ಅಕೇಶಿಯಾ ಕಡಿಯುವ ನೆಪದಲ್ಲಿ ಬಂದು ಶ್ರೀಗಂಧಕ್ಕೆ ಕೊಡಲಿ ಏಟು! ಕದ್ದು ಸಾಗಿಸುವ ಹೊತ್ತಲ್ಲಿ ಆಘಾತ!

ajjimane ganesh

ಶಿವಮೊಗ್ಗ: ಮಲೆನಾಡು ಟುಡೆ ಸುದ್ದಿ: ಸಾಗರ ವಲಯದ ಬರದಲವಳ್ಳಿ ಗ್ರಾಮದ ಸರ್ವೆ ನಂಬರ್ 70 ರಲ್ಲಿ ಅಕ್ರಮವಾಗಿ ಶ್ರೀಗಂಧದ ಮರವನ್ನು ಕಡಿದು ಸಾಗಿಸಲು ಯತ್ನಿಸುತ್ತಿದ್ದ ಆರೋಪಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Malenadu Today

ಕೃಷ್ಣಮೃಗಗಳ ಮೇಲೆ ನಿಗಾ, 3 ದಿಕ್ಕುಗಳಿಗೂ ಶಿವಮೊಗ್ಗದಿಂದ ರೈಲು ಸಂಪರ್ಕ ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್​ನಲ್ಲಿ

ಗ್ರಾಮಸ್ಥರು ನೀಡಿದ ಖಚಿತ ಮಾಹಿತಿಯ ಆಧಾರದ ಮೇಲೆ ಸಾಗರ ವಲಯದ ಆರ್‌ಎಫ್‌ಓ ಅಣ್ಣಪ್ಪ ಮತ್ತು ಉಪ ವಲಯ ಅರಣ್ಯಾಧಿಕಾರಿ ಟಿ.ಪಿ. ನರೇಂದ್ರ ಕುಮಾರ್ ನೇತೃತ್ವದ ತಂಡ ಆರೋಪಿಯನ್ನು ಸೆರೆ ಹಿಡಿದಿದೆ.

ಬಂಧಿತ ಆರೋಪಿಯನ್ನು ಸಾಗರದ ಶಿವಪ್ಪನಾಯಕ ನಗರದ ನಿವಾಸಿ, 56 ವರ್ಷದ ಮುಬಾರಕ್ ಎಂದು ಗುರುತಿಸಲಾಗಿದೆ. 35 ಕೆ.ಜಿ. ತೂಕದ ಶ್ರೀಗಂಧದ ತುಂಡನ್ನು ಕಡಿದು ಸಾಗಿಸಲು ಸಿದ್ಧತೆ ನಡೆಸಿದ್ದ ಈತನನ್ನ  ಗ್ರಾಮಸ್ಥರ ಸಹಾಯದಿಂದ ಅರಣ್ಯ ಮತ್ತು ಪೊಲೀಸ್ ಇಲಾಖೆಯ ಸಿಬ್ಬಂದಿ ಹಿಡಿದಿದ್ದಾರೆ. 

ಸಿಎಂ ಆಗಿ ಸಿದ್ದರಾಮಯ್ಯ ಮುಂದುವರೆಯುವಂತೆ  ಶಿವಮೊಗ್ಗದಲ್ಲಿ 101 ಈಡುಗಾಯಿ ಸೇವೆ: ಯುವಕರಿಂದ ವಿಶೇಷ ಪೂಜೆ

ಇದೇ ವೇಳೆ ಶ್ರೀಗಂಧದ ಮರ ಕಡಿಯಲು ಬಳಸಿದ್ದ ವಸ್ತುಗಳು ಸೇರಿದಂತೆ ಮಾಲು ಸಾಗಿಸಲು ಉಪಯೋಗಿಸಿದ್ದ ಬೈಕ್ ಅನ್ನು ಸಹ ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ 35 ಕೆ.ಜಿ. ಶ್ರೀಗಂಧದ ಬೆಲೆ ₹1.70 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. 

ಶ್ರೀಗಂಧ ಕಳವಿಗೆ ಮೆಗಾ ಸ್ಕೆಚ್​

ಆರೋಪಿ ಮುಬಾರಕ್ ಕೆಲ ದಿನಗಳ ಹಿಂದೆ ಬರದವಳ್ಳಿಗೆ ಬಂದು ಅಕೇಶಿಯಾ ಮರ ಕಡಿಯುವವರ ಜೊತೆ ಕಾರ್ಮಿಕನಾಗಿ ಸೇರಿಕೊಂಡಿದ್ದ.  ಆ ಸಂದರ್ಭದಲ್ಲಿ ಅಲ್ಲಿಯೇ ಇದ್ದ ಗೋಮಾಳದಲ್ಲಿ ಶ್ರೀಗಂಧದ ಮರವೊಂದು ಇರುವುದನ್ನ ಗಮನಿಸಿದ್ದ. ಬುಧವಾರ ಬೆಳಿಗ್ಗೆ ಮರ ಕಡಿಯಲು ಆರಂಭಿಸಿದ್ದಾನೆ. ಆದರೆ ಈ ವಿಚಾರ ಮಧ್ಯಾಹ್ನದ ಹೊತ್ತಿಗೆ ಊರಿನವರಿಗೆ ತಿಳಿದಿದೆ. ತಕ್ಷಣ ಊರಿನವರು ಪೊಲೀಸರಿಗೆ ಅರಣ್ಯ ಸಿಬ್ಬಂಧಿಗೆ ಕರೆ ಮಾಡಿದ್ದಾರೆ. ಅಲ್ಲದೆ ಆರೋಪಿಯನ್ನು ತಡೆಹಿಡಿದದ್ದು ಸ್ಥಳಕ್ಕೆ ಬಂದ ಅಧಿಕಾರಿಗಳ ವಶಕ್ಕೆ ಒಪ್ಪಿಸಿದ್ದರು. 

ಶಿವಮೊಗ್ಗ, ಶಿರಸಿ ಮಾರುಕಟ್ಟೆಯಲ್ಲಿ ಅಡಿಕೆಗೆ ಬಂಪರ್! ಜಿಗಿದ ರೇಟ್! ಲೇಟೆಸ್ಟ್ ಮಾಹಿತಿ

ಈ  ಕಾರ್ಯಾಚರಣೆಯಲ್ಲಿ ಬೀಟ್ ಫಾರೆಸ್ಟರ್ ಸುರೇಶ್, ಹೇಮಂತ್, ಲತಾ, ಚಾಲಕ ಲೋಕೇಶ್ ಹಾಗೂ ಪೊಲೀಸ್ ಸಂಚಾರಿ ದಳದ ಪಿಎಸ್‌ಐ ವಿನಾಯಕ ಮತ್ತು ಸಿಬ್ಬಂದಿಗಳಾದ ವಿಶ್ವ, ಚಂದ್ರು ಪಾಲ್ಗೊಂಡಿದ್ದರು.

Sandalwood Smuggler Arrested in Sagar
Sandalwood Smuggler Arrested in Sagar
Sandalwood Smuggler Arrested in Sagar
Sandalwood Smuggler Arrested in Sagar
Sandalwood Smuggler Arrested in Sagar
Sandalwood Smuggler Arrested in Sagar
Sandalwood Smuggler Arrested in Sagar
Sandalwood Smuggler Arrested in Sagar
Sandalwood Smuggler Arrested in Sagar
Sandalwood Smuggler Arrested in Sagar

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Shivamogga news live, Shimoga news kannada live, ಶಿವಮೊಗ್ಗ ನ್ಯೂಸ್ today, Shimoga news kannada epaper today, ಶಿವಮೊಗ್ಗ ನ್ಯೂಸ್ yesterday, Malenadu news live, ಮಲೆನಾಡು ಸುದ್ದಿ, ಶಿವಮೊಗ್ಗ ಜಿಲ್ಲಾ ವಾರ್ತೆ, ಸಾಗರದಲ್ಲಿ ಶ್ರೀಗಂಧ ಕಳ್ಳನ ಬಂಧನ 35 ಕೆಜಿ ಶ್ರೀಗಂಧದ ತುಂಡು ಜಪ್ತಿ, 1.70 ಲಕ್ಷ ರೂ. ಮೌಲ್ಯದ ಮರ ವಶ Sandalwood Smuggler Arrested in Sagar 35 KG Sandalwood Seized, Worth Rs 1.70 Lakh
Share This Article