thirthahalli lorry accident ಗಬಡಿಯಲ್ಲಿ ಕ್ರೇನ್ ಡಿಕ್ಕಿ, ನಡುರೋಡಲ್ಲಿ ಅಡ್ಡಬಿದ್ದ ಲಾರಿ..
ಕ್ರೇನ್ ಡಿಕ್ಕಿ ಹೊಡೆದ ಪರಿಣಾಮ ಲಾರಿಯೊಂದು ಪಲ್ಟಿಯಾದ ಘಟನೆ ತೀರ್ಥಹಳ್ಳಿ ತಾಲೂಕಿನ ಗಬಡಿಯಲ್ಲಿ ನಡೆದಿದೆ.
ಶಿವಮೊಗ್ಗದಿಂದ ತೀರ್ಥಹಳ್ಳಿ ಕಡೆಗೆ ಹೋಗುತ್ತಿದ್ದ ಲಾರಿಗೆ ತೀರ್ಥಹಳ್ಳಿ ಕಡೆಯಿಂದ ಬರುತ್ತಿದ್ದ ಕ್ರೇನ್ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಲಾರಿ ಪಲ್ಟಿಯಾಗಿದ್ದು,ಅದೃಷ್ಟ ವಶಾತ್ ಚಾಲಕ ಪ್ರಾಣಪಾಯದಿಂದ ಪಾರಾಗಿದ್ದಾನೆ. ಪಲ್ಟಿಯಾದ ರಭಸಕ್ಕೆ ಲಾರಿ ಜಖಂಗೊಂಡಿದ್ದು. ಅದರ ಟಯರ್ ಕಳಚಿಬಿದ್ದಿದೆ ಈ ವೇಳೆ ಲಾರಿಯ ಹಿಂದೆ ಬರುತ್ತಿದ್ದ ಪಿಕಪ್ ಸಹ ಲಾರಿಗೆ ಡಿಕ್ಕಿ ಹೊಡೆದಿದ್ದು ಪಿಕಪ್ ನ ಮುಂಬಾಗ ನುಜ್ಜುಗುಜ್ಜಾಗಿದೆthirthahalli lorry accidentಇನ್ನು ವಿಷಯ ತಿಳಿದು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಪಲ್ಟಿಯಾಗಿದ್ದ ಲಾರಿಯನ್ನು ಎತ್ತಿದರು. ಇದರ ನಡುವೆ ಲಾರಿ ಪಲ್ಟಿಯಾಗಿ ರಸ್ತೆಯಲ್ಲಿ ಬಿದ್ದಿದ್ದ ಹಿನ್ನಲೆ ಕೆಲಕಾಲ ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಗಿತ್ತು.. ಮಾಳೂರು ಪೊಲೀಸರು ಲಾರಿ ಬಿದ್ದ ಸ್ಥಳದಲ್ಲಿ ಬ್ಯಾರಿಕೇಡ್ ಅಳವಡಿಸಿ ಉಳಿದ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು.ಅಪಘಾತವಾಗಲು ಕಾರಣ ಸ್ಪಷ್ಟವಾಗಿಲ್ಲ.