ಮಾವಲಿ ಹೋರಿ ಹಬ್ಬದಲ್ಲಿ ತಿವಿದ ಹೋರಿ! ಶಿಕಾರಿಪುರದ ಯುವಕನಿಗೆ ಗಂಭೀರ ಗಾಯ
ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ: ಶಿವಮೊಗ್ಗ ಜಿಲ್ಲೆ, ಸೊರಬ ತಾಲ್ಲುಕು ಮಾವಲಿ ಗ್ರಾಮದಲ್ಲಿ ಹೋರಿ ತಿವಿದು ಯುವಕನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ. ಮಾವಲಿ ಗ್ರಾಮದಲ್ಲಿ ಬುಧವಾರ ಹೋರಿ ಹಬ್ಬ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಹೋರಿ ತಿವಿದು ಶಿಕಾರಿಪುರದ ಆಕಾಶ್ (25) ಗಂಭೀರ ಗಾಯಗೊಂಡಿದ್ದರು. ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಅಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರೈಲ್ವೇ ಸ್ಟೇಷನ್ ಬಳಿಕ ಇದೀಗ ಶಿವಮೊಗ್ಗ ಬಸ್ ನಿಲ್ದಾಣಗಳಲ್ಲಿಯೂ ಬರಲಿದೆ … Read more