ಪೇಟೆಯಲ್ಲಿಯೇ ವೇಶ್ಯಾವಾಟಿಕೆ! ಮೂವರು ಮಹಿಳೆಯರ ರಕ್ಷಣೆ ! ಇಬ್ಬರ ಅರೆಸ್ಟ್ ! ಪೊಲೀಸ್ ಕಾರ್ಯಾಚರಣೆಯ ಇನ್ನಷ್ಟು ಡಿಟೇಲ್ಸ್ ಇಲ್ಲಿದೆ ಓದಿ

Malenadu Today

KARNATAKA NEWS/ ONLINE / Malenadu today/ Jun 23, 2023 SHIVAMOGGA NEWS  

ತೀರ್ಥಹಳ್ಳಿ/ ಶಿವಮೊಗ್ಗ ಪೊಲೀಸರು ಮತ್ತೊಮ್ಮೆ ವೇಶ್ಯಾವಾಟಿಕೆ ಜಾಲದ ಬೆನ್ನು ಬಿದ್ದಿದ್ಧಾರೆ. ಈ ಬಾರಿಯು ಸ್ಥಳೀಯ ಮಾಹಿತಿ ಅಡಿಯಲ್ಲಿ ಪೊಲೀಸರು ರೇಡ್ ನಡೆಸಿದ್ದಾರೆ. 

ದಿನಾಂಕ:22/06/2023 ರಂದು ಮಧ್ಯಾಹ್ನ ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ದಾಳಿ ನಡೆಸಿ, ಮನೆಯೊಂದರಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆಯನ್ನು ಬಂದ್ ಮಾಡಿದ್ಧಾರೆ. 

ಇಲ್ಲಿನ ವಾಸದ ಮನೆಯೊಂದರಲ್ಲಿ  ಮಹಿಳೆಯರನ್ನು ಅಕ್ರಮವಾಗಿ ಬಂಧನದಲ್ಲಿಟ್ಟುಕೊಂಡು, ವೇಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸಾಂತ್ವನ ಕೇಂದ್ರ ಅಧಿಕಾರಿಯು ಸೇರಿದಂತೆ ಪೊಲೀಸರ ತಂಡ ಮಾಹಿತಿ ಆಧರಿಸಿ ದಾಳಿ ನಡೆಸಿದೆ. ಈ ವೇಳೆ ವಾಸದ ಮನೆಯಲ್ಲಿದ್ದ  ಮೂವರು ಮಹಿಳೆಯರನ್ನು ರಕ್ಷಿಸಲಾಗಿದೆ.  ಈ ಸಂಬಂಧ ಪೊಲೀಸರೇ ನೀಡಿರುವ ಪ್ರಕಟಣೆಯ ಪ್ರಕಾರ, ಇಬ್ಬರನ್ನ ಬಂಧಿಸಲಾಗಿದೆ

ಬಂಧಿತರು

1) ಪ್ರಶಾಂತ್ ಕೆ.ಎಸ್. 33 ವರ್ಷ, ಜೆ.ಪಿ. ನಗರ, ಕಮ್ಮರಡಿ ಗ್ರಾಮ, ಆಗುಂಬೆ, ತೀರ್ಥಹಳ್ಳಿ ಮತ್ತು

 2) ಮಂಜುನಾಥ. ಎಂ,  37 ವರ್ಷ, ಮೇಲಿನ ಕುರುವಳ್ಳಿ, ತೀರ್ಥಹಳ್ಳಿ  


ನಡು ರಸ್ತೆಯಲ್ಲಿ ಪಲ್ಟಿಯಾದ ಲಾರಿ! ಅಡುಗೆ ಎಣ್ಣೆ ಪ್ಯಾಕೆಟ್​ಗಳು ಚೆಲ್ಲಾಪಿಲ್ಲಿ!

ಭದ್ರಾವತಿ/ ನಡು ರಸ್ತೆಯಲ್ಲಿ ನಿಯಂತ್ರಣ ತಪ್ಪಿ ಟ್ರಕ್​ವೊಂದು ಪಲ್ಟಿಯಾದ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಭದ್ರಾವತಿ ಗ್ರಾಮಾಂತರ ಪೊಲೀಸ್ ಸ್ಟೇಷನ್​ ವ್ಯಾಪ್ತಿಯಲ್ಲಿ ಸಂಭವಿಸಿದೆ. 

 ಕಳೆದ 21 ನೇ ತಾರೀಖು ಈ ಘಟನೆ ಸಂಭವಿಸಿದ್ದು, ಘಟನೆಯಲ್ಲಿ ಅಡುಗೆ ಎಣ್ಣೆಯ ಬಾಕ್ಸ್​ಗಳನ್ನು ಸಾಗಿಸುತ್ತಿದ್ದ ಲಾರಿಯು ಚಾಲಕನ ನಿಯಂತ್ರಣ ತಪ್ಪಿ  ಪಲ್ಟಿಯಾಗಿದೆ. ಇನ್ನೂ ರಸ್ತೆಗೆ ಅಡ್ಡಲಾಗಿ ಲಾರಿ ಉರುಳಿದ್ದರಿಂದ ಸಂಚಾರ ಸಂಪೂರ್ಣ ಬಂದ್ ಆಗಿತ್ತು. ಇನ್ನೂ ಈ  ಬಗ್ಗೆ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. 

ಸ್ಥಳಕ್ಕೆ ಬಂದ ಪೊಲೀಸರು, ಲಾರಿಯನ್ನು ತೆರವುಗೊಳಿಸಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಅಡುಗೆ ಎಣ್ಣೆಯ ಬಾಕ್ಸ್​ಗಳನ್ನು ರಸ್ತೆ ಬದಿಗೆ ಸರಿಸುವ ವ್ಯವಸ್ಥೆ ಮಾಡಿದರು. ಇನ್ನೂ ಘಟನೆಯಲ್ಲಿ ಚಾಲಕ ಯಾವುದೇ ಅಪಾಯವಿಲ್ಲದೆ ಪಾರಾಗಿದ್ಧಾನೆ. 


ಭದ್ರಾವತಿಯ 39 ಗ್ರಾಮ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ನಿಗದಿ! ಯಾವ ಊರಲ್ಲಿ ಯಾರಿಗೆ ಅವಕಾಶ? ಇಲ್ಲಿದೆ ಪಟ್ಟಿ!

ಭದ್ರಾವತಿ/ ಸದ್ಯ ಎಲ್ಲೆಡೆ ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ 2 ನೇ ಅವಧಿಯ ಮೀಸಲಾತಿಯನ್ನ ಪ್ರಕಟಿಸಲಾಗಿತ್ತಿದೆ. ಇದಕ್ಕೆ ಪೂರಕವಾಗಿ ಜಿಲ್ಲಾಡಳಿತ ಭದ್ರಾವತಿ ತಾಲ್ಲೂಕಿನ  39  ಗ್ರಾಮ ಪಂಚಾಯಿತಿಗಳ  ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ನಿಗದಿಪಡಿಸಿದೆ.  ಚನ್ನಗಿರಿ ರಸ್ತೆಯ ವೆಂಕಟೇಶ್ವರ ಚಿತ್ರಮಂದಿರದಲ್ಲಿ ಆಯೋಜಿಸಲಾಗಿದ್ದ ಮೀಸಲಾತಿ ನಿಗದಿ ಸಭೆಯಲ್ಲಿ  ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಮೀಸಲಾತಿ ನಿರ್ಣಯವನ್ನು ಕೈಗೊಳ್ಳಲಾಯಿತು. 

 

1. ಸೈದರಕಲ್ಲಹಳ್ಳಿ ಅಧ್ಯಕ್ಷ-ಪರಿಶಿಷ್ಟ ಜಾತಿ, ಉಪಾಧ್ಯಕ್ಷ-ಹಿಂದುಳಿದ ವರ್ಗ(ಎ) ಮಹಿಳೆ

2. ನಿಂಬೆಗೊಂದಿ ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ-ಸಾಮಾನ್ಯ ಮಹಿಳೆ 

3. ಆನವೇರಿ ಅಧ್ಯಕ್ಷ-ಸಾಮಾನ್ಯ. ಉಪಾಧ್ಯಕ್ಷ-ಸಾಮಾನ್ಯ ಮಹಿಳೆ 

4. ಗುಡುಮಘಟ್ಟ ಅಧ್ಯಕ್ಷ-ಪರಿಶಿಷ್ಟ ಜಾತಿ ಮಹಿಳೆ, ಉಪಾಧ್ಯಕ್ಷ- ಸಾಮಾನ್ಯ

5. ಮಂಗೋಟೆ ಅಧ್ಯಕ್ಷ-ಹಿಂದುಳಿದ ವರ್ಗ(ಎ), ಉಪಾಧ್ಯಕ್ಷ-ಸಾಮಾನ್ಯ ಮಹಿಳೆ 

6. ಸಿದ್ಲಿಪುರ ಅಧ್ಯಕ್ಷ-ಪರಿಶಿಷ್ಟ ಜಾತಿ, ಉಪಾಧ್ಯಕ್ಷ-ಹಿಂದುಳಿದ ವರ್ಗ(ಎ) ಮಹಿಳೆ 

7. ಸನ್ಯಾಸಿಕೊಡಮಗ್ಗೆ ಅಧ್ಯಕ್ಷ-ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಪರಿಶಿಷ್ಟ ಜಾತಿ 

8. ಅಗರದಹಳ್ಳಿ ಅಧ್ಯಕ್ಷ-ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಸಾಮಾನ್ಯ 

9. ಯಡೇಹಳ್ಳಿ ಅಧ್ಯಕ್ಷ-ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಸಾಮಾನ್ಯ 

10. ಅರಹತೊಳಲು ಅಧ್ಯಕ್ಷ-ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಸಾಮಾನ್ಯ 

11. ಹನುಮಂತಾಪುರ ಅಧ್ಯಕ್ಷ-ಹಿಂದುಳಿದ ವರ್ಗ(ಎ) ಮಹಿಳೆ, ಉಪಾಧ್ಯಕ್ಷ-ಪರಿಶಿಷ್ಟ ಜಾತಿ 

12. ಕಲ್ಲಿಹಾಳ್ ಅಧ್ಯಕ್ಷ-ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಸಾಮಾನ್ಯ 

13. ದಾಸರಕಲ್ಲಹಳ್ಳಿ ಅಧ್ಯಕ್ಷ-ಪರಿಶಿಷ್ಟ ಪಂಗಡ ಮಹಿಳೆ, ಉಪಾಧ್ಯಕ್ಷ-ಹಿಂದುಳಿದ ವರ್ಗ(ಬಿ) ಮಹಿಳೆ 

14. ಮಾರಶೆಟ್ಟಿಹಳ್ಳಿ ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ-ಪರಿಶಿಷ್ಟ ಜಾತಿ ಮಹಿಳೆ 

15. ಅರಕೆರೆ ಅಧ್ಯಕ್ಷ-ಪರಿಶಿಷ್ಟ ಜಾತಿ ಮಹಿಳೆ, ಉಪಾಧ್ಯಕ್ಷ -ಹಿಂದುಳಿದ ವರ್ಗ(ಎ) 

16. ಅರಬಿಳಚಿ ಅಧ್ಯಕ್ಷ-ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಸಾಮಾನ್ಯ 

17. ನಾಗತಿಬೆಳಗಲು ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ -ಸಾಮಾನ್ಯ ಮಹಿಳೆ 

18. ಕೂಡ್ಲಿಗೆರೆ ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ-ಸಾಮಾನ್ಯ ಮಹಿಳೆ 

19. ಅತ್ತಿಗುಂದ ಅಧ್ಯಕ್ಷ-ಹಿಂದುಳಿದ ವರ್ಗ(ಎ), ಉಪಾಧ್ಯಕ್ಷ-ಸಾಮಾನ್ಯ ಮಹಿಳೆ 

20. ಕೊಮಾರನಹಳ್ಳಿ ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ ಸಾಮಾನ್ಯ ಮಹಿಳೆ 

21. ತಡಸ ಅಧ್ಯಕ್ಷ-ಪರಿಶಿಷ್ಟ ಜಾತಿ, ಉಪಾಧ್ಯಕ್ಷ ಹಿಂದುಳಿದ ವರ್ಗ(ಎ) ಮಹಿಳೆ 

22. ದೊಣಬಘಟ್ಟ ಅಧ್ಯಕ್ಷ-ಹಿಂದುಳಿದ ವರ್ಗ(ಬಿ) ಮಹಿಳೆ, ಉಪಾಧ್ಯಕ್ಷ-ಹಿಂದುಳಿದ ವರ್ಗ(ಎ) ಮಹಿಳೆ

23 ಬಿಳಿಕಿ ಅಧ್ಯಕ್ಷ-ಹಿಂದುಳಿದ ವರ್ಗ(ಎ), ಉಪಾಧ್ಯಕ್ಷ-ಪರಿಶಿಷ್ಟ ಜಾತಿ ಮಹಿಳೆ

24. ಕಾಗೆಕೊಡಮಗ್ಗಿ ಅಧ್ಯಕ್ಷ-ಹಿಂದುಳಿದ ವರ್ಗ(ಬಿ), ಉಪಾಧ್ಯಕ್ಷ-ಹಿಂದುಳಿದ ವರ್ಗ(ಎ) ಮಹಿಳೆ 

25. ಅರಳಿಹಳ್ಳಿ ಅಧ್ಯಕ್ಷ-ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಪರಿಶಿಷ್ಟ ಪಂಗಡ(ಮಹಿಳೆ) 

26. ವೀರಾಪುರ ಅಧ್ಯಕ್ಷ-ಹಿಂದುಳಿದ ವರ್ಗ(ಎ) ಮಹಿಳೆ, ಉಪಾಧ್ಯಕ್ಷ-ಸಾಮಾನ್ಯ 

27. ಕಲ್ಲಹಳ್ಳಿ ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ-ಸಾಮಾನ್ಯ,

 28. ಅಂತರಗಂಗೆ ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ-ಸಾಮಾನ್ಯ ಮಹಿಳೆ 

29. ದೊಡ್ಡೇರಿ ಅಧ್ಯಕ್ಷ-ಹಿಂದುಳಿದ ವರ್ಗ(ಎ) ಮಹಿಳೆ, ಉಪಾಧ್ಯಕ್ಷ-ಸಾಮಾನ್ಯ 

30. ಯರೇಹಳ್ಳಿ ಅಧ್ಯಕ್ಷ-ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಹಿಂದುಳಿದ ವರ್ಗ(ಎ) 

31. ಮಾವಿನಕೆರೆ ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ-ಪರಿಶಿಷ್ಟ ಜಾತಿ ಮಹಿಳೆ 

32. ಬಾರಂದೂರು ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ-ಹಿಂದುಳಿದ ವರ್ಗ(ಬಿ) 

33. ಕಂಬದಾಳ್ ಹೊಸೂರು ಅಧ್ಯಕ್ಷ-ಪರಿಶಿಷ್ಟ ಜಾತಿ ಮಹಿಳೆ, ಉಪಾಧ್ಯಕ್ಷ ಹಿಂದುಳಿದ ವರ್ಗ(ಎ) 

34. ಕಾರೆಹಳ್ಳಿ ಅಧ್ಯಕ್ಷ-ಹಿಂದುಳಿದ ವರ್ಗ(ಎ), ಉಪಾಧ್ಯಕ್ಷ-ಪರಿಶಿಷ್ಟ ಜಾತಿ ಮಹಿಳೆ 

35. ಅರಳಿಕೊಪ್ಪ ಅಧ್ಯಕ್ಷ-ಹಿಂದುಳಿದ ವರ್ಗ(ಎ) ಮಹಿಳೆ, ಉಪಾಧ್ಯಕ್ಷ-ಸಾಮಾನ್ಯ 

36. ಸಿಂಗನಮನೆ ಅಧ್ಯಕ್ಷ-ಹಿಂದುಳಿದ ವರ್ಗ(ಎ) ಮಹಿಳೆ, ಉಪಾಧ್ಯಕ್ಷ-ಪರಿಶಿಷ್ಟ ಜಾತಿ 

37. ಹಿರಿಯೂರು ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ-ಸಾಮಾನ್ಯ ಮಹಿಳೆ 

38. ಮೈದೊಳಲು ಅಧ್ಯಕ್ಷ-ಪರಿಶಿಷ್ಟ ಜಾತಿ ಮಹಿಳೆ, ಉಪಾಧ್ಯಕ್ಷ-ಹಿಂದುಳಿದ ವರ್ಗ(ಎ) ಮತ್ತು 

39. ತಾವರಘಟ್ಟ ಅಧ್ಯಕ್ಷ-ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಸಾಮಾನ್ಯ  

Share This Article