2 ವರ್ಷ ಸಂಸಾರ ನಡೆಸಿದ ಗೃಹಿಣಿ ದಿಢೀರ್ ಸಾವು! / ಮರಣ ದುಃಖ , ಕಾರಣ ನಿಗೂಢ
ಶಿವಮೊಗ್ಗ (Shivamogga) ನಗರದ ಮಿಳಘಟ್ಟದಲ್ಲಿ ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿರುವ ಮಹಿಳೆಯ ಸಾವಿಗೆ ಕಾರಣವೂ ಸ್ಪಷ್ಟವಾಗಿಲ್ಲ. ಮೃತ ಗೃಹಿಣಿ21 ವರ್ಷದ ಸಂಗೀತ, ಎರಡು ವರ್ಷದ ಹಿಂದೆ ಈಕೆಯ ವಿವಾಹವಾಗಿತ್ತು. ನಿನ್ನೆ ಇದ್ದಕ್ಕಿದ್ದಂತೆ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿವಾಹವಾಗಿ ಎರಡು ವರ್ಷವಾದರೂ ಮಕ್ಕಳಾಗಿರಲಿಲ್ಲ ಎಂದು ಕೊರಗುತ್ತಿದ್ದ ಸಂಗೀತ, ಪತಿಯ ಸಹೋದರಿ ಬಸುರಿಯಾದ ಸುದ್ದಿ ಕೇಳಿ ತನಗೆ ಇನ್ನೂ ಮಕ್ಕಳಾಗಿಲ್ಲ ಎಂದು ಇನ್ನಷ್ಟು ಕುಗ್ಗಿಹೋಗಿದ್ದರು ಎನ್ನಲಾಗಿದೆ. ಅಲ್ಲದೆ, ಇದೇ ವಿಚಾರಕ್ಕೆ ನೇಣುಬಿಗಿದುಕೊಂಡಿರಬೇಕು ಎಂದು ಊಹಿಸಲಾಗುತ್ತಿದೆ. … Read more