thirthahalli incident / ನಿಂತಿದ್ದ ಆಟೋಕ್ಕೆ ಶಾಮಿಯಾನದ ಗಾಡಿ ಡಿಕ್ಕಿ / ರಿಕ್ಷಾ ಅಪ್ಪಚ್ಚಿ, ಚರಂಡಿಗೆ ಬಿದ್ದ ಕ್ಯಾರಿ

ajjimane ganesh

thirthahalli incident today june 21 2025 ತೀರ್ಥಹಳ್ಳಿ: ನಿಂತಿದ್ದ ಆಟೋಗೆ ಶಾಮಿಯಾನ ವಾಹನ ಡಿಕ್ಕಿ, ಭಾರಿ ಸದ್ದು, ಆಟೋ ಜಖಂ!

Shivamogga news  / ತೀರ್ಥಹಳ್ಳಿ, ಜೂನ್ 21, 2025: ತಾಲ್ಲೂಕಿನ ಮೇಲಿನಕುರುವಳ್ಳಿ ಗ್ರಾಮದಲ್ಲಿ ನಿನ್ನೆ ಶುಕ್ರವಾರ ದಿನ ಸಂಜೆ ಆಟೋ ರಿಕ್ಷಾ ಮತ್ತು ಮಾರುತಿ ಸುಜುಕಿ ಕ್ಯಾರಿ ವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ ಎರಡು ವಾನಗಳು ಜಖಂಗೊಂಡು ರಸ್ತೆ ಬದಿಗೆ ಹೋಗಿ ಬಿದ್ದಿವೆ. ಮೇಲಿನಕುರುವಳ್ಳಿಯ ರೇಷ್ಮೆ ಫಾರಂ ರಸ್ತೆಯ ಎದುರು ಭಾಗದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

- Advertisement -

ಘಟನೆ ವಿವರ: thirthahalli incident 

thirthahalli incident today june 21 2025

ಕಟ್ಟೆಹಕ್ಲು ಭಾಗದಿಂದ ವೇಗವಾಗಿ ಬರುತ್ತಿದ್ದ ಶಾಮಿಯಾನ ಸಾಗಿಸುವ ವಾಹನವು ರಸ್ತೆ ಬದಿಯಲ್ಲಿ ನಿಂತಿದ್ದ ಆಟೋವೊಂದನ್ನು ಹಿಂದಿಕ್ಕುವ ಪ್ರಯತ್ನದಲ್ಲಿ ನಿಯಂತ್ರಣ ಕಳೆದುಕೊಂಡಿದೆ.  ನಿಯಂತ್ರಣ ತಪ್ಪಿದ ವಾಹನ ನೇರವಾಗಿ ಆಟೋಗೆ ಡಿಕ್ಕಿ ಹೊಡೆದು ನಂತರ ಸಮೀಪದ ಚರಂಡಿಗೆ ಇಳಿದಿದೆ. 

ಅಪಘಾತದ ತೀವ್ರತೆಗೆ ಆಟೋದ ಮುಂಭಾಗವು ಸಂಪೂರ್ಣವಾಗಿ ಜಖಂಗೊಂಡಿದೆ. ಅದೃಷ್ಟವಶಾತ್, ಅಪಘಾತ ಸಂಭವಿಸಿದ ಸಮಯದಲ್ಲಿ ಆಟೋದಲ್ಲಿ ಯಾವುದೇ ಪ್ರಯಾಣಿಕರು ಇರಲಿಲ್ಲ. ಇದರಿಂದಾಗಿ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಶಾಮಿಯಾನದ ವಾಹನದ ಮುಂಭಾಗವೂ ಸಹ ಹಾನಿಗೊಂಡಿದ್ದರೂ, ಚಾಲಕನಿಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ 

thirthahalli incident today june 21 2025

 

Share This Article
1 Comment

Leave a Reply

Your email address will not be published. Required fields are marked *