ಭದ್ರಾವತಿಯಲ್ಲಿ ಬಸ್ ಡಿಕ್ಕಿಗೆ ಬೈಕ್ ಸವಾರ ಸ್ಥಳದಲ್ಲೇ ಸಾವು! ಅಪಘಾತ, ಗಲಾಟೆ, ಅಳಿಯನ ಕಿರಿಕಿರಿ! ಇವತ್ತಿನ ಶಾರ್ಟ್ ನ್ಯೂಸ್​

ajjimane ganesh

ಡಿಸೆಂಬರ್,04, 2025 : ಮಲೆನಾಡು ಟುಡೆ ಸುದ್ದಿ :ಶಿವಮೊಗ್ಗ ಜಿಲ್ಲೆಯ ವಿವಿದೆಡೆ ನಡೆದ ಘಟನೆಗಳು ಇವತ್ತಿನ ಸಂಕ್ಷಿಪ್ತ ವರದಿಯಲ್ಲಿ   

today shivamogga news
today shivamogga news

ಕ್ರಿಕೆಟ್: ಸಾಗರದ ವಿರಾಟ್ ಆರ್. ಗಣ್ಯಗೆ ಕರ್ನಾಟಕ ತಂಡದಲ್ಲಿ ಸ್ಥಾನ

ತುಂಗಾನಗರದಲ್ಲಿ ಬೈಕ್ ಮತ್ತು ಕಾರ್ ಅಪಘಾತ

ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿದೆ. ಅಪಘಾತವಾದ ಕೂಡಲೇ ಕಾರು ಚಾಲಕ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿಹೋಗಿದ್ದಾನೆ. ಈ ಹಿನ್ನೆಲೆಯಲ್ಲಿ ಸ್ತಳಕ್ಕೆ ಬಂದ ಇಆರ್‌ವಿ ಸಿಬ್ಬಂದಿ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿದ್ದು, ಅಪಘಾತಕ್ಕೆ ಒಳಗಾದ ವಾಹನಗಳನ್ನು ತುಂಗಾನಗರ ಪೊಲೀಸ್ ಠಾಣೆಗೆ ರವಾನಿಸಿದರು.

ಪತ್ನಿಗೆ ತೊಂದರೆ ನೀಡಿದ ಪತಿ/today shivamogga news

ಶಿವಮೊಗ್ಗದ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ  ಮಹಿಳೆಯೊಬ್ಬರು ತನ್ನ ಪತಿಯು ಮನೆಗೆ ಹೋಗಲು ಬಿಡದೆ ತೊಂದರೆ ನೀಡುತ್ತಿರುವುದಾಗಿ 112ಕ್ಕೆ ಕರೆ ಮಾಡಿ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಕೇಸ್ ಅಟೆಂಡ್ ಮಾಡಿದ ಇಆರ್‌ವಿ ಸಿಬ್ಬಂದಿ, ಸಂತ್ರಸ್ತ ಮಹಿಳೆಯನ್ನು ಪೊಲೀಸ್​ ಠಾಣೆಗೆ ಕರೆತಂದು ದೂರು ನೀಡಲು ಸೂಚಿಸಿದ್ದರು. ಆರೋಪಿತ ಪತಿ ಸ್ಥಳದಲ್ಲಿ ಇರದ ಹಿನ್ನೆಲೆಯಲ್ಲಿ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಹೃದಯಾಘಾತದಿಂದ ಹೊಸನಗರದ ಯುವಕ ಬಲಿ 

ಬಸ್-ಬೈಕ್ ಭೀಕರ ಅಪಘಾತ: ಬೈಕ್ ಸವಾರ ಸ್ಥಳದಲ್ಲೇ ಸಾವು/today shivamogga news

ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬಸ್ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಘಟನೆ ಬೆನ್ನಲ್ಲೆ ಸ್ಥಳೀಯರು 112ಗೆ ದೂರು ನೀಡಿದ್ದರು. ಸ್ಥಳಕ್ಕೆ ತೆರಳಿದ ಪೊಲೀಸ್ ಸಿಬ್ಬಂದಿ ಮೃತದೇಹವನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕಳುಹಿಸಿಕೊಟ್ಟರು. ಅಪಘಾತಕ್ಕೆ ಕಾರಣವಾದ ವಾಹನಗಳನ್ನು ಹೆಚ್ಚಿನ ತನಿಖೆಗಾಗಿ ಠಾಣೆಗೆ ಒಪ್ಪಿಸಲಾಗಿದೆ.

ಜಯನಗರದಲ್ಲಿ ಸೊಸೆಯಿಂದ ಅತ್ತೆಗೆ ಕಿರಿಕಿರಿ/today shivamogga news

ಜಯನಗರ ಠಾಣಾ ವ್ಯಾಪ್ತಿಯಲ್ಲಿ ಸೊಸೆಯೊಬ್ಬರು ಮನೆಯಲ್ಲಿ ಗಲಾಟೆ ಮಾಡಿ ತೊಂದರೆ ನೀಡುತ್ತಿರುವುದಾಗಿ ಅತ್ತೆಯೊಬ್ಬರು 112ಕ್ಕೆ ಕರೆ ಮಾಡಿ ತಿಳಿಸಿದರು. ಸ್ಥಳಕ್ಕೆ ಧಾವಿಸಿದ ಇಆರ್‌ವಿ ಸಿಬ್ಬಂದಿ ಸೊಸೆಗೆತಿಳುವಳಿಕೆ ಮತ್ತು ಬುದ್ಧಿವಾದ ಹೇಳಿದರು ಮುಂದೆಯೂ ಇದೇ ರೀತಿ ತೊಂದರೆ ನೀಡಿದರೆ ನೇರವಾಗಿ ಠಾಣೆಗೆ ಬಂದು ದೂರು ನೀಡುವಂತೆ ಸಿಬ್ಬಂದಿ ಸಲಹೆ ನೀಡಿ ಕೇಸ್ ಇತ್ಯರ್ಥ ಮಾಡಿದ್ದಾರೆ. 

today shivamogga news
today shivamogga news

ಸಿದ್ದಾಪುರ-ಹೊಸನಗರ ಹೆದ್ದಾರಿಯಲ್ಲಿ ಹೊಳೆಗೆ ಪಲ್ಟಿಯಾದ ಇಂಧನ ಲಾರಿ!

ವಿವಾಹ ಸಮಾರಂಭದಲ್ಲಿ ಸ್ಪೀಕರ್ ಸದ್ದು

ನ್ಯೂಟೌನ್​ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮದುವೆ ಸಮಾರಂಭದೊಳಗೆ ಜೋರಾಗಿ ಸ್ಪೀಕರ್ ಹಾಕಿ ತೊಂದರೆ ನೀಡುತ್ತಿರುವುದಾಗಿ ಸ್ಥಳೀಯರು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿದ ಇಆರ್‌ವಿ ಸಿಬ್ಬಂದಿ. ಮದುವೆ ಮನೆಯವರಿಗೆ ತಿಳುವಳಿಕೆ ಹೇಳಿಕ ಸ್ಪೀಕರ್‌ನ ಶಬ್ದವನ್ನು ಕಡಿಮೆ ಮಾಡಿಸಿದರು.  

ಮಲೆನಾಡಲ್ಲಿ ಅಡಿಕೆ ದರ ಏರಿಳಿತ: ಶಿವಮೊಗ್ಗ, ಸಾಗರ ಸೇರಿದಂತೆ ಹಲವು APMC ಅಡಕೆ ರೇಟ್‌ಗಳು ಇಲ್ಲಿವೆ

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Shivamogga news live, Shimoga news kannada live, ಶಿವಮೊಗ್ಗ ನ್ಯೂಸ್ today, Shimoga news kannada epaper today, ಶಿವಮೊಗ್ಗ ನ್ಯೂಸ್ yesterday, Malenadu news live, ಮಲೆನಾಡು ಸುದ್ದಿ, ಶಿವಮೊಗ್ಗ ಜಿಲ್ಲಾ ವಾರ್ತೆ, ಶಿವಮೊಗ್ಗ 112 ವರದಿ ಬಸ್-ಬೈಕ್ ಅಪಘಾತದಲ್ಲಿ ಸಾವು, ಕೌಟುಂಬಿಕ ಗಲಾಟೆ ಮತ್ತು ಸ್ಪೀಕರ್‌ ಸದ್ದು today shivamogga news live short news Shivamogga 112 Report Bus-Bike Accident Death, Domestic Trouble, and Loud Speaker Complaint 
Share This Article