ದೀಪಾವಳಿ: ಲಕ್ಷ್ಮೀ ಪೂಜೆ! ಕ್ರಮ ಹೇಗೆ! ಸಿದ್ಧತೆ ಯಾವ ರೀತಿ! ಇಲ್ಲಿದೆ ಮಾಹಿತಿ

ajjimane ganesh

Lakshmi Puja ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 15 2025:  ಇನ್ನೇನು ದೀಪಾವಳಿ ಬಂದೆ ಬಿಡ್ತು, ಈಗಾಗಲೇ ನಾಡಿನೆಲ್ಲೆಡೆ ದೀಪಾವಳಿಗಾಗಿ ಸ್ವಚ್ಚತಾ ಕೆಲಸಗಳು ಆರಂಭವಾಗಿವೆ. ಅಂಗಡಿಪೂಜೆಗಾಗಿ ಅಂಗಡಿಯ ಕ್ಲೀನಿಂಗ್ ಕೆಲಸ ಸುಣ್ಣಬಣ್ಣದ ಕೆಲಸಗಳು ಪ್ರಾರಂಭವಾಗಿದೆ. ಲಕ್ಷ್ಮಿ ದೇವಿಯನ್ನು ಬರಮಾಡಿ ಕೊಳ್ಳಲು ಜನರು ತಮ್ಮದೆ ಆದ ರೀತಿಯಲ್ಲಿ ಸಿದ್ಧತೆಗಳನ್ನ ನಡೆಸ್ತಿದ್ದಾರೆ. ಇದರ ನಡುವೆ ಲಕ್ಷ್ಮೀ ಪೂಜೆ ಆಚರಣೆಯ ರೀತಿಗಳು ಕೆಲವೊಮ್ಮೆ ಇದೇ ರೀತಿಯಲ್ಲಿ ಆಚರಿಸಬೇಕಾ! ಅಥವಾ ಆಚರಣೆಗೆ ಅದರದ್ದೆ ಆದ ರೀತಿಗಳಿರುತ್ತಾ ಎನ್ನುವ ಗೊಂದಲಗಳಿರುತ್ತವೆ. ಅಂತಹ ಗೊಂದಲಗಳಿಗೆ ಉತ್ತರ ಈ ಲೇಖನ. 

ಸಂಪತ್ತು,ಸಮೃದ್ಧಿಯನ್ನು ಕರುಣಿಸುವ ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯಲು ಹಬ್ಬದ ಮುಖ್ಯ ದಿನವಾದ ದೀಪಾವಳಿಯಂದು ನಿರ್ದಿಷ್ಟ ವಿಧಿವಿಧಾನಗಳನ್ನು ಅನುಸರಿಸಲಾಗುತ್ತದೆ. ಭಕ್ತಿಗಿಂತ ಆಚರಣೆಯಿಲ್ಲ ಎನ್ನುವ ಮಾತು ಸತ್ಯವಾದರೂ, ಮೊದಲಿನಿಂದಲೂ ಆಚರಿಸಿಕೊಂಡು ಬಂದ ಪದ್ದತಿಗಳನ್ನು ಆಚರಿಸುವ ರೀತಿಗಳನ್ನು ಗಮನಿಸುವುದಾದರೆ, ಲಕ್ಷ್ಮೀಪೂಜೆಯ ಮೊದಲ ಆದ್ಯತೆ ಸ್ವಚ್ಚತೆಯಾಗಿದೆ. 

- Advertisement -
Ultimate Guide to Perfect Lakshmi Puja This Diwali
Ultimate Guide to Perfect Lakshmi Puja This Diwali (Google gemeni Ai photo)

ದೀಪಾವಳಿ ವಿಶೇಷ: ಶಿವಮೊಗ್ಗದ 300ಕ್ಕೂ ಹೆಚ್ಚು ಮಹಿಳಾ ಪೌರಕಾರ್ಮಿಕರಿಗೆ ಎಂ. ಶ್ರೀಕಾಂತ್ ಸೀರೆ ವಿತರಣೆ, ಗೌರವ ಸಮರ್ಪಣೆ

 ತಮ್ಮ ಸುತ್ತಮುತ್ತಲಿನ ಪರಿಸರ ಶುದ್ಧವಾಗಿದ್ದಲ್ಲಿ ಲಕ್ಷ್ಮೀಯು ನೆಲಸುತ್ತಾಳೆ ಎಂಬ ಮಾತಿದೆ. ಆ ಕಾರಣಕ್ಕೆ ಲಕ್ಷ್ಮೀ ಪೂಜೆಯ ಸಂದರ್ಭದಲ್ಲಿ ವಿಶೇಷವಾಗಿ ಸ್ವಚ್ಚತೆಗೆ ಆಧ್ಯತೆ ನೀಡಲಾಗುತ್ತದೆ. ಈ ಕಾರಣಕ್ಕೆ ಇಡೀ ಮನೆ ಅಥವಾ ಪೂಜಾ ಸ್ಥಳವನ್ನು ಸ್ವಚ್ಛಗೊಳಿಸಿ, ಮನೆಯಲ್ಲಿರುವ ಅನಗತ್ಯ ವಸ್ತುಗಳ ರಾಶಿಯನ್ನು ತೆಗೆದು ಸ್ವಚ್ಚ ಮಾಡಲಾಗುತ್ತದೆ. ಅಶುಚಿತ್ವವು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುವುದರಿಂದ, ಪೂಜಾ ಕೋಣೆಯನ್ನು ಶುಚಿಯಾಗಿ ಇಡಬೇಕು.

ಶುಭ ಮುಹೂರ್ತದ ಆಯ್ಕೆ

ಲಕ್ಷ್ಮಿ ಪೂಜೆಯನ್ನು ನೆರವೇರಿಸಲು ಸೂಕ್ತವಾದ ಶುಭ ಸಮಯವನ್ನು ಆರಿಸಿಕೊಳ್ಳಲಾಗುತ್ತದೆ. ಶುಭ ಮುಹೂರ್ತವನ್ನು ನೋಡಿಕೊಂಡು ಆ ಸಂದರ್ಭದಲ್ಲಿಯೇ ಪೂಜೆ ಮಾಡಲಾಗುತ್ತದೆ. ಈ ಸಮಯದಲ್ಲಿ ಪೂಜೆ ಮಾಡುವುದರಿಂದ ಮನೆಯಲ್ಲಿರುವ ಹಳೆಯ ನಕಾರಾತ್ಮಕ ಶಕ್ತಿಯು ದೂರವಾಗಿ ಸಕಾರಾತ್ಮಕತೆಯು ನೆಲೆಸಲು ಸಹಾಯವಾಗುತ್ತದೆ ಎಂಬುದು ನಂಬಿಕೆ 

ಬಾಗಿಲ ಅಲಂಕಾರ

ದೀಪಾವಳಿಯನ್ನು ಆಚರಿಸುವ ಮುನ್ನ ಮನೆಯ ಮುಖ್ಯ ದ್ವಾರವನ್ನು ವಿಶೇಷವಾಗಿ ಸಿಂಗರಿಸಲಾಗುತ್ತದೆ. ದೀಪ , ಮೇಣದ ಬತ್ತಿ, ರಂಗೋಲಿ, ಮಾವಿನ ಎಲೆಗಳ ತೋರಣ ಹಾಗೂ ತುಳಸಿ ಮತ್ತು ಮನಿ ಪ್ಲಾಂಟ್‌ನಂತಹ ಶುಭ ಸಸ್ಯಗಳಿಂದ ಸಿಂಗರಿಸಲಾಗುತ್ತದೆ. ಬಾಗಿಲ ಎರಡೂ ಬದಿಗಳಲ್ಲಿ ‘ಶುಭ ಲಾಭ’ ಎಂದು ಬರೆದು ಸ್ವಸ್ತಿಕ ಚಿಹ್ನೆಯನ್ನ ಹಾಕಲಾಗುತ್ತದೆ.

ತರುಣ್​ ಸುಧೀರ್​ ನಿರ್ಮಾಣದ ಏಳು ಮಲೆ  ಮೂವಿ ರಿಲೀಸ್ ಡೇಟ್ ಫಿಕ್ಸ್

ಬಾಗಿಲ ಬಳಿ ಲಕ್ಷ್ಮಿ ಮಾತೆಯ ಪಾದಗಳನ್ನು ರಚಿಸುವ ಪದ್ದತಿಯು ಇದೆ. ಮತ್ತು ಇದು ಅತ್ಯಂತ ಮಂಗಳಕರ ಎಂದು ಪರಿಗಣಿಸಲಾಗುತ್ತದೆ. ಮುಖ್ಯ ದ್ವಾರದ ಎರಡೂ ಬದಿಯಲ್ಲಿ ಎರಡು ತುಪ್ಪದ ದೀಪಗಳನ್ನು ಹಚ್ಚಿಡುವುದರಿಂದ ಸಕಾರಾತ್ಮಕ ಶಕ್ತಿಯ ನಿರಂತರ ಹರಿವು ಮನೆಯೊಳಗೆ ಇರುತ್ತದೆ ಎಂದೇ ನಂಬಲಾಗುತ್ತದೆ. 

ದೀಪಾವಳಿಯ ಶುಭ ಮುಹೂರ್ತದಲ್ಲಿ ಲಕ್ಷ್ಮಿ ಮಂತ್ರ ಮತ್ತು ಕುಬೇರ ಮಂತ್ರಗಳನ್ನು ಪಠಿಸುವ ಮೂಲಕ ಶ್ರೀ ಯಂತ್ರ ಮತ್ತು ಲಕ್ಷ್ಮಿ ಕುಬೇರ ಯಂತ್ರಕ್ಕೆ ಶಕ್ತಿ ತುಂಬಲು ಸಲಹೆ ನೀಡಲಾಗುತ್ತದೆ.  ಈ ಮಂತ್ರಗಳ ಕಂಪನಗಳು ಭೌತಿಕ ಮತ್ತು ಆಧ್ಯಾತ್ಮಿಕ ಸಮೃದ್ಧಿ ಎರಡನ್ನೂ ಆಕರ್ಷಿಸಲು ನೆರವಾಗುತ್ತವೆ. ಈ ಮಂತ್ರಗಳನ್ನು 108 ಬಾರಿ ಜಪಿಸಬೇಕು.

Ultimate Guide to Perfect Lakshmi Puja This Diwali
Ultimate Guide to Perfect Lakshmi Puja This Diwali (Google gemeni Ai photo)

ಪವಿತ್ರ ವಸ್ತುಗಳ ಬಳಕೆ

ಲಕ್ಷ್ಮಿ ಪೂಜೆಯ ಸಂದರ್ಭದಲ್ಲಿ ಗಣೇಶ, ಕುಬೇರ ಮತ್ತು ಧನ್ವಂತರಿ ದೇವರ ವಿಗ್ರಹದ ಜೊತೆಗೆ ಲಕ್ಷ್ಮಿ ದೇವಿಯ ವಿಗ್ರಹವನ್ನು ಇರಿಸಿ, ದೇವಿಗೆ ತಾಜಾ ಸಿಹಿತಿಂಡಿ, 11 ಕಮಲದ ಹೂವುಗಳು ಮತ್ತು  ಮಂತ್ರಾಕ್ಷತೆಯನ್ನು ಅರ್ಪಿಸಲಾಗುತ್ತದೆ. ಈ ಸಮಯದಲ್ಲಿ ಬೆಳ್ಳಿ ಮತ್ತು ಚಿನ್ನದ ಆಭರಣಗಳನ್ನು ಇಟ್ಟು ಪೂಜಿಸುತ್ತಾರೆ.  ಐದು ಮುಖ್ಯ ಅಂಶಗಳಾದ ಪೃಥ್ವಿ, ಜಲ, ಅಗ್ನಿ, ವಾಯು ಮತ್ತು ಆಕಾಶ ಸಮತೋಲನವನ್ನು ಕಾಪಾಡಲು, ಎಣ್ಣೆಯಲ್ಲಿ 21 ದೀಪಗಳನ್ನು ಮತ್ತು ತುಪ್ಪದಲ್ಲಿ 5 ದೀಪಗಳನ್ನು ಹಚ್ಚಬೇಕು. ಈ ಆಚರಣೆಯು ಶುಕ್ರನ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎನ್ನಲಾಗುತ್ತಾರೆ. 

ಬಿಎಸ್​​ವೈ ನಾಲ್ಕು ಬಾರಿ ಸಿಎಂ ಆದರೂ, ಏರ್‌ಪೋರ್ಟ್ ಸಂತ್ರಸ್ತ ರೈತರ ಸಮಸ್ಯೆಗೆ ಪರಿಹಾರ ಸಿಗದಿರುವುದೇ ವಿಪರ್ಯಾಸ.ಜೆಪಿ ಬರೆಯುತ್ತಾರೆ.

ಮಂತ್ರ ಪಠಣ

ದೀಪಾವಳಿ ರಾತ್ರಿ ನಿರ್ದಿಷ್ಟ ಮಂತ್ರಗಳನ್ನು ಜಪಿಸುವುದರಿಂದ ಲಕ್ಷ್ಮಿ ದೇವಿಯ ದೈವಿಕ ಶಕ್ತಿಯನ್ನು ಆಹ್ವಾನಿಸಲು ಸಾಧ್ಯವಾಗುತ್ತದೆ. ಈ ಮಂತ್ರಗಳನ್ನು 108 ಬಾರಿ ಜಪಿಸಬೇಕು. ಈ ಮಂತ್ರಗಳ ಪಠಣದ ಬಳಿಕ ದೇವಿಯ ಆಶೀರ್ವಾದ ಕೋರಲಾಗುತ್ತದೆ. ಹೀಗೆ ದೀಪಾವಳಿಯಲ್ಲಿ ಲಕ್ಷ್ಮೀಪೂಜೆಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಆಯಾ ಪ್ರದೇಶ, ಸಮುದಾಯ, ಪದ್ದತಿಗಳಿಗೆ ತಕ್ಕಂತೆ ಲಕ್ಷ್ಮೀಪೂಜೆಯ ಆಚರಣೆಯಲ್ಲಿಯು ಭಿನ್ನತೆಗಳು ಇರುತ್ತವೆ.  

Ultimate Guide to Perfect Lakshmi Puja This Diwali

Diwali, Lakshmi Puja, Shubh Muhurat, Goddess Lakshmi, Prosperity, Wealth, Home Cleaning, Entrance Decoration, Shree Yantra, Kuber Mantra, Diwali Mantras, Rituals, Kannada, Shivamogga, ದೀಪಾವಳಿ, ಲಕ್ಷ್ಮಿ ಪೂಜೆ, ಶುಭ ಮುಹೂರ್ತ, ಸಮೃದ್ಧಿ, ಸಂಪತ್ತು, ಮನೆ ಸ್ವಚ್ಛತೆ, ಅಲಂಕಾರ, ಶ್ರೀ ಯಂತ್ರ, ಕುಬೇರ ಮಂತ್ರ, ಆಚರಣೆಗಳು, ಕನ್ನಡ, ಶಿವಮೊಗ್ಗ. Lakshmi Puja 

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Share This Article
Leave a Comment

Leave a Reply

Your email address will not be published. Required fields are marked *