ಶಿವಮೊಗ್ಗಕ್ಕೆ ಬರ್ತಿತ್ತಾರೆ ಈ ಎಲ್ಲಾ ಸ್ಟಾರ್ ನಟ ನಟಿಯರು : ಕಾರಣವೇನು
Shivamogga dasara : ಶಿವಮೊಗ್ಗ : ಸೆಪ್ಟೆಂಬರ್ 22ರಿಂದ ಆರಂಭವಾಗಲಿರುವ ದಸರಾ ಮಹೋತ್ಸವಕ್ಕೆ ಕನ್ನಡ ಚಲನಚಿತ್ರರಂಗದ ಹಲವು ಖ್ಯಾತ ನಟ-ನಟಿಯರು ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ. ಸೆಪ್ಟೆಂಬರ್ 24ರಿಂದ ಮೂರು ದಿನಗಳ ಕಾಲ ಚಲನಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ. ಸೆಪ್ಟೆಂಬರ್ 24ರಂದು ನಡೆಯಲಿರುವ ಚಲನಚಿತ್ರ ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ನಟ ಶರಣ್ ನಟಿ ಕಾರುಣ್ಯ ರಾಮ್ ನಿರ್ದೇಶಕ ಸಾಯಿ ಪ್ರಕಾಶ್ ಹಾಗೂ ನಟಿ ಮತ್ತು ನಿರ್ದೇಶಕಿ ರೂಪಾ ಅಯ್ಯರ್ (Roopa Iyer) ಭಾಗವಹಿಸಲಿದ್ದಾರೆ. ಈ ಬಾರಿ ಚಲನಚಿತ್ರ ದಸರಾದಲ್ಲಿ ಮೂರು ಸಿನಿಮಾಗಳನ್ನು ಪ್ರದರ್ಶಿಸಲಾಗುತ್ತಿದೆ. … Read more