ಶಿವಮೊಗ್ಗ: ಮಲೆನಾಡು ಟುಡೆ ಸುದ್ದಿ: ಇಂದು ಶುಕ್ರವಾರ, ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ ರಾತ್ರಿ 3.01 ರವರೆಗೆ ಬಹುಳ ಪಾಡ್ಯಮಿ ತಿಥಿ ಇದೆ. ರೋಹಿಣಿ ನಕ್ಷತ್ರವು ಮಧ್ಯಾಹ್ನ 1.33 ರವರೆಗೆ ಇದ್ದು, ತದನಂತರ ಮೃಗಶಿರಾ ನಕ್ಷತ್ರ ಇರುತ್ತದೆ. ರಾಹುಕಾಲ (Today Panchanga Rahu Kala)ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 12.00 ರವರೆಗೆ ಇರಲಿದೆ. ಯಮಗಂಡ ಕಾಲ ಮಧ್ಯಾಹ್ನ 3.00 ರಿಂದ ಸಂಜೆ 4.30 ರವರೆಗೆ ಇರಲಿದೆ. ಅಮೃತ ಘಳಿಗೆ ಬೆಳಿಗ್ಗೆ 10.34 ರಿಂದ ಮಧ್ಯಾಹ್ನ 12.03 ರವರೆಗೆ, ತದನಂತರ ರಾತ್ರಿ 3.42 ರಿಂದ 5.14 ರವರೆಗೆ ಕಾಣಬಹುದು. ಇನ್ನೂ ಇಂದಿನ ಗ್ರಹಗತಿಗಳ ಆಧಾರದ ಮೇಲೆ ದ್ವಾದಶ ರಾಶಿಗಳ ಫಲ ಹೀಗಿದೆ.

ಇವತ್ತಿನ ದಿನಭವಿಷ್ಯ/Today Panchanga Rahu Kala
ಮೇಷ : ಆರಂಭಿಸಿದ ಕೆಲಸ ಕಾರ್ಯ ವಿಳಂಬವಾಗುವ ಸಾಧ್ಯತೆ ಇದೆ. ಆರ್ಥಿಕ ಮುಗ್ಗಟ್ಟು, ಕಿರಿಕಿರಿ. ಸಂಬಂಧಿಕರೊಂದಿಗೆ ಅಕಾರಣವಾಗಿ ಭಿನ್ನಾಭಿಪ್ರಾಯ ಉಂಟಾಗಬಹುದು. ವೃತ್ತಿ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ನಿರುತ್ಸಾಹದ ವಾತಾವರಣ. ಉದ್ಯೋಗದಲ್ಲಿ ಆಲಸ್ಯ ಕಾಡಲಿದೆ.
ವೃಷಭ : ಹೊಸಬರ ಪರಿಚಯವಾಗಲಿದ್ದು, ಆಪ್ತರೊಂದಿಗೆ ಮನರಂಜನೆಯಲ್ಲಿ ದಿನಕಳೆಯುವಿರಿ, ಹೊಸ ಅವಕಾಶ ಒಂದು ದೊರೆಯಲಿದೆ. ಒಡಹುಟ್ಟಿದವರೊಂದಿಗಿನ ಮನಸ್ತಾಪ ಶಮನವಾಗಲಿವೆ. ಉದ್ಯೋಗ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ಎದುರಾಗಿದ್ದ ಸಮಸ್ಯೆ ದೂರವಾಗುತ್ತವೆ.
ಪತ್ನಿ ವಿಚಾರದಲ್ಲಿ ಪತಿರಾಯನಿಗೆ 2 ವರ್ಷ ಶಿಕ್ಷೆ! ಸಾಗರ ಕೋರ್ಟ್ನಲ್ಲಿ ತೀರ್ಪು
ಮಿಥುನ : ಪ್ರಯಾಣದ ದಿನ, ಅಧಿಕ ಶ್ರಮದ ದಿನ, ಭಿನ್ನಾಭಿಪ್ರಾಯ ಎದುರಾಗಬಹುದು. ಅನಿರೀಕ್ಷಿತ ಪ್ರವಾಸ, ಸಾಲಕ್ಕಾಗಿ ಓಡಾಟ. ಕೈಗೊಂಡ ಕಾರ್ಯಗಳಿಗೆ ಅಡ್ಡಿ ಆತಂಕ.. ಉದ್ಯೋಗ ಮತ್ತು ವ್ಯಾಪಾರದಲ್ಲಿ ಗೊಂದಲದ ವಾತಾವರಣ ಇರಲಿದೆ.
ಕರ್ಕಾಟಕ : ಸ್ನೇಹಿತರೊಂದಿಗೆ ಉತ್ತಮ ಬಾಂಧವ್ಯ. ಔತಣಕೂಟ ಮತ್ತು ಮನರಂಜನೆಯಲ್ಲಿ ಭಾಗವಹಿಸುವಿರಿ. ಕೆಲಸದಲ್ಲಿ ಯಶಸ್ಸು ದೊರೆಯಲಿದೆ. ಸಮಾಜದಲ್ಲಿ ಗೌರವ ಮತ್ತು ಪ್ರಭಾವ ಹೆಚ್ಚುತ್ತದೆ. ಧಾರ್ಮಿಕ ಸ್ಥಳಗಳಿಗೆ ಭೇಟಿ. ವಾಹನ ಯೋಗ. ಉದ್ಯೋಗ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ಹೊಸ ಹುರುಪು ಕಂಡುಬರಲಿದೆ.

ಸಿಂಹ : ಹೊಸ ಆರಂಭ. ಶುಭ ಕಾರ್ಯಗ. ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಸ್ನೇಹಿತರ ನೆರವು ಲಭ್ಯವಾಗಲಿದೆ. ಉದ್ಯೋಗ ಪ್ರಾಪ್ತಿ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಅನುಕೂಲಕರ ಪರಿಸ್ಥಿತಿ
ಕನ್ಯಾ : ಸಾಲ ತೀರಿಸುವ ಸಮಯ. ಓಡಾಟ ಜಾಸ್ತಿ. ಮನೆಯಲ್ಲಿ ಮತ್ತು ಹೊರಗೆ ಕೆಲಸದ ಒತ್ತಡ ಹೆಚ್ಚು. ಸ್ನೇಹಿತರೊಂದಿಗೆ ಕಲಹ. ವ್ಯಾಪಾರದಲ್ಲಿ ಹೊಸ ಯೋಚನೆ, ದಿನ ಸಾಧಾರಣ, ಉದ್ಯೋಗದಲ್ಲಿ ಬದಲಾವಣೆ ಚಿಂತನೆ
ತುಲಾ : ಕುಟುಂಬದವರೊಂದಿಗೆ ಮತ್ತು ಬಂಧುಗಳೊಂದಿಗೆ ಜಗಳ. ಆರಂಭಿಸಿದ ಕೆಲಸ ಸಾಧನೆಗೆ ಸಮಸ್ಯೆಯಾಗುವ ಆತಂಕ. ಆರೋಗ್ಯ ಸಂಬಂಧಿ ಸಮಸ್ಯೆ ಕಾಡಬಹುದು. ದೂರ ಪ್ರಯಾಣ. ಮನೆಯಲ್ಲೂ ಹೊರಗೂ ಸಮಸ್ಯೆ ಎದುರಾಗಲಿವೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಸವಾಲುಗಳನ್ನು ಎದುರಿಸಬೇಕಾಗಬಹುದು.
ಶಿವಮೊಗ್ಗ ರವೀಂದ್ರ ನಗರ ಕೇಸ್: ತೀರ್ಥಹಳ್ಳಿ ತುಂಗಾ ಕಾಲೇಜಿನಲ್ಲಿ ಕೆಲಸ ಮಾಡ್ತಿದ್ದವ ಅರೆಸ್ಟ್
ವೃಶ್ಚಿಕ : ಉದ್ಯೋಗಕ್ಕಾಗಿ ಮಾಡುವ ಪ್ರಯತ್ನಗಳು ಸಫಲ ಆಗುತ್ತದೆ . ಹೊಸ ಕೆಲಸ ಕೈಗೊಳ್ಳಲಿದ್ದೀರಿ. ಆಲೋಚನೆಗಳಿಗೆ ಸಹಕಾರ ದೊರೆಯಲಿದೆ. ಸಮಾಜದಲ್ಲಿ ಗೌರವ ಹೆಚ್ಚುತ್ತದೆ. ಆಸ್ತಿ ವಿವಾದ ಒಂದು ಹಂತಕ್ಕೆ ಬರಲಿವೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿನ ಒತ್ತಡ ನಿವಾರಣೆಯಾಗುತ್ತವೆ.

Today Panchanga Rahu Kala
ಧನು: ಇಂದು ಶುಭಯೋಗವಿದೆ. ಸಾಲದ ಒತ್ತಡ. ಆಪ್ತರಿಂದ ಪ್ರಮುಖ ಸಹಕಾರ, ಮದುವೆ ಸಮಾರಂಭದಲ್ಲಿ ಗೌರವ. ಪಂಚಾಯಿತಿ ಮಾತುಕತೆಗಳಲ್ಲಿ ಮಧ್ಯಸ್ಥಿಕೆ. ಕೈಗೊಂಡ ಕೆಲಸ ಯಶಸ್ಸು ಕಾಣುವುದು. ವ್ಯಾಪಾರ ಮತ್ತು ಉದ್ಯೋಗದಲ್ಲಿಂದು ಪ್ರೋತ್ಸಾಹದ ದಿನ
ಮಕರ : ಅಡ್ಡಿ ಆತಂಕ ಎದುರಾಗಬಹುದು. ಸಾಲ ಮಾಡುವ ಪರಿಸ್ಥಿತಿ ಬರಬಹುದು. ಪ್ರಯಾಣದಲ್ಲಿ ಬದಲಾವಣೆ. ದೇವಸ್ಥಾನಗಳಿಗೆ ಭೇಟಿ ಬಂಧುಗಳೊಂದಿಗೆ ತಕರಾರು. ವ್ಯಾಪಾರ ಮತ್ತು ಉದ್ಯೋಗದಲ್ಲಿ ಸಮಸ್ಯೆ ಎದುರಾಗಲಿವೆ.
hosanagara news today ಜೂನ್ 27: ಹೊಸನಗರ ಬಳಿ ಟಿಪ್ಪರ್‌ಗೆ ಕಾರು ಡಿಕ್ಕಿ: ಒಂದೇ ಕುಟುಂಬದ ಮೂವರಿಗೆ ಗಾಯ
ಕುಂಭ : ಸ್ನೇಹಿತರೊಂದಿಗೆ ಮಾತಿನ ಚಕಮಕಿ. ಧಾರ್ಮಿಕ ಚಿಂತನೆ. ಕೆಲಸ ಅರ್ಧದಲ್ಲಿ ಸ್ಥಗಿತಗೊಳ್ಳಬಹುದು. ತಕ್ಕ ಪ್ರತಿಫಲ ದೊರೆಯುವುದು ಕಷ್ಟ. ಸಾಲಕ್ಕಾಗಿ ಪ್ರಯತ್ನ. ವೃತ್ತಿ ಮತ್ತು ಉದ್ಯೋಘದಲ್ಲಿ ಏರಿಳಿತದ ದಿನ
ಮೀನ : ಹೊಸ ಪರಿಚಯ ಹೆಚ್ಚಲಿವೆ. ಆಶ್ಚರ್ಯಕರ ಘಟನೆ.ಉದ್ಯೋಗ ಅವಕಾಶ ದೊರೆಯಲಿವೆ. ಬಾಲ್ಯದ ಗೆಳೆಯರನ್ನು ಭೇಟಿಯಾಗುವ ಯೋಗವಿದೆ. ದೇವಸ್ಥಾನಗಳಿಗೆ ಭೇಟಿ. ಉದ್ಯೋಗ ಮತ್ತು ವ್ಯಾಪಾರದಲ್ಲಿಂದು ವಿಶೇಷ ದಿನ.

ಸೊರಬ : ಕೋಣ ತಿವಿದು ವ್ಯಕ್ತಿ ಸಾವು
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
