Thirthahalli news ತೀರ್ಥಹಳ್ಳಿ: ಟಿಂಬರ್ ನಾಟ ಬಿದ್ದು ವ್ಯಕ್ತಿ ಸಾವು
ತೀರ್ಥಹಳ್ಳಿ, ತೀರ್ಥಹಳ್ಳಿ ತಾಲೂಕಿನ ದೇವಂಗಿ ಬಳಿ ಟಿಂಬರ್ ನಾಟ ಲೋಡ್ ಮಾಡುವ ವೇಳೆ ನಾಟ ಬಿದ್ದು ಓರ್ವ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಸೋಮವಾರ ಸಂಜೆ ನಡೆದಿದೆ.
ಮೃತರನ್ನು ಸಕ್ರೆಬೈಲು ನಿವಾಸಿ, ಯೋಗೇಶ್ (50) ಎಂದು ಗುರುತಿಸಲಾಗಿದೆ.
ಯೋಗೇಶ್ ಸೋಮವಾರ ಸಂಜೆ 4 ಗಂಟೆ ಸುಮಾರಿಗೆ ದೇವಂಗಿ ಸಮೀಪ ಟಿಂಬರ್ ನಾಟವನ್ನು ಲೋಡ್ ಮಾಡುವ ಕಾರ್ಯದಲ್ಲಿ ನಿರತರಾಗಿದ್ದರು. ಈ ವೇಳೆ ಆಕಸ್ಮಿಕವಾಗಿ ನಾಟ ಅವರ ಮೇಲೆ ಬಿದ್ದಿದೆ. ತೀವ್ರವಾಗಿ ಗಾಯಗೊಂಡ ಯೋಗೇಶ್ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಈ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.