total rain details imd / ತೀರ್ಥಹಳ್ಳಿಯಲ್ಲಿ ಹೆಚ್ಚಿದ ಥಂಡಿ/ ಕಳೆದ 24 ಗಂಟೆಯಲ್ಲಿ ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ/ ವಿವರ ಓದಿ

ajjimane ganesh

total rain details imd ವರಾಹಿ ಜಲವಿದ್ಯುತ್ ಯೋಜನೆ: ಜಲಾಶಯಗಳಲ್ಲಿ ಹೆಚ್ಚಿದ ನೀರಿನ ಮಟ್ಟ, ಮಲೆನಾಡಲ್ಲಿ ಉತ್ತಮ ಮಳೆ

ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ (ಕೆಪಿಟಿಸಿಎಲ್) ವರಾಹಿ ಜಲವಿದ್ಯುತ್ ಯೋಜನೆ ವ್ಯಾಪ್ತಿಯಲ್ಲಿ  ಉತ್ತಮ ಮಳೆಯಾಗುತ್ತಿದೆ.  ಮಾಣಿ ಪ್ರದೇಶದಲ್ಲಿ ಕಳೆದ 24 ಗಂಟೆಯಲ್ಲಿ ಇಂದು 36.00 ಮಿ.ಮೀ. ಮಳೆಯಾಗಿದ್ದು,  ಯಡೂರುನಲ್ಲಿ 32.00 ಮಿ.ಮೀ. ಮಳೆ ದಾಖಲಾದರೆ, ಒಟ್ಟು 860.00 ಮಿ.ಮೀ. ಮಳೆಯಾಗಿದೆ. ಹುಲಿಕಲ್ 37.00 ಮಿ.ಮೀ. ಮಳೆ ಕಂಡಿದ್ದು, ಇಲ್ಲಿವರೆಗಿನ ಮಳೆ 1037.00 ಮಿ.ಮೀ.ಗೆ ಏರಿದೆ. ಮಾಸ್ತಿಕಟ್ಟೆಯಲ್ಲಿ ಅತ್ಯಧಿಕ 48.00 ಮಿ.ಮೀ. ಮಳೆಯಾಗಿದ್ದು, ಒಟ್ಟು 951.00 ಮಿ.ಮೀ. ಮಳೆಯಾದಂತಾಗಿದೆ. ಚಕ್ರಾದಲ್ಲಿ 36.00 ಮಿ.ಮೀ. ಮಳೆಯಾದರೆ, ಒಟ್ಟು 863.00 ಮಿ.ಮೀ. ಹಾಗೂ ಸಾವೆಹಕ್ಲು 35.00 ಮಿ.ಮೀ. ಮಳೆ ಪಡೆದು ಒಟ್ಟು 821.00 ಮಿ.ಮೀ.  ಮಳೆ ದಾಖಲಿಸಿದೆ.  

- Advertisement -
malnad dam level today linganamakki dam water level today
linganamakki dam water level today

ಮಳೆಮುನ್ಸೂಚನೆ  

ಈ ದಿನ ರಾಜ್ಯದ ಕರಾವಳಿ & ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಂತ ಮಲೆನಾಡು ಜಿಲ್ಲೆಗಳಿಗೆ ಚದುರಿದಿಂದ ವ್ಯಾಪಕವಾಗಿ ಸಾಧಾರಣ ಮಳೆ ಹಾಗೂ ಅಲ್ಲಲ್ಲಿ ಭಾರಿ ಮಳೆ. ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಹಗುರದಿಂದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ. 

ಮುಂದಿನ 7 ದಿನಗಳ #ಮಳೆ #ಮುನ್ಸೂಚನೆ ಮತ್ತು #ಎಚ್ಚರಿಕೆಗಳು: (ಮೂಲ: IMD) total rain details imd

ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಇಂದು ಜೋರಾದ ಗಾಳಿಯೊಂದಿಗೆ ಚದುರಿದಿಂದ ವ್ಯಾಪಕವಾಗಿ ಸಾಧಾರಣ ಹಾಗೂ ಅಲ್ಲಲ್ಲಿ ಭಾರಿ ಮಳೆ, ಜೂನ್ 23 ರಿಂದ ಅಲ್ಲಲ್ಲಿ ಭಾರಿ ಮಳೆ. ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಲಾಗಿದೆ. 

total rain details imd
total rain details imd

ಇನ್ನೂ ಮಳೆಯಿಂದಾಗಿ ತೀರ್ಥಹಳ್ಳಿಯಲ್ಲಿ ರಾಜ್ಯದಲ್ಲಿ ಅತ್ಯಂತ ಕಡಿಮೆ ತಾಪಮಾನ ದಾಖಲಾಗಿದ್ದು ಕನಿಷ್ಟ ತಾಪಮಾನ 13 ಡಿಗ್ರಿ ಸೆಲ್ಸಿಯಸ್​ಗೆ ಇಳಿದಿದೆ. ಕಳೆದ 24 ಗಂಟೆಯಲ್ಲಿ ಉತ್ತರ ಕನ್ನಡದಲ್ಲಿ ಹೆಚ್ಚು ಮಳೆಯಾಗಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟಾರೆ ಸರಾಸರಿ ಆರು ಮಿಲೀಮೀಟರ್ ಮಳೆಯಾಗಿದೆ. ಕಳೆದ ಜೂನ್ ಒಂದರಿಂದ ಇಲ್ಲಿಯವರೆಗೂ  109 ಎಂಎಂ ವಾಡಿಕೆ ಮಳೆಯಾಗಬೇಕಿದ್ದು, 119 ಎಂಎಂ ರಷ್ಟು ಮಳೆಯಾಗಿದೆ. 

total rain details imd

 

Share This Article
Leave a Comment

Leave a Reply

Your email address will not be published. Required fields are marked *