ದಕ್ಷಿಣ ಕನ್ನಡ ಜಿಲ್ಲೆ ಮೂಲ್ಕಿಯಲ್ಲಿ ನಿನ್ನೆ ಅಪಘಾತವೊಂದು ಸಂಭವಿಸಿದೆ. ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66ರ ಬಪ್ಪನಾಡು ಮೂಲ್ಕಿ ಸೇತುವೆ ಮೇಲೆ ಸಂಭವಿಸಿದ ಆಕ್ಸಿಡೆಂಟ್ನಲ್ಲಿ ತೀರ್ಥಹಳ್ಳಿ ಮೂಲದ ಇಬ್ಬರು ಸಾವನ್ನಪ್ಪಿದ್ದಾರೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಕೋಳಿ ಕಾಲುಗುಡ್ಡೆ ನಿವಾಸಿಗಳಾದ ಅಕ್ಬರ್ ಬಾಷಾ (60), ಅವರ ಪತ್ನಿ ಖತೀಜಾಬಿ (46) ಮೃತ ದುರ್ದೈವಿಗಳು.
READ | powercut | ಶಿವಮೊಗ್ಗ ನಾಗರಿಕರ ಗಮನಕ್ಕೆ ಮಾರ್ಚ್ 9 ಕ್ಕೆ ಈ ಭಾಗಗಳಲ್ಲಿ ಇರೋದಿಲ್ಲ ವಿದ್ಯುತ್
ಪಾಸ್ಪೋರ್ಟ್ ಮಾಡುವ ಸಲುವಾಗಿ ಮಂಗಳೂರಿನ ಪಾಸ್ಪೋರ್ಟ್ ಕಚೇರಿಗೆ ತೆರಳುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ. ಕಚೇರಿಗೆ ತೆರಳುತ್ತಿದ್ದ ಇವರ ಸ್ಕೂಟಿ, ಬ್ಯಾಲೆನ್ಸ್ ತಪ್ಪಿ ಸ್ಕಿಡ್ ಆಗಿದೆ. ಈ ವೇಳೆ ಅಲ್ಲಿಯೆ ಬರುತ್ತಿದ್ದ ಟ್ಯಾಂಕರ್ವೊಂದು ಇವರ ಮೇಲೆ ಹರಿದಿದೆ. ಪರಿಣಾಮ ಸ್ಥಳದಲ್ಲಿಯೇ ಇಬ್ಬರು ಸಾವನ್ನಪ್ಪಿದ್ದಾರೆ. ಘಟನೆ ಸಂಬಂದ ಬೈಕಂಪಾಡಿಯ ಉತ್ತರ ವಲಯದ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
HASHTAGS : #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga #
