haratalu halappa : ರಸ್ತೆಯಲ್ಲಿ RTO ಅಧಿಕಾರಿ/ ಸಭೆಯಲ್ಲಿ ಮೇಷ್ಟ್ರು – ಮಕ್ಕಳಿಗೆ ಟ್ರಾಫಿಕ್ ರೂಲ್ಸ್ನ್ನ ಹೇಳಿಕೊಟ್ಟ ಶಾಸಕ / ಪ್ರತಿಯೊಬ್ಬರೂ ತಿಳಿದುಕೊಳ್ಳುವಂತಹ ವಿಚಾರವಿದು
ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಬಲಭಾಗದಲ್ಲಿ ನಡೆದುಕೊಂಡು ಹೋಗಬೇಕೋ ಅಥವಾ ಎಡಭಾಗದಲ್ಲಿ ನಡೆದುಕೊಂಡು ಹೋಗಬೇಕೋ? ಸುದ್ದಿ ಓದುವ ಓದುಗರೇ,, ಒಮ್ಮೆ ಈ ಪ್ರಶ್ನೆಗೆ ಯೋಚಿಸಿ ಆನಂತರ ಮುಂದಕ್ಕೆ ಓದಿ. ಕಾರಣ ಇಷ್ಟೆ. ಸಾಮಾನ್ಯವಾಗಿ ರಸ್ತೆಯಲ್ಲಿ ನಡೆದುಹೋಗುವಾಗ ಎಡಕ್ಕೆ ಹೋದರಾಯ್ತು ಎಂದು ಹೋಗುವವರೇ ಜಾಸ್ತಿ.. ಎಡಬದಿಯಲ್ಲಿಯೇ ಹೋಗುವುದೇ ಸರಿ ಎಂಬ ಉತ್ತರ ನಿಮ್ಮಲ್ಲೂ ಬಂದಿರಬಹುದು. ಆದರೆ ನಡೆದುಕೊಂಡು ಹೋಗುವಾಗ ರಸ್ತೆಯ ಬಲಬದಿಯಲ್ಲಿ ಹೋಗಬೇಕು ಎಂದೇ ರೂಲ್ಸ್ನಲ್ಲಿ ಹೇಳಲಾಗಿದೆ. ಅಂದಹಾಗೆ ಇಂತಹದ್ದೊಂದು ವಿಚಾರವನ್ನು ಶಾಲೆಗಳಲ್ಲಿ ಈಗ ಹೇಳಿಕೊಡಲಾಗುತ್ತಿಲ್ಲ ಎಂಬುದೇ ಬೇಸರದ ಸಂಗತಿ. … Read more