ನಟ ದರ್ಶನ್ ಪ್ರಕರಣದಲ್ಲಿ ರೇಣುಕಾಸ್ವಾಮಿ ಪೋಷಕರ ಸಾಕ್ಷ್ಯ! ಕೋರ್ಟ್ ಸಮನ್ಸ್!
ಶಿವಮೊಗ್ಗ: ಮಲೆನಾಡು ಟುಡೆ ಸುದ್ದಿ: ನಟ ದರ್ಶನ್ ಕೇಸ್ನಲ್ಲಿ ಮತ್ತೊಂದು ಅಪ್ಡೇಟ್ ಸುದ್ದಿ ಹೊರಬಿದ್ದಿದೆ. ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣದಲ್ಲಿ ಮೃತರ ಪೋಷಕರಿಗೆ ಸಾಕ್ಷ್ಯ ನುಡಿಯಲು ಸಮನ್ಸ್ ಜಾರಿ ಮಾಡಲಾಗಿದೆ. ದರ್ಶನ್ ತೂಗುದೀಪ ಸೇರಿದಂತೆ ಹಲವರ ವಿರುದ್ಧ ದಾಖಲಾಗಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮೃತರ ಪೋಷಕರಾದ ತಂದೆ ಕಾಶಿನಾಥಯ್ಯ ಮತ್ತು ತಾಯಿ ರತ್ನಮ್ಮ ಅವರಿಗೆ ಸಾಕ್ಷ್ಯ ನುಡಿಯಲು ಬೆಂಗಳೂರಿನ ಸತ್ರ ನ್ಯಾಯಾಲಯವು ಸಮನ್ಸ್ ಜಾರಿಗೊಳಿಸಿದೆ. ಡಿಸೆಂಬರ್17 ರಂದು ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯವು ಸೂಚಿಸಿದೆ. ಶಿವಮೊಗ್ಗದ … Read more