Three Bodies Found in Three Separate Locations ಶಿವಮೊಗ್ಗ, malenadu today news : August 24 2025, ಶಿವಮೊಗ್ಗದ ವಿವಿಧ ಕಡೆಯಲ್ಲಿ, ಮೃತದೇಹ ಪತ್ತೆಯಾಗಿದ್ದು, ಅವುಗಳ ಕುರಿತಾದ ಸಂಕ್ಷಿಪ್ತ ಮಾಹಿತಿ ಸುದ್ದಿ ಇಲ್ಲಿದೆ.
ಭದ್ರಾ ನದಿಯಲ್ಲಿ ಪುರುಷನ ಶವ ಪತ್ತೆ
ಹೊಳೆಹೊನ್ನೂರು ಸಮೀಪದ ಸಿದ್ಲೀಪುರದಲ್ಲಿ ಹರಿಯುವ ಭದ್ರಾ ನದಿಯಲ್ಲಿ ಸುಮಾರು 55 ವರ್ಷ ಇರಬಹುದಾದ ವ್ಯಕ್ತಿಯ ಶವ ಸಿಕ್ಕಿದೆ. ಮೃತದೇಹ ಸುಮಾರು 5 ಅಡಿ ಎತ್ತರ ಹೊಂದಿರುವ ವ್ಯಕ್ತಿಯದ್ದಾಗಿದೆ. ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ. ಹೊಳೆಹೊನ್ನೂರು ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ನಿನ್ನೆ ಶನಿವಾರದ ದಿನ ಈ ಘಟನೆ ವರದಿಯಾಗಿದೆ.

ನಮ್ಮ ಮಲೆನಾಡು ಟುಡೆಯ ಪ್ರತಿ ಸುದ್ದಿಗಳನ್ನು ಓದಲು ನಮ್ಮ ವಾಟ್ಸಾಪ್ ಚಾನಲ್ ಗೆ ಕ್ಲಿಕ್ ಮಾಡಿ ಜಾಯಿನ್ ಆಗಿ..
ಪಟಗುಪ್ಪ ಸೇತುವೆ ಬಳಿ ಮೃತದೇಹ ಪತ್ತೆ
ಇತ್ತ ಹೊಸನಗರ ತಾಲ್ಲೂಕಿನ ಪಟಗುಪ್ಪ ಸೇತುವೆ ಬಳಿ ಹಿನ್ನೀರಿನಲ್ಲಿ ಯುವಕನೊಬ್ಬನ ಮೃತದೇಹ ಪತ್ತೆಯಾಗಿದೆ. ಮೃತರ ಗುರುತು ಪತ್ತೆಯಾಗಿದ್ದು, ಆತನನ್ನು 29 ವರ್ಷದ ಶಿವರಾಜ್ ಎಂದು ಗುರುತಿಸಲಾಗಿದೆ. ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಕುಂಸಿ: ಬಾವಿಯಲ್ಲಿ ಮಾಜಿ ಯೋಧನ ಶವ ಪತ್ತೆ
ಇತ್ತ ಕುಂಸಿಯಲ್ಲಿ ಮಾಜಿ ಸೈನಿಕರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಮೃತ ದೇಹ ಭಾವಿಯಲ್ಲಿ ಪತ್ತೆಯಾಗಿದೆ. ಚಿನ್ಮನೆ ಗ್ರಾಮದ ಮಾಜಿ ಯೋಧ ಡಿ.ಆರ್.ಸುರೇಶಪ್ಪ ಮೃತರು. ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಈ ಕುರಿತು ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ, ನಮ್ಮ ವಾಟ್ಸಾಪ್ ಗ್ರೂಪ್ಗೆ ಜಾಯಿನ್ ಆಗಿ
Three Bodies Found in Three Separate Locations