Thirthahalli :ತೀರ್ಥಹಳ್ಳಿ ಸುರಬಿ ಹೋಟೆಲ್​ ಹಲ್ಲೆ ಕೇಸ್​! ಸಿಸಿ ಟಿವಿ ದೃಶ್ಯದಲ್ಲಿ ಏನಿದೆ!? ದೇವರಿಗೆ ಉಯಿಲು ಕೊಟ್ಟಿದ್ದೇಕೆ!?

Thirthahalli  : ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಸುರಬಿ ಹೋಟೆಲ್​ನಲ್ಲಿ ನಡೆದ ಹಲ್ಲೆ ಪ್ರಕರಣ ಸಂಬಂಧ ತೀರ್ಥಹಳ್ಳಿ ಪೊಲೀಸರು ದೂರು ಹಾಗೂ ಪ್ರತಿದೂರು ಎರಡನ್ನೂ ದಾಖಲಿಸಿಕೊಂಡಿದ್ದಾರೆ. ಪ್ರಕರಣದಲ್ಲಿ ಒಂದು ಎಫ್​ಐಆರ್​ನಲ್ಲಿ ಕಾಂಗ್ರೆಸ್​ ಕಾರ್ಯಕರ್ತರೆಂದು ನಿಂದಿಸಿ ಹಲ್ಲೆ ಮಾಡಿದರು ಎಂಬ ಆರೋಪವಿದೆ. ಇನ್ನೊಂದು ಎಫ್​ಐಆರ್​ನಲ್ಲಿ ದೂರುದಾರರು ನಿಂದಿಸಿ ಹಲ್ಲೆ ಮಾಡಿದರು ಎಂದು ದೂರಲಾಗಿದೆ. ಇದರ ನಡುವೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್​ ತೀರ್ಥಹಳ್ಳಿ ಡಿವೈಎಸ್​ಪಿ ಕಚೇರಿ ಎದುರು ಮಲಗಿ ಪ್ರತಿಭಟಿಸಿ, ಸ್ಥಳದಲ್ಲಿ ಇಲ್ಲದವರ ಮೇಲೆ ಕೇಸ್ ಹಾಕಲಾಗಿದೆ ಎಂದು ಆರೋಪಿಸಿದ್ದರು. ಇದಕ್ಕೆ ಪ್ರತಿಯಾಗಿ ಗೃಹಸಚಿವ ಆರಗ ಜ್ಞಾನೇಂದ್ರ ಕುಡಿದು ಗಲಾಟೆ ಮಾಡಿದ್ದಕ್ಕೆ ರಾಜಕಾರಣ ಮಾಡಿದರೇ ಹೇಗೆ ಇಂತದ್ದಕ್ಕೆ ಪ್ರತಿಕ್ರಿಯಿಸಲು ಹೇಸಿಗೆ ಎನಿಸುತ್ತದೆ ಎಂದಿದ್ದಾರೆ. 

*BREAKING NEWS : ಶಿಫಾರಸ್ಸುಗಳಿಗೆ ಸಿಎಂ ಶಾಕ್​! ತಹಶೀಲ್ದಾರ್​ ಸೇರಿ ಕಂದಾಯ ಇಲಾಖೆ ಅಧಿಕಾರಿಗಳ ವರ್ಗಾವಣೆಗಳಿಗೆ ಬ್ರೇಕ್*

ಇವೆಲ್ಲದರ ನಡುವೆ ಫೇಸ್​ಬುಕ್ ಪೋಸ್ಟ್​ವೊಂದರಲ್ಲಿ ನಡೆದ ಘಟನೆ ಹಾಗೂ ಮಾಜಿ ಸಚಿವ ಕಿಮ್ಮನೆ ರತ್ನಾಕರ್​ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಬಗ್ಗೆ ಬರೆದುಕೊಂಡಿರುವ ವಿಶ್ವಾಸ್ ಜಿಗಳಗೋಡು, ದೇವರಿಗೆ ಉಯಿಲು ಕೊಡುವುದಾಗಿ ಹೇಳಿದ್ಧಾರೆ. ಘಟನೆಯಲ್ಲಿ ಸುರಬಿ ಹೋಟೆಲ್​ನ ಸಿಸಿ ಟಿವಿ ದೃಶ್ಯಗಳು ಸತ್ಯ ಹೇಳುತ್ತಿವೆ. ಅದನ್ನು ಹೊರಗಡೆ ನೀಡದೇ ಸತ್ಯ ಮರೆಮಾಚಲಾಗುತ್ತಿದೆ ಎಂದಿರುವ ಅವರು, ಈ ಸಂಬಂಧ ಸುದೀರ್ಘ ಪೋಸ್ಟ್​ವೊಂದನ್ನ ಹಂಚಿಕೊಂಡಿದ್ದಾರೆ. ಅದರಲ್ಲಿರುವ ವಿಷಯದ ಯತಾವತ್ತು ಇಲ್ಲಿದೆ 

BREAKING NEWS : ಶಿವಮೊಗ್ಗ ಜಿಲ್ಲಾ ಎಡಿಸಿ ಡಾ.ನಾಗೇಂದ್ರ ಎಫ್ ಹೊನ್ನಳ್ಳಿ ವರ್ಗಾವಣೆ!

ಮಾನ್ಯ ಕಿಮ್ಮನೆಯವರೆ,

ಮೊನ್ನೆ ತೀರ್ಥಹಳ್ಳಿಯ ಹೋಟೆಲ್ ಸುರಭಿಯಲ್ಲಿ ನಡೆದ ಘಟನೆಯ ಸತ್ಯಾಸತ್ಯತೆಯನ್ನು ಅರಿಯದೆ ಬಾಲಿಶವಾದ ನಿಮ್ಮ ವರ್ತನೆಗೆ ನನ್ನ ದಿಕ್ಕಾರವಿದೆ ????️????. ಪ್ರತಿಬಾರಿ ನಿಮ್ಮ ಪಕ್ಷದ ಕಾರ್ಯಕರ್ತರು ಅನ್ನುವ ಒಂದೇ ಕಾರಣಕ್ಕೆ ಅನ್ಯಾಯದ ಪರ ಹೋರಾಟ ಮಾಡುವ ನಿಮಗೆ ಸಜ್ಜನರು ಅನ್ನುವ ಬಿರುದು ಕೊಟ್ಟವರು ಯಾರು ಮಾರ್ರೆ????
ಕಳೆದ ಬಾರಿ ವ್ಯಾಕ್ಸಿನ್ ವಿಚಾರದಲ್ಲಿ ನಿಮ್ಮ ಹತ್ತಿಪ್ಪತ್ತು ಕಾರ್ಯಕರ್ತರು BJP ಯ ಒಬ್ಬ ಕಾರ್ಯಕರ್ತನನ್ನು ಥಳಿಸಿದಾಗಲೂ BJP ವಿರುದ್ದ ಪ್ರತಿಭಟಿಸಿದ್ದೀರಿ. ಮೊನ್ನೆ ಸುರಭಿ ಹೋಟೆಲ್ ನಲ್ಲಿ ನಡೆದ ಘಟನೆಯಲ್ಲೂ ನಿಮ್ಮ ಕಾರ್ಯಕರ್ತನ ತಪ್ಪಿದ್ದಿದ್ದು ಗೊತ್ತಾಗಿಯೂ ಪ್ರತಿಭಟಿಸಿದ್ದೀರಿ. ಸುರಭಿ ಹೋಟೆಲ್ ನ CC ಕ್ಯಾಮೆರಾದಲ್ಲಿ ಸತ್ಯ ಘಟನೆ ತಿಳಿಯುತ್ತದೆ ಅಂದ ಮೇಲೆ ಆ ವೀಡಿಯೋ ವನ್ನು ಸಾರ್ವಜನಕರಿಗೆ ತೋರಿಸಿ. ಹೊಟೇಲ್ ಒಳಗಿನ CC tv ದೃಶ್ಯ ಸೆರೆ ಆಗಿದೆ ಅಲ್ಲಿ ಅರುಣ್ ಡಿ ಸೋಜ ಇರಲಿಲ್ಲ ಎಂದು ನೀವೆ ಹೇಳಿದ್ದೀರಿ ಹಾಗಿದ್ದ ಮೇಲೆ ಅದೇ ಹೋಟೆಲ್ ನ ಹೊರಗಿನ ಕ್ಯಾಮೆರಾದ ದೃಶ್ಯ ಕೂಡ ಸೆರೆ ಆಗಬೇಕಲ್ಲವೆ. ನಿಮ್ಮ ಕಾರ್ಯಕರ್ತ ರೌಡಿ ಹರೀಶನ ಮೈಮೇಲಿದ್ದ ಬಂಗಾರವನ್ನು ನಾನು ದರೋಡೆ ಮಾಡಿದ್ದೇನೆಂದು ಸುಳ್ಳು ಕೇಸ್ ಹಾಕುತ್ತಿರುವ ನಿಮಗೆ ಅದೇ CC tv ಫೂಟೇಜ್ ನಲ್ಲಿ ಹರೀಶ ಕೈಯಲ್ಲಿ ಕಬ್ಬಿಣದ ರಾಡ್ ಹಿಡಿದು ಬರುತ್ತಿರೋದನ್ನು ತೋರಿಸಬಲ್ಲೆ.
ವಕೀಲರಾದ ನೀವು ನನ್ನ ಮೇಲೆ ದರೋಡೆ ಪ್ರಕರಣ ದಾಖಲಿಸಿದ್ದೀರಿ ಇರಲಿ,ಆದರೆ ಆ CC tv ದೃಶ್ಯದಲ್ಲಿ ಈ ಘಟನೆಗೂ ಮೊದಲು ನಿಮ್ಮ ಕಾರ್ಯಕರ್ತ ಹರೀಶನ ಮೈಮೇಲೆ ಎಷ್ಟು KG ಬಂಗಾರವಿತ್ತು ಅನ್ನುವುದೂ ಕೂಡ ಕಾಣಬೇಕಲ್ಲವೇ.
ಆ ಹೋಟೆಲ್ ಮಾಲೀಕ ನಿಮ್ಮ ಕಾರ್ಯಕರ್ತ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಷಯ ಆತನಿಗೆ ಬೌನ್ಸರ್ ನಂತೆ ಇನ್ನೊಬ್ಬ ಕಾರ್ಯಕರ್ತ ಹರೀಶ ಜತೆಯಲ್ಲಿದ್ದು ರಾತ್ರಿ ಹಲವರ ಮೇಲೆ ದರ್ಪ ತೋರಿಸೋದು ಮಾಮೂಲಿ, ಹೆದರುವವರು ಹೆದರಿ ಹೋಗುತ್ತಿದ್ದರು ನಾನು ತಕ್ಕ ಪ್ರತಿಕ್ರಿಯೆ ಕೊಟ್ಟೆ ಅಷ್ಟೆ. ಅಕ್ರಮ ಮದ್ಯ ಮಾರಾಟ, ಅವ್ಯವಸ್ಥೆ ಅಂತ ಭಾಷಣ ಬಿಗಿಯುವ ನೀವು ಇಡೀ ಕ್ಷೇತ್ರದ ನಿಮ್ಮ ಕಾರ್ಯಕರ್ತರ ಅಕ್ರಮ ಅಂಗಡಿ ಬಂದ್ ಮಾಡಿಸಿದರೆ ಇಡೀ ಕ್ಷೇತ್ರದಲ್ಲಿ ಶಾಂತಿ ನೆಲೆಸುತ್ತದೆ ಆ ಬಗ್ಗೆ ಪ್ರಾಮಾಣಿಕ ಹೋರಾಟ ಮಾಡಿ ತೋರಿಸಿ.
ಮಾಜಿ ಸಚಿವರಾದ ತಮಗೆ ಕುಡಿದು ಹೊಡೆದಾಟ ಮಾಡಿದ ನಿಮ್ಮ ಕಾರ್ಯಕರ್ತನ ಪರ ಚರಂಡಿಯ ಬದಿಯಲ್ಲಿ ಮಲಗುವ ಪರಿಸ್ಥಿತಿ ಬರಬಾರದಿತ್ತು. ಹಿಂದೆ ಅಧಿಕಾರ ಇದ್ದಾಗ ಪ್ರಭಾವ ಬಳಸಿ ಬಿಜೆಪಿ ಕಾರ್ಯಕರ್ತರ ಲಿಸ್ಟ್ ಮಾಡಿ ನೂರಾರು ಜನರ ಮೇಲೆ ಕೇಸ್ ಹಾಕಿದದರ ಶಾಪ ಈಗ ತಟ್ಟುತ್ತಿದೆ ಬಿಡಿ ಹಾಗಾಗಿ ಒಂದಿಬ್ಬರು ಕುಡುಕರಿಗಾಗಿ ನೀವು ರಸ್ತೆಯಲ್ಲಿ ರಾತ್ರಿ ಕಳೆಯುವ ಕರ್ಮ ಬಂದಿದೆ.
ನೀವು ಎಷ್ಟೇ ಅನ್ಯಾಯದ ಪರ ಇದ್ದರೂ ಮೇಲೆ ನ್ಯಾಯ ತೀರ್ಮಾನ ಮಾಡುವ ದೇವರೊಬ್ಬನಿದ್ದಾನೆ,ನನ್ನ ವಿರುದ್ಧ ಸುಳ್ಳು ಪ್ರಕರಣ ದಾಲಿಸಲು ಪಿತೂರಿ ಮಾಡಿದ ನಿಮ್ಮೆಲ್ಲರ ವಿರುದ್ದ ದೇವರ ಬಳಿ ಹುಯಿಲು ಹಾಕೇ ತೀರುತ್ತೇನೆ. ನನ್ನ ತಪ್ಪಿದ್ದರೆ ಶಿಕ್ಷೆ ನನಗಾಗಲಿ ನಿಮ್ಮ ತಪ್ಪಿದ್ದರೆ ಶಿಕ್ಷೆ ನಿಮಗಾಗಲಿ.. ????
(????ಕೆಳಗಿರುವ ಚಿತ್ರ ನಿಮ್ಮ ಕಾರ್ಯಕರ್ತ ನನ್ನ ಗೆಳಯನಿಗೆ ಕೊಟ್ಟಿರುವ ಪ್ರಸಾದ )
-ವಿಶ್ವಾಸ್ ಜಿಗಳಗೋಡು

Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು