traffic rules : ಸಿಗ್ನಲ್​ ಜಂಪ್​  ತಂದ ಅವಾಂತರ | ವಿಡಿಯೋ ಹಂಚಿಕೊಂಡು ಪೊಲೀಸರು ಹೇಳಿದ್ದೇನು

prathapa thirthahalli
Prathapa thirthahalli - content producer

traffic rules : ಟ್ರಾಫಿಕ್​ ಪೊಲೀಸರು ಸಿಗ್ನಲ್​ ನಿಯಮಗಳ ಬಗ್ಗೆ ವಾಹನ ಸವಾರರಿಗೆ ಅರಿವು ಮತ್ತು ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡುತ್ತಿರುತ್ತಾರೆ. ಆದರೆ ಕೆಲವರು ಟ್ರಾಫಿಕ್​ ನಿಯಮಗಳನ್ನು ಮೀರಿ ಸಿಗ್ನಲ್​ ಜಂಪ್​ ಮಾಡುತ್ತಾರೆ. ಆ ರೀತಿ ಸಿಗ್ನಲ್​ ಜಂಪ್​ಗಳು ಕೆಲವೊಮ್ಮೆ ನಮ್ಮ ಜೀವಕ್ಕೆ ಆಪಾಯ ತಂದೊಡ್ಡುತ್ತವೆ. ಅದೇ ರೀತಿ ಶಿವಮೊಗ್ಗದ ಕೆಇಬಿ ಸರ್ಕಲ್​ನಲ್ಲಿ ವಾಹನ ಸವಾರರೊಬ್ಬರು  ಸಿಗ್ನಲ್​ ಜಂಪ್​ ಮಾಡಿ ಅಪಘಾತಕ್ಕೀಡಾಗಿದ್ದಾರೆ. ಈ ಕುರಿತು ಶಿವಮೊಗ್ಗ ಟ್ರಾಫಿಕ್​ ಪೊಲೀಸರು ವಿಡಿಯೋ ಹಂಚಿಕೊಂಡು ಜಾಗೃತಿ ಮೂಡಿಸಿದ್ದಾರೆ.

traffic rules : ವಿಡಿಯೋದಲ್ಲಿ ಏನಿದೆ

ವಿಡಿಯೋದಲ್ಲಿರುವಂತೆ ಸ್ಕೂಟಿ ಚಾಲಕರೊಬ್ಬರು ಹೋಗುತ್ತಿರುವಾಗ ಬಲಭಾಗದಿಂದ ಸಿಗ್ನಲ್​ ಜಂಪ್​ ಮಾಡಿ ಸ್ಪೀಡಾಗಿ ಬಂದ ಆಟೋಚಾಲಕ ಸ್ಕೂಟಿಗೆ ಡಿಕ್ಕಿ ಹೊಡೆದಿದ್ದಾನೆ. ಇದರಿಂದಾಗಿ ಆಟೋ ಮಗುಚಿ ಬಿದ್ದಿದ್ದು ಬೈಕ್​ ಸವಾರ ಸಹ ರಸ್ತೆಯ ಬದಿಯಲ್ಲಿ ಬಿದ್ದಿದ್ದಾನೆ. ಇದರಿಂದ ಇಬ್ಬರಿಗೂ ಗಾಯಗಳಾಗಿವೆ. ಈ ವಿಡಿಯೋವನ್ನು ಟ್ವೀಟರ್​ನಲ್ಲಿ ಹಂಚಿಕೊಂಡಿರುವ ಟ್ರಾಫಿಕ್​ ಪೊಲೀಸರು ರೆಡ್​ ಲೈಟ್​ ಇರುವುದು ವಾಹನದ ವೇಗ ಜಾಸ್ತಿ ಮಾಡಲು ಅಲ್ಲ ವಾಹನವನ್ನು ನಿಲ್ಲಿಸಲು, ಟ್ರಾಫಿಕ್​ ನಿಯಮಗಳಿಗೆ ಗೌರವ ಕೊಡಿ ಜೀವವನ್ನು ಉಳಿಸಿ ಎಂಬ ಕ್ಯಾಪ್ಷನ್​ನ್ನು ನೀಡಿದ್ದಾರೆ.

Share This Article