tunga dam : ತುಂಗಾ ಜಲಾಶಯದಿಂದ 10 ಸಾವಿರ ಕ್ಯೂಸೆಕ್ ನೀರು ಬಿಡುಗಡೆ
ಶಿವಮೊಗ್ಗ : ತುಂಗಾ ಜಲಾಶಯದ 8 ಗೇಟ್ಗಳನ್ನು ತೆರೆದಿದ್ದು, ಅದರಿಂದಾಗಿ 10000 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ.
ಕಳೆದ ಎರಡು ದಿನಗಳಿಂದ ತುಂಗಾ ಜಲಾಶಯದ ಜಲಾನಯನ ಪ್ರದೇಶದಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಈ ಹಿನ್ನಲೆ , ಹೆಚ್ಚಿನ ಪ್ರಮಾಣದ ಒಳಹರಿವು ಬಂದಲ್ಲಿ ಯಾವ ಕ್ಷಣದಲ್ಲಾದರೂ ತುಂಗಾ ಜಲಾಶಯದಿಂದ ನೀರನ್ನು ಬಿಡುವ ಸಂಭವವಿತ್ತು. ಹಾಗೆಯೇ ಅಲ್ಲಿನ ಸುತ್ತಮುತ್ತಲಿನ ಜನರಿಗೆ ಮುಂಜಾಗೃತ ಕ್ರಮವಾಗಿ ಎಚ್ಚರಿಕೆಯನ್ನು ಕೊಡಲಾಗಿತ್ತು. ಒಳ ಹರಿವು ಹೆಚ್ಚಾದ ಹಿನ್ನಲೆ ಇಂದು 10 ಸಾವಿರ ಕ್ಯೂಸೆಕ್ ನೀರನ್ನು ಹೊರ ಬಿಡಲಾಗಿದೆ.