today short news shivamogga ಸಾರ್ವಜನಿಕ ಸ್ಥಳಗಳಲ್ಲಿ ರೀಲ್ಸ್, ಯುವಕನ ಮೇಲೆ ಬಿತ್ತು ಕೇಸ್
ತೀರ್ಥಹಳ್ಳಿ ತುಂಗಾ ಸೇತುವೆಯ ಮೇಲೆ ರೀಲ್ಸ್ ಮಾಡಿದ್ದ ಯುವಕನ ಮೇಲೆ ಪೊಲೀಸರು ಸಣ್ಣದೊಂದು ಕೇಸ್ ದಾಖಲಿಸಿದ್ದಾರೆ.
ಈ ಹಿಂದೆ ತೀರ್ಥಹಳ್ಳಿಯ ಯುವಕನೊಬ್ಬ ಹಲವು ಯುವಕರೊಂದಿಗೆ ತೀರ್ಥಹಳ್ಳಿ ತುಂಗಾ ಸೇತುವೆಯೊಂದರ ಮೇಲೆ ರೀಲ್ಸ್ ಮಾಡಿ ಅದನ್ನು ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದ. ಇದರಿಂದ ಸಾರ್ವಜಕರಿಗೆ ಕಿರಿಕಿರಿ ಉಂಟಾದ ಹಿನ್ನೆಲೆ ತೀರ್ಥಹಳ್ಳಿ ಇನ್ಸ್‌ಪೆಕ್ಟರ್ ಸುಷ್ಮಾ ಅವರು, ರೀಲ್ಸ್ ಮಾಡಿದ ಯುವಕನನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ, ಯುವಕನಿಗೆ ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಅಶಿಸ್ತು ತೋರದಂತೆ ಖಡಕ್ ಎಚ್ಚರಿಕೆ ನೀಡಿ ಸಣ್ಣದೊಂದು ಕೇಸ್ ದಾಖಲಿಸಿ ಕಳುಹಿಸಿದ್ದಾರೆ.
today short news shivamogga ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ತೀರ್ಥಹಳ್ಳಿಯ ಇಬ್ಬರು ವಿದ್ಯಾರ್ಥಿನಿಯರು
ಜೂನ್ 28 ರಿಂದ ಜುಲೈ 01 ರ ವರೆಗೆ ಹರಿದ್ವಾರದಲ್ಲಿ ನಡೆಯುವ ರಾಷ್ಟ್ರ ಮಟ್ಟದ ಕಬ್ಬಡಿ ಪಂದ್ಯಾವಳಿಗೆ ತೀರ್ಥಹಳ್ಳಿಯ ವಾಗ್ದೇವಿ ಶಿಕ್ಷಣ ಸಂಸ್ಥೆಯ ಇಬ್ಬರು ವಿದ್ಯಾರ್ಥಿನಿಯರು ಆಯ್ಕೆಯಾಗಿದ್ದಾರೆ .

ವಾಗ್ದೇವಿ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯರಾದ ಅಮೂಲ್ಯ ಕೆ.ಪಿ ಹಾಗೂ ಶ್ರಾವ್ಯ ಹೆಚ್ ಎಂಬ ಇಬ್ಬರು ವಿದ್ಯಾರ್ಥಿನಿಯರು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದು, ಈ ಹಿಂದೆ ಜೂನ್ 14 ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ಅಮೆಚೂರ್ ಕಬ್ಬಡಿ ಅಸೋಸಿಯೇಷನ್ ಆಯೋಜಿಸಿದ ರಾಜ್ಯ ಮಟ್ಟದ ಕಬಡ್ಡಿ ಭಾಗವಹಿಸಿದ್ದರು. ಅಲ್ಲಿ ಉತ್ತಮ ಪ್ರದರ್ಶನ ತೋರಿದ್ದು, ಈಗ ರಾಷ್ಟ್ರ ಮಟ್ಟದ ಕಬ್ಬಡ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ.