thirthahalli news : ತೀರ್ಥಹಳ್ಳಿ ಕೋರ್ಟ್ಗೆ ಹಾಜರಾದ ನಕ್ಸಲ್ ನಾಯಕಿ ಮುಂಡಗಾರು ಲತಾ
ತೀರ್ಥಹಳ್ಳಿ : ಪೊಲೀಸರು ಇಂದು ನಕ್ಸಲ್ ನಾಯಕಿ ಮುಂಡಗಾರು ಲತಾ ಹಾಗೂ ವನಜಾಕ್ಷಿಯನ್ನು ತೀರ್ಥಹಳ್ಳಿ ಕೊರ್ಟ್ಗೆ ಹಾಜರು ಪಡಿಸಿದ್ದಾರೆ.
ಮಾರ್ಚ್ 25 ರಂದು ಪೊಲೀಸ್ ಬಿಗಿ ಭದ್ರತೆಯಲ್ಲಿ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ನಕ್ಸಲ್ ನಾಯಕಿ ಮುಂಡಗಾರು ಲತಾ ಹಾಗೂ ವನಜಾಕ್ಷಿಯನ್ನು ಕರೆತರಲಾಗಿತ್ತು. ಹಾಗೆಯೇ ಇಂದು ಇಬ್ಬರನ್ನು ಪೊಲೀಸರು ತೀರ್ಥಹಳ್ಳಿ ಕೋರ್ಟ್ಗೆ ಹಾಜರು ಪಡಿಸಿದ್ದಾರೆ.
ಈ ಹಿಂದೆ ನಕ್ಸಲ್ ನಾಯಕಿ ಮುಂಡಗಾರು ಲತಾ ಹಾಗೂ ವನಜಾಕ್ಷಿ ಆಗುಂಬೆಯ 39/15 ಹಾಗೂ ನಗರ 24/15 ಬಿತ್ತಿ ಪತ್ರ ಹಚ್ಚಿದ ಹಾಗೂ ಜೀವ ಬೇದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಗೆ ಹಾಜರುಪಡಿಸಲಾಗಿದೆ.
