ಬೆಳಕಿಗೆ ಕಂಡ ಮಲೆನಾಡು ಟುಡೆ ಕಾಡಿನ ಶಿಕಾರಿ ವರದಿ | ಕಾಡುಕೋಣದ ಬೇಟೆಗಾರರು ಅರೆಸ್ಟ್!

wild gaur poaching case shivamogga ,chikkamagaluru ,dakshina kannada , udupi, shankaranarayana range , hossagara, matiikai

ಬೆಳಕಿಗೆ ಕಂಡ ಮಲೆನಾಡು ಟುಡೆ ಕಾಡಿನ ಶಿಕಾರಿ ವರದಿ | ಕಾಡುಕೋಣದ ಬೇಟೆಗಾರರು ಅರೆಸ್ಟ್!

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 12, 2025 ‌‌ 

ಶಿವಮೊಗ್ಗದಲ್ಲಿ ಕಾಡುಕೋಣಗಳ ವ್ಯವಸ್ಥಿತ ಶಿಕಾರಿ ನಡೆಯುತ್ತಿದೆ ಎಂಬುದನ್ನ ಮೂರು ವರುಷಗಳ ಹಿಂದೆ ಮಲೆನಾಡು ಟುಡೆ ಕಾಡಿನ ಶಿಕಾರಿ ಹೆಸರಿನ ಅಡಿಯಲ್ಲಿ ಸರಣಿ ವರದಿಯನ್ನು ಓದುಗರ ಮುಂದೆ ಇಟ್ಟಿತ್ತು. ವ್ಯವಸ್ಥಿತ ನೆಟ್‌ವರ್ಕ್‌ನ ಅಡಿಯಲ್ಲಿ ಕಾಡುಕೋಣಗಳನ್ನು ಬೇಟೆಯಾಡಿ, ಅದರ ಮಾಂಸವನ್ನು ಕೇರಳದಲ್ಲಿ ಮಾರುವ ಸಿಸ್ಟಮ್‌ ಹೇಗೆ ರನ್‌ ಆಗುತ್ತಿದೆ. ಅದರ ವಹಿವಾಟು ಎಷ್ಟು ಎಂಬುದನ್ನು ಮಲೆನಾಡು ಟುಡೆ ವರದಿಯಲ್ಲಿ ವಿವರಿಸಿತ್ತು. ಈ ನಿಟ್ಟಿನಲ್ಲಿ ಇದೀಗ ಕಾಡಿನ ಶಿಕಾರಿಯ ಒಂದು ಕೈಯನ್ನು ಅರಣ್ಯ ಇಲಾಖೆ ತಲುಪಿದಂತಿದ್ದು, ಹೊಸನಗರದಲ್ಲಿ ನಡೆದಿದ್ದ ಕಾಡೆಮ್ಮೆ ಶಿಕಾರಿಯ ಪ್ರಕರಣವನ್ನು ಅಧಿಕಾರಿಗಳು ಬೇಧಿಸಿದ್ದಾರೆ. 

ಕಾಡುಕೋಣ ಶಿಕಾರಿ

ಇತ್ತೀಚೆಗೆ ಶಂಕರನಾರಾಯಣ ರೇಂಜ್‌ನ ಅಧಿಕಾರಿಗಳು ಕಾಡಿನಲ್ಲಿ ಬೇಟೆಯಾಡಿದ್ದ ಆರೋಪಿಗಳನ್ನು ಅರೆಸ್ಟ್‌ ಮಾಡಿದ್ದರು. ಈ ಆರೋಪಿಗಳು ಹೊಸನಗರದ ಮತ್ತಿಕೈಯನ್ನಲ್ಲಿ ಕಾಡೆಮ್ಮೆಯನ್ನು ಬೇಟೆಯಾಡಿದ್ದರು ಎಂಬುದು ತನಿಖೆಯಲ್ಲಿ ಗೊತ್ತಾಗಿದೆ. ರೋಡ್‌ ಸೈಡ್‌ನಲ್ಲಿ ಕಾಡುಕೋಣದ ಬೇಟೆ | ಹೊಸನಗರ ಸಂಪೆಕಟ್ಟೆಯಲ್ಲಿ ಅರಣ್ಯ ಇಲಾಖೆಗೆ ಶಾಕ್ರೋಡ್‌ ಸೈಡ್‌ನಲ್ಲಿ ಕಾಡುಕೋಣದ ಬೇಟೆ | ಹೊಸನಗರ ಸಂಪೆಕಟ್ಟೆಯಲ್ಲಿ ಅರಣ್ಯ ಇಲಾಖೆಗೆ ಶಾಕ್

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಸಂಪೆಕಟ್ಟೆ ಬಳಿಯ ಮತ್ತಿಕೈ ಬಳಿಯಲ್ಲಿ ಕಾಡೆಮ್ಮೆಯನ್ನು ಬೇಟೆಯಾಡಿ ಅದರ ಕಳೆಬರವನ್ನು ರಸ್ತೆ ಪಕ್ಕದಲ್ಲಿ ಎಸೆದು ಹೋಗಿದ್ದರು. ಈ ಪ್ರಕರಣ ದೊಡ್ಡಮಟ್ಟದಲ್ಲಿ ಸದ್ದು ಮಾಡಿತ್ತು.  ಈ ಪ್ರಕರಣದ ತನಿಖೆಗಾಗಿ ಸಾಗರ ಡಿಎಫ್‌‌ಓ ಮೋಹನ್ ಕುಮಾರ್ ನೇತೃತ್ವದಲ್ಲಿ ಹೊಸನಗರ ಎಸಿಎಫ್ ಕೆ.ಬಿ. ಮೋಹನ್ ಕುಮಾರ್, ನಗರ ಆರ್‌ಎಫ್‌ಓ ಸಂತೋಷ್ ಮಲ್ಲನಗೌಡ್ರು, ಹೊಸನಗರ ‌ವಲಯ ಅರಣ್ಯಾಧಿಕಾರಿ ಅನಿಲ್ ಕುಮಾರ್ ಹಾಗೂ ಸಿಬ್ಬಂದಿಗಳ ತಂಡವನ್ನು ರಚನೆ ಮಾಡಲಾಗಿತ್ತು. 

ಇದೀಗ ಆರೋಪಿಗಳನ್ನು ಬಂಧಿಸಲಾಗಿದ್ದು ಆರೋಪಿಗಳಾದ ಭಟ್ಕಳ ತಾಲ್ಲೂಕಿನ ಮುಂಡಳ್ಳಿ ಗ್ರಾಮದ ವಾಸಿ ಮಹಮ್ಮದ್ ಅಶ್ರಫ್, ಬೈಂದೂರು ತಾಲ್ಲೂಕಿನ ಶಿರೂರು ಗ್ರಾಮದ ಹಣಬರಕೇರಿ ವಾಸಿ ಆಲಿಬಾಪು ಯಾಸೀನ್ ಹಾಗೂ ಬೈಂದೂರು ತಾಲ್ಲೂಕು ಶಿರೂರು ಗ್ರಾಮದ ಮದ್ದೋಡಿ ರೋಡ್ ಜೋಗೂರ್ ಕ್ರಾಸ್ ವಾಸಿ ವಾಸೀಮ್‌‌ ಅಕ್ರಂ ಇನ್ನಷ್ಟು ಅರಣ್ಯ ಬೇಟೆಯಲ್ಲಿ ಪಾಲ್ಗೊಂಡಿರುವುದು ತನಿಖೆಯಲ್ಲಿ ಹೊರಬಿದ್ದಿದೆ.

ಈ ಆರೋಪಿಗಳು ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕಾಡುಕೋಣಗಳನ್ನು ಬೇಟೆಯಾಡಿ, ಅದರ ಮಾಂಸವನ್ನು ಕೇರಳದಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆಯು ವಿಚಾರಣೆಯ ವೇಳೆಯಲ್ಲಿ ಅರಣ್ಯಾಧಿಕಾರಿಗಳಿಗೆ ಸುಳಿವು ಸಿಕ್ಕಿದೆ. ಒಟ್ಟಾರೆ,  ಹಲವು ವರ್ಷಗಳಿಂದ ಕಣ್ಮರೆಯಲ್ಲಿ ನಡೆಯುತ್ತಿದ್ದ ಕೋಟಿ ಕೋಟಿ ಮೌಲ್ಯ ಈ ಕಾಡಿನ ಶಿಕಾರಿಯ ದಂಧೆ ಇದೀಗ ಕೆಲವು ಆರೋಪಿಗಳ ಬಂಧನದೊಂದಿಗೆ ಮತ್ತೊಂದು ಮಜಲು ಪಡೆದುಕೊಂಡಿದೆ. 

 

SUMMARY  |  wild gaur poaching case shivamogga ,chikkamagaluru ,dakshina kannada , udupi, shankaranarayana range , hossagara, matiikai

KEY WORDS |  wild gaur poaching case shivamogga ,chikkamagaluru ,dakshina kannada , udupi, shankaranarayana range , hossagara, matiikai