tyavarekoppa tiger and lion safari ಶಿವಮೊಗ್ಗ ನಗರದ ಹೊರವಲಯದಲ್ಲಿರುವ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮಕ್ಕೆ (Tyavarekoppa Tiger and Lion Reserve) ಮಧ್ಯಪ್ರದೇಶದ ಇಂದೋರ್ ನಗರದಿಂದ ಸಿಂಹದ ಮರಿಗಳು ಬರಲಿವೆ. ಪ್ರಾಣಿ ವಿನಿಮಯ ಯೋಜನೆಯ ಅಂಗವಾಗಿ, ಇಂದೋರಿನ ಕಮಲಾ ನೆಹರು ಪ್ರಾಣಿಸಂಗ್ರಹಾಲಯದಿಂದ 2 ವರ್ಷ ವಯಸ್ಸಿನ ಸಿಂಹ-ಸಿಂಹಿಣಿಯ ಜೋಡಿಯನ್ನು ಶಿವಮೊಗ್ಗಕ್ಕೆ ಕರೆತರಲಾಗುತ್ತಿದೆ. ಈ ಬಗ್ಗೆ ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.
tyavarekoppa tiger and lion safari
ಈ ಒಪ್ಪಂದದ ಪ್ರಕಾರ, ಶಿವಮೊಗ್ಗದ ಸಫಾರಿಯಿಂದ ನಾಲ್ಕು ಭಾರತೀಯ ಗೌರ್ (ಕಾಡೆಮ್ಮೆ)ಗಳನ್ನು ಇಂದೋರ್ ಮೃಗಾಲಯಕ್ಕೆ ರವಾನೆ ಮಾಡಲಾಗುವುದು. ಈ ವಿನಿಮಯ ಪ್ರಕ್ರಿಯೆಗೆ ಕೇಂದ್ರೀಯ ಮೃಗಾಲಯ ಪ್ರಾಧಿಕಾರದ (CZA) ಅನುಮತಿ ಲಭಿಸಿದೆ. ಹೀಗೆ ರಾಜ್ಯಗಳ ನಡುವೆ ಪ್ರಾಣಿ ವೈವಿಧ್ಯ ಸಂರಕ್ಷಣೆಗೆ ಅವಕಾಶ ಒದಗಿದೆ.