ಮನೆ ಮುಂದೆ ಕಟ್ಟಿದ್ದ ನಾಯಿ ಮೇಲೆ ಚಿರತೆ ದಾಳಿ,
ಶಿಕಾರಿಪುರ: ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಮುಳುಕೊಪ್ಪ ತಾಂಡದಲ್ಲಿ ನಿನ್ನೆ ರಾತ್ರಿ ಮನೆ ಮುಂದೆ ಕಟ್ಟಿದ್ದ ನಾಯಿ ಮೇಲೆ ಚಿರತೆ ದಾಳಿ ನಡೆಸಿರುವ ಘಟನೆ ನಡೆದಿದೆ. ಮುಳುಕೊಪ್ಪ ತಾಂಡದ ನಿವಾಸಿಯೊಬ್ಬರ ಮನೆಯ ಮುಂದೆ ಕಟ್ಟಿದ್ದ ನಾಯಿ ಮೇಲೆ ರಾತ್ರಿ ವೇಳೆ ಚಿರತೆ ಏಕಾಏಕಿ ದಾಳಿ ಮಾಡಿದೆ. ಚಿರತೆಯ ದಾಳಿಗೆ ನಾಯಿ ಜೋರಾಗಿ ಕೂಗಿಕೊಂಡಿದೆ. ನಾಯಿ ಕೂಗುವ ಸದ್ದು ಕೇಳಿ ಮನೆಯವರು ತಕ್ಷಣವೇ ಹೊರಗೆ ಬಂದು ಲೈಟ್ ಹಾಕಿದಾಗ ಚಿರತೆ ಅಲ್ಲಿಂದ ಓಡಿ ಹೋಗಿದೆ. Leopard Attack