ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 27 2025 : ಅಡಿಕೆ ಕೊಯಿಲ ವಿಚಾರಕ್ಕೆ ಎರಡು ಕಡೆಯವರು ಗಲಾಟೆ ಮಾಡಿಕೊಡು ಹೊಡೆದಾಡಿ ಪರಸ್ಪರ ಪೊಲೀಸ್ ಕಂಪ್ಲೆಂಟ್ ಕೊಟ್ಟ ಘಟನೆ ಹೊಳೆಹೊನ್ನೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಎರಡು ಎಫ್‌ಐಆರ್ ಗಳು ದಾಖಲಾಗಿವೆ. ಅದರ ಪ್ರಕಾರ, ಭದ್ರಾವತಿ ತಾಲ್ಲೂಕು ಗ್ರಾಮವೊಂದರಲ್ಲಿರುವ ತೋಟವೊಂದಕ್ಕೆ ಸಂಬಂಧಿಸಿದಂತೆ ಎರಡು ಕಡೆಯವರನ ನಡುವೆ ವ್ಯಾಜ್ಯವಿದೆ. ಈ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಕೋರ್ಟ್ ವಿಚಾರಣೆಯು ಸಹ ನಡೆಯುತ್ತಿದೆ. ಇದರ ನಡುವೆ ಅಡಿಕೆ ಕೊಯ್ಲು ಮಾಡುತ್ತಿದ್ದ ಸಂದರ್ಭದಲ್ಲಿ ಇನ್ನೊಂದು ಕಡೆಯುವರು ಬಂದಿದ್ದರಿಂದ ಎರಡು ಕಡೆಯವರ ನಡುವೆ ಗಲಾಟೆಯಾಗಿದ್ದು ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಅಂತಿಮವಾಗಿ ಈ ಸಂಬಂಧ ಪರವಿರೋಧ ದೂರುಗಳು ದಾಖಲಾಗಿದ್ದು ಪೊಲೀಸರು ತನಿಖೆ ನಡೆಸ್ತಿದ್ದಾರೆ.
Two FIRs Filed in Holehonnur Police Station Limits
ಹೊಳೆಹೊನ್ನೂರು, ಅಡಿಕೆ ವಿವಾದ, ತೋಟದ ಜಗಳ, ಕೋರ್ಟ್ ಕೇಸ್, ಪರಸ್ಪರ ದೂರು, ಎಫ್‌ಐಆರ್, ಆಸ್ತಿ ವಿವಾದ, ಪೊಲೀಸ್ ತನಿಖೆ, Holehonnur, Areca Nut, Dispute, Brawl, Fight, Cross Complaint, FIR, Police Investigation, Property
ಇದನ್ನು ಸಹ ಓದಿ ಸ್ವಾತಿ ಪ್ರೇಮ ಪ್ರಕರಣ, ನಿಜಕ್ಕೂ ನಡೆದಿದ್ದೇನು, ಕೊಲೆನಾ.? ಆತ್ಮಹತ್ಯೆನಾ.? ಕಿರುಕುಳನಾ.? ಜೆಪಿ ಬರೆಯುತ್ತಾರೆ
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ, ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook, whatsapp, whatsapp chanel , instagram, youtube, telegram , google business, malenadu today epaper, malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!