ಬ್ಯಾಂಕುಗಳು UDGAM ಪೋರ್ಟಲ್‌ನ ಭಾಗವಲ್ಲ 

ಮಾರ್ಚ್ 4, 2024 ರ ಹೊತ್ತಿಗೆ, UDGAM ಪೋರ್ಟಲ್‌ನ ಭಾಗವಾಗಿರುವ 30 ಬ್ಯಾಂಕುಗಳಿವೆ ಮತ್ತು ಅವು RBI ನ ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ (DEA) ನಿಧಿಯಲ್ಲಿ ಸುಮಾರು 90% ರಷ್ಟು ಕ್ಲೈಮ್ ಮಾಡದ ಠೇವಣಿಗಳನ್ನು (ಮೌಲ್ಯದ ಪರಿಭಾಷೆಯಲ್ಲಿ) ಒಳಗೊಂಡಿವೆ.

ಈ ಬ್ಯಾಂಕುಗಳ ಪಟ್ಟಿಯು UDGAM ನ ಮುಖಪುಟದಲ್ಲಿ ( https://udgam.rbi.org.in/unclaimed-deposits/#/login ) ಮತ್ತು ಅಕ್ಟೋಬರ್ 5, 2023 ರ RBI ಪತ್ರಿಕಾ ಪ್ರಕಟಣೆಯಲ್ಲಿ ಲಭ್ಯವಿದೆ 

Unclaimed Deposits Camp: Recover Bank Deposits in Shivamogga on Oct 24

ಯಾವ ರೀತಿಯ ಠೇವಣಿಗಳು/ಖಾತೆಗಳು ಇರುತ್ತವೆ

ಆರ್‌ಬಿಐನ ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ (ಡಿಇಎ) ನಿಧಿಯ ಭಾಗವಾಗಿರುವ ಎಲ್ಲಾ ಹಕ್ಕು ಪಡೆಯದ ಠೇವಣಿಗಳು/ಖಾತೆಗಳನ್ನು ಯುಡಿಜಿಎಎಂ ಪೋರ್ಟಲ್‌ನಲ್ಲಿ ಹುಡುಕಬಹುದು.

ಅಡಿಕೆ ಮಾರುಕಟ್ಟೆಗಳಲ್ಲಿ ಅಡಕೆ ರೇಟು ಎಷ್ಟಿದೆ?

ಪರಿಶೀಲಿಸುವುದು ಹೇಗೆ?

ಬಳಕೆದಾರರು ತಮ್ಮ ಹೆಸರು ಮತ್ತು ಮೊಬೈಲ್ ಸಂಖ್ಯೆಯನ್ನು ಒದಗಿಸುವ ಮೂಲಕ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬೇಕಾಗುತ್ತದೆ ಆನಂತರ ವೈಯಕ್ತಿಕ ವಿಭಾಗದಲ್ಲಿ ಹಕ್ಕು ಪಡೆಯದ ಠೇವಣಿಗಳನ್ನು ಹುಡುಕಲು, ಬಳಕೆದಾರರು ಖಾತೆದಾರರ ಹೆಸರು, ಬ್ಯಾಂಕಿನ ಹೆಸರು (ಒಂದು ಅಥವಾ ಹೆಚ್ಚಿನ ಬ್ಯಾಂಕುಗಳನ್ನು ಆಯ್ಕೆ ಮಾಡಬಹುದು) ಮತ್ತು ಐದು ಇನ್‌ಪುಟ್‌ಗಳಲ್ಲಿ ಯಾವುದಾದರೂ ಒಂದು ಅಥವಾ ಹೆಚ್ಚಿನವುಗಳನ್ನು ಒದಗಿಸಬೇಕು, ಅಂದರೆ  PAN, ಡಿಎಲ್​, ಮತದಾರರ ಗುರುತಿನ ಚೀಟಿ ಸಂಖ್ಯೆ, ಪಾಸ್‌ಪೋರ್ಟ್ ಸಂಖ್ಯೆ ಮತ್ತು ಖಾತೆದಾರರ ಜನ್ಮ ದಿನಾಂಕವನ್ನು ಒದಗಿಸಿದರೆ, ನಿಮ್ಮ ಹೆಸರಿನ ಅಕೌಂಟ್​ ಇದೆಯ ಎಂದು ಸರ್ಚ್​ ಇಂಜಿನ್ ಹುಡುಕಿ ಹೇಳುತ್ತದೆ  

Unclaimed Deposits Camp: Recover Bank Deposits in Shivamogga on Oct 24

ಗುರು ರಾಯರ ವಾರ! ಇವತ್ತಿನ ದಿನವಿಶೇಷ! ದಿನಭವಿಷ್ಯ!

ಈ ಮಧ್ಯೆ ಶಿವಮೊಗ್ಗದಲ್ಲಿ ಕೆನರಾ ಬ್ಯಾಂಕ್‌ಗಳಲ್ಲಿ ದೀರ್ಘಕಾಲದಿಂದ ಯಾರೂ ಹಕ್ಕು ಪಡೆಯದೆ ಉಳಿದಿರುವ ಬ್ಯಾಂಕ್ ಠೇವಣಿಗಳು, ವಿಮಾ ಕಂತುಗಳು ಮತ್ತು ಷೇರುಗಳನ್ನು ಅವುಗಳ ನಿಜವಾದ ಮಾಲೀಕರಿಗೆ ಅಥವಾ ಕಾನೂನುಬದ್ಧ ವಾರಸುದಾರರಿಗೆ ಹಸ್ತಾಂತರಿಸುವ ಉದ್ದೇಶದಿಂದ ಅಕ್ಟೋಬರ್ 24 ರಂದು ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಒಂದು ವಿಶೇಷ ಶಿಬಿರವನ್ನು (Unclaimed Deposits) ಆಯೋಜಿಸಿದೆ. 

KSRTC | ಹಬ್ಬಕ್ಕಾಗಿ 1500 ವಿಶೇಷ ಬಸ್‌ ಕಲ್ಪಿಸಿದ ಕೆಎಸ್‌ಆರ್‌ಟಿಸಿ | ಎಲ್ಲಿಗೆಲ್ಲಾ ಹೆಚ್ಚುವರಿ ಸೇವೆ? ಇಲ್ಲಿದೆ ವಿವರ

 ಈ ಕಾರ್ಯಕ್ರಮದ ಬಗ್ಗೆ ಕೆನರಾ ಬ್ಯಾಂಕ್‌ನ ಲೀಡ್ ಬ್ಯಾಂಕ್ ಮ್ಯಾನೇಜರ್ ಅವರು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ. ಶಿಬಿರದಲ್ಲಿ, ಖಾತೆದಾರರು ಅಥವಾ ಅವರ ಕಾನೂನುಬದ್ಧ ವಾರಸುದಾರರು ಬ್ಯಾಂಕಿನಲ್ಲಿ ಸತತ 10 ವರ್ಷಗಳಿಗೂ (10 years) ಹೆಚ್ಚು ಕಾಲ ನಿಷ್ಕ್ರಿಯವಾಗಿರುವ (inactive) ಖಾತೆಗಳಲ್ಲಿನ ಹಣವನ್ನು ಮತ್ತು ಹಕ್ಕು ಸಾಧಿಸದ ಠೇವಣಿಗಳನ್ನು ಕ್ಲೈಮ್ (claim) ಮಾಡಬಹುದಾಗಿದೆ. ಈ ಪ್ರಯತ್ನಕ್ಕೆ ಸಹಕಾರಿಯಾಗಲು, ಬ್ಯಾಂಕಿಂಗ್ ವಲಯ, ವಿಮಾ ವಲಯ, ಹಣಕಾಸು ವಲಯ ಮತ್ತು ಇತರೆ ಕ್ಷೇತ್ರಗಳ ಅಧಿಕಾರಿಗಳು ಶಿಬಿರದಲ್ಲಿ ಭಾಗವಹಿಸಿ, ಹಕ್ಕುದಾರರಿಗೆ ಅಗತ್ಯ ಸಲಹೆ ಮತ್ತು ಮಾರ್ಗದರ್ಶನವನ್ನು ಒದಗಿಸಲಿದ್ದಾರೆ.

Unclaimed Deposits Camp: Recover Bank Deposits in Shivamogga on Oct 24
Unclaimed Deposits Camp: Recover Bank Deposits in Shivamogga on Oct 24

CNC ಮಷಿನ್ ಆಪರೇಟರ್​ & ಪ್ರೋಗ್ರಾಮರ್ ತರಬೇತಿಗೆ ಅರ್ಜಿ ಆಹ್ವಾನ! ಯುವಕರಿಗೆ ಇದು ಉಪಯುಕ್ತ!

ಹಕ್ಕು ಪಡೆಯದ ಮೊತ್ತವನ್ನು ಮರಳಿ ಪಡೆಯಲು ಬಯಸುವವರು ಸೂಕ್ತವಾದ ಗುರುತಿನ ದಾಖಲೆಗಳು (identity documents) ಮತ್ತು ಪುರಾವೆಗಳೊಂದಿಗೆ (proofs) ಈ ಶಿಬಿರದಲ್ಲಿ ಹಾಜರಾಗಬೇಕು. ಶಿಬಿರದಲ್ಲಿ ಭಾಗವಹಿಸಿ ಅಗತ್ಯ ಸಲಹೆಗಳನ್ನು ಪಡೆದುಕೊಳ್ಳುವ ಮೂಲಕ ತಮ್ಮ ಹಕ್ಕು ಪಡೆಯದ ಹಣವನ್ನು ಮರುಪಡೆಯಲು (Unclaimed Deposits) ಈ ಉತ್ತಮ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಕೆನರಾ ಬ್ಯಾಂಕ್‌ನ ಲೀಡ್ ಬ್ಯಾಂಕ್ ಮ್ಯಾನೇಜರ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Announcements
Announcements

Unclaimed Deposits Camp: Recover Bank Deposits in Shivamogga on Oct 24

 

Share This Article
Leave a Comment

Leave a Reply

Your email address will not be published. Required fields are marked *