tribble raiding ತ್ರಿಬಲ್ ರೈಡಿಂಗ್ ಟ್ರಬಲ್ ಆದೀತು ಜೋಕೆ | ಭಯಾನಕ ವಿಡಿಯೋ ಹಂಚಿಕೊಂಡು ಎಚ್ಚರಿಕೆ ನೀಡಿದ ಪೊಲೀಸರು
tribble raiding ಕೆಲವೊಮ್ಮೆ ನಾವು ಅರ್ಜೆಂಟಿದೆ ಎಂಬ ಕಾರಣದಿಂದ ಒಂದು ಬೈಕ್ನಲ್ಲಿ ಮೂರು ಜನ ಹೋಗುತ್ತಿರುತ್ತೇವೆ. ಇದು ಟ್ರಾಫಿಕ್ ನಿಯಮದ ವಿರುದ್ದವಾಗಿದ್ದರೂ ಸಹ ಅದನ್ನು ನಾವು ಕ್ಯಾರೇ ಮಾಡುವುದಿಲ್ಲ. ಆದರೆ ಕೆಲವೊಮ್ಮೆ ತ್ರಿಬಲ್ ರೈಡಿಂಗ್ ಜೀವಕ್ಕೆ ಅಪಾಯ ತಂದೊಡ್ಡುತ್ತದೆ. ಅದಕ್ಕೆ ನಿದರ್ಶನ ವೆಂಬಂತೆ ಇಲ್ಲಿ ಮೂವರು ಯುವಕರು ಒಂದು ಬೈಕ್ನಲ್ಲಿ ತ್ರಿಬಲ್ ರೈಡಿಂಗ್ ಹೋಗುತ್ತಿದ್ದು, ಬ್ಯಾಲೆನ್ಸ್ ತಪ್ಪಿ ಮೋರಿಗೆ ಬಿದ್ದಿದ್ದಾರೆ.

ಶಿವಮೊಗ್ಗ ಟ್ರಾಫಿಕ್ ಪೊಲಿಸರು ತಮ್ಮ x ಖಾತೆಯಲ್ಲಿ ಪೋಸ್ಟ್ ಮಾಡಿರುವ ಈ ವಿಡಿಯೋದಲ್ಲಿ ಮೂವರು ಯುವಕರು ಒಂದು ಬೈಕ್ನಲ್ಲಿ ಸ್ಪೀಡಾಗಿ ಹೋಗುತ್ತಿರುತ್ತಾರೆ. ಆಗ ಬೈಕ್ನ ಬ್ಯಾಲೆನ್ಸ್ ತಪ್ಪಿ ಇಬ್ಬರು ನೀರಿರುವ ಮೋರಿಗೆ ಬೀಳುತ್ತಾರೆ ಇನ್ನೊಬ್ಬ ಬೈಕ್ನಿಂದ ಹಾರಿ ಬಚಾವಾಗುತ್ತಾನೆ. ಈ ವಿಡಿಯೋವನ್ನು ಹಂಚಿಕೊಂಡ ಪೊಲೀಸರು ‘ತ್ರಿಬಲ್ ರೈಡಿಂಗ್ ಟ್ರಬಲ್ ಆದೀತು ಜೋಕೆ’ ಎಂಬ ಕ್ಯಾಪ್ಷನ್ ಕೊಟ್ಟು ಸಂಚಾರಿ ನಿಯಮಗಳನ್ನು ಪಾಲಿಸದಿದ್ದರೆ ಆಗುವ ಅನಾಹುತಗಳ ಬಗ್ಗೆ ಎಚ್ವರಿಕೆ ನೀಡಿದ್ದಾರೆ.

ತ್ರಿಬಲ್ ರೈಡಿಂಗ್ ಟ್ರಬಲ್ ಆದೀತು ಜೋಕೆ….. pic.twitter.com/phwWaNxiXC
— Shivamogga Traffic Police (@Shimoggatraffic) June 1, 2025