trekking in mudigere ಚಿತ್ರದುರ್ಗದ 5 ಜನ ಹುಡುಗಿಯರು 5 ಜನ ಹುಡುಗರು ಕಾಡಲ್ಲಿ ಮಿಸ್ಸಿಂಗ್ | ನಂತರ ನಡೆದಿದ್ದೇನು
ಚಾರಣ, ಟ್ರಕ್ಕಿಂಗ್, ಜಗತ್ತನ್ನೆ ಒಲ್ಲದ ಮನಸ್ಸಿಗೆ ಏಕಾಂತದ ಜೊತೆಗೆ ಸಾಹಸದ ಅನುಭವ ನೀಡುವ ಹಾಗೂ ಕಾಡು ಮೇಡಿನ ನಿಸರ್ಗದೌತಣ ನೀಡುವ ಆಹ್ಲಾದಕರ ಅನುಭೂತಿ. ಈ ಕಾರಣಕ್ಕೆ ಅವಕಾಶ ಸಿಕ್ಕಾಗೆಲ್ಲಾ, ಸಮಯ ಮಾಡಿಕೊಂಡು ಜನರು ಟ್ರಕ್ಕಿಂಗ್ ಹೊರಟು ಬಿಡುತ್ತಾರೆ. ಎಂತಾರೂ ಆಗಲಿ, ಒಂದು ಕೈ ನೋಡಿಬಿಡುವ , ದಿನ ಸಾಯುವುದು ಇದ್ದಿದ್ದೆ ಎಂದುಕೊಂಡು ಬೆನ್ನಿಗೊಂದು ಬ್ಯಾಗ್ ಹೇರಿಕೊಂಡು ಚಾರಣಕ್ಕೆ ಹೊರಟುಬಿಡುತ್ತಾರೆ. ಆದರೆ ಈ ಹೊತ್ತಲ್ಲಿ ತಾವು ಹೋಗುವ ಪ್ರಯಾಣ ಜೀವನದ ಕೊನೆಯ ಪಯಣ ಆಗಬಹುದು ಎಂದು ಯಾರೂ ಸಹ ನಿರೀಕ್ಷಿಸಿರುವುದಿಲ್ಲ. ಆದಾಗ್ಯು ಕೆಲವೊಮ್ಮೆ ಚಾರಣ ಮರಣದ ಹಾದಿಯನ್ನು ತೋರಿಬಿಡುತ್ತದೆ. ಇದಕ್ಕೆ ಚಿತ್ರದುರ್ಗದ ಘಟನೆಯೊಂದು ಸಾಕ್ಷಿಯಾಗಿದೆ.
trekking in mudigere ಅವರು ಚಿತ್ರದುರ್ಗದ ಮೆಡಿಕಲ್ ಕಾಲೇಜಿನಲ್ಲಿ ಓದುತ್ತಿರುವ ಗೆಳೆಯರು. ಅವರಿಗೊಮ್ಮೆ ಹೀಗೆ ಟ್ರಕ್ಕಿಂಗ್ ಹೋಗುವ ಮನಸ್ಸಾಯಿತು, ಎಲ್ಲರೂ ತೀರ್ಮಾನ ಮಾಡಿ ಒಟ್ಟು 10 ಜನ ಟ್ರಕಿಂಗ್ಗೆ ಹೋಗುವುದಾಗಿ ನಿರ್ಧರಿಸಿದ್ದರು. ಹೀಗೆ ನಿರ್ಧರಿಸಿದ್ದವರ ಪೈಕಿ 5 ಜನ ಹುಡುಗಿಯರು 5 ಜನ ಹುಡುಗರು ಇದ್ದರು. ಟ್ರಕಿಂಗ್ ಮಾಡಲು ಆಯ್ಕೆ ಮಾಡಿಕೊಂಡಿದ್ದ ಸ್ಥಳ ಮೂಡಿಗೆರೆ ತಾಲೂಕಿನ ಬಲ್ಲಾಳರಾಯನದುರ್ಗಾ. ಸರಿ ಎಂದು ಎಲ್ಲರೂ ಸಹ ಬ್ಯಾಕ್ ಪ್ಯಾಕ್ ಬೆನ್ನಿಗೆರಿಸಿಕೊಂಡು ಮೂಡಿಗೆರೆ ತಾಲೂಕಿಗೆ ತೆರಳಿದರು. ಅಲ್ಲಿನ ಪರಿಸರ ವಾತಾವರಣ ಸ್ನೇಹಿತರಿಗೆ ಬಹಳಾ ಖುಷಿಯನ್ನು ನೀಡಿತ್ತು. ನಂತರ ಬಲ್ಲಾಳರಾಯನ ದುರ್ಗಾ ಕಡೆಯಿಂದ ಟಿಕೆಟ್ ಬುಕ್ ಮಾಡಿ, ಬಂಡಾಜೆ ಭಾಗದಿಂದ ಟ್ರಕ್ಕಿಂಗ್ ಹೊರಟರು.
trekking in mudigere ಅಲ್ಲಿ ದಟ್ಟವಾದ ಕಾಡು ಬಾನೆತ್ತರಕ್ಕೆ ಬೆಳೆದು ನಿಂತ ಮರಗಳು, ಸೂರ್ಯನ ಕಿರಣವನ್ನು ಅಡ್ಡ ಹಾಕಿ ಭೂಮಿಯ ಮೇಲ್ಮೈಗೆ ನೆರಳಿನ ಕತ್ತಲು ಸೋಕಿಸುತ್ತಿದ್ದ ಕೊಂಬೆಗಳು ಟ್ರಕ್ಕಿಂಗ್ ಹೊರಟವರ ಮನಸ್ಸಿಗೆ ಮುದದ ಜೊತೆ ಆತಂಕವನ್ನು ಮೂಡಿಸಿತ್ತು. ಆದರೂ ದೈರ್ಯ ಮಾಡಿ ಯುವಕರು ಟ್ರೆಕಿಂಗ್ಗೆ ಕಾಡೊಳಗೆ ನುಗ್ಗಿಯೇ ಬಿಟ್ಟರು. ಕಾಡಿನಲ್ಲೆಲ್ಲಾ ಸುತ್ತಾಡಿದರು ಗುಡ್ಡ ಬೆಟ್ಟಗಳನ್ನು ಹತ್ತಿದರು ಪ್ರಕೃತಿಯೊಂದಿಗೆ ಬೆರೆತು ಸಂತೋಷದಿಂದ ಸಮಯ ಕಳೆದರು. ನಂತರ ಸಂಜೆಯ ಸಮಯ ಹತ್ತಿರ ಬಂದಿತು. ವಾಪಸ್ ಬರಲು ಮನಸ್ಸಿಲ್ಲದಿದ್ದರೂ ಕೂಡ ಒಲ್ಲದ ಮನಸ್ಸಿನಿಂದ ಕಾಡಿಗೆ ಬೀಳ್ಗೊಡಲು ಎಲ್ಲರು ಸಿದ್ದರಾದರು. ಆದರೆ ಕಾಡಿನಲ್ಲಿ ಎಲ್ಲಿ ಹುಡುಕಿದರೂ ಕೂಡ ಸ್ನೇಹಿತರಿಗೆ ವಾಪಸ್ ಬರುವ ದಾರಿಯೇ ಕಾಣಲಿಲ್ಲ. ಕಾಡೆಂದರೆ ಹಾಗೆ ಕುತೂಹಲದ ಜೊತೆಗೆ ಕರಾಳ ನಿಗೂಢವನ್ನು ಮುನ್ನೆಲೆಗೆ ತಂದಿಡುತ್ತದೆ. ಯಾವಾಗ ಚಾರಣಿಗೆರಿಗೆ ದಾರಿ ಗೊತ್ತಾಗಲಿಲ್ಲವೋ ಅವರಲ್ಲಿ ಆತಂಕ ಹೆಚ್ಚಾಗಿತ್ತು. ಗೂಗಲ್ ಮ್ಯಾಪ್ ಕೂಡ ಅವರ ಸಹಕಾರಕ್ಕೆ ಬರಲಿಲ್ಲ. ದಾರಿ ತಿಳಿಯದೆ ವಿಧ್ಯಾರ್ಥಿಗಳು ಕಾಡಲ್ಲಿ ಅಲೆದಾಡಿ ಅತಂತ್ರವಾಗಿ ನಿತ್ರಾಣಗೊಂಡರು.

trekking in mudigere ಅತ್ತ ಕಾಡಲ್ಲಿ ಚಾರಣಿಗ ವಿದ್ಯಾರ್ಥಿಗಳು ಭಯದಲ್ಲಿ ನೆರವಿನ ನಿರೀಕ್ಷೆ ಹೊತ್ತು ದೇವರ ನೆನೆಯುತ್ತಿರುವ ಹೊತ್ತಿಗೆ, ಅವರ ಬಾಯಿ ಹರಕೆ ಎನ್ನುವಂತೆ, ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗೆ ಹೇಗೋ ವಿದ್ಯಾರ್ಥಿಗಳು ಇರುವ ಮಾಹಿತಿ ಸಿಕ್ಕಿತು. ಸುಮಾರು 6 ಗಂಟೆಗಳ ಕಾಲ ಮಧ್ಯರಾತ್ರಿ 02 ಗಂಟೆಯ ವರೆಗೇ ಕಾಡಿನಲ್ಲಿ ಶೋಧ ನಡೆಸಿದರು. ಹಾಗೂಹೀಗೂ ಪ್ರಯಾಸ ಪಟ್ಟು ವಿದ್ಯಾರ್ಥಿಗಳನ್ನು ಹುಡುಕಿ ಪತ್ತೆ ಹಚ್ಚಿದರು. ಹಸಿವು ಬಾಯಾರಿಕೆಯಿಂದ ಜೀವದ ಆಸೆಯನ್ನೇ ಬಿಟ್ಟಿದ್ದ ವಿದ್ಯಾರ್ಥಿಗಳಿಗೆ ಇದರಿಂದಾಗಿ ಮರು ಜನ್ಮಸಿಕ್ಕಂತಾಯಿತು. ಕಾಡಲ್ಲಿ ಸಿಕ್ಕ ವಿದ್ಯಾರ್ಥಿಗಳನ್ನು ಪೊಲೀಸರು ಸುರಕ್ಷಿತವಾಗಿ ತಂದು ವಾಪಸ್ ಕಳುಹಿಸಿದ್ದಾರೆ. ಪೊಲೀಸರ ಈ ಕಾರ್ಯಕ್ಕೆ ವಿದ್ಯಾರ್ಥಿಗಳ ಅಭಿನಂದನೆ ತಿಳಿಸಿದರು.