ಶಿವಮೊಗ್ಗದ ನೂತನ ಡಿಸಿ ಆಗಿ ಪ್ರಭುಲಿಂಗ ಕವಲಿಕಟ್ಟಿ ಪದಗ್ರಹಣ! ಅಧಿಕಾರ ಹಸ್ತಾಂತರ ಮಾಡಿ ಗುರುದತ್ ಹೆಗಡೆ

Malenadu Today

ಶಿವಮೊಗ್ಗದ ನೂತನ ಜಿಲ್ಲಾಧಿಕಾರಿಯಾಗಿ  ಇಂದು ಪ್ರಭುಲಿಂಗ ಕವಲಿಕಟ್ಟಿ  ಅಧಿಕಾರವನ್ನು ವಹಿಸಿಕೊಂಡರು. ನಿರ್ಗಮಿತ ಜಿಲ್ಲಾಧಿಕಾರಿ ಗುರುದತ್​ ಹೆಗಡೆ ಹೂಗುಚ್ಚ ನೀಡುವ ಮೂಲಕ ನೂತನ ಡಿಸಿಯನ್ನು ಸ್ವಾಗತಿಸಿ  ಅಧಿಕಾರವನ್ನು ಹಸ್ತಾತಂರಿಸಿದರು. ಬೆಂಗಳೂರಿನ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದ  2013 ರ ಬ್ಯಾಚ್‌ನ ಐಎಎಸ್ ಅಧಿಕಾರಿ  ಪ್ರಭುಲಿಂಗ ಕವಲಿಕಟ್ಟಿ ಅವರನ್ನು ಶಿವಮೊಗ್ಗ ಜಿಲ್ಲೆಯ ಹೊಸ ಜಿಲ್ಲಾಧಿಕಾರಿಯನ್ನಾಗಿ ರಾಜ್ಯ ಸರ್ಕಾರ ನೇಮಿಸಿ ಡಿಸೆಂಬರ್ 31 ರಂದು ಆದೇಶ ಹೊರಡಿಸಿತ್ತು.  ಪ್ರಭುಲಿಂಗ ಕವಲಿಕಟ್ಟಿ ಈ ಹಿಂದೆ ಹಟ್ಟಿ ಚಿನ್ನದ ಗಣಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿ … Read more

ಶರಾವತಿ ಸಂತ್ರಸ್ತ್ರರಿಗೆ ಗುಡ್​ ನ್ಯೂಸ್​ ಕೊಟ್ರು ಡಿಸಿ ಗುರುದತ್​ ಹೆಗೆಡೆ! ತುಂಬಾ ಪಾಠ ಕಲಿತೆ ಎಂದಿದ್ದೇಕೆ ಗೊತ್ತಾ

ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ ಹೆಗಡೆ ವರ್ಗಾವಣೆ ಅನುಭವಗಳ ಹಂಚಿಕೆ | ಮಲೆನಾಡು ಟುಡೆ ,Shimoga DC Gurudatta Hegde Farewell Speech: Shared Experiences | Malenadu Today

Shimoga DC Gurudatta Hegde ಶಿವಮೊಗ್ಗ :  ಸವಾಲುಗಳು ಎದುರಾದಾಗ ಕೆಲಸ ಮಾಡಲು ಹೆಚ್ಚಿನ ಉತ್ಸಾಹ ಮೂಡುತ್ತದೆ ಮತ್ತು ಅಂತಹ ಸಂದರ್ಭಗಳಲ್ಲಿ ಕಲಿಯಲು ಹೆಚ್ಚಿನ ಅವಕಾಶ ಸಿಗುತ್ತವೆ ಎಂದು ನಿರ್ಗಮಿತ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಅವರು ಅಭಿಪ್ರಾಯಪಟ್ಟಿದ್ದಾರೆ. ಶಿವಮೊಗ್ಗ ಜಿಲ್ಲೆಯು ಅಂತಹ ಒಂದು ಸವಾಲಿನ ಹಾಗೂ ಅರ್ಥಪೂರ್ಣ ವೇದಿಕೆಯನ್ನು ತಮಗೆ ಒದಗಿಸಿಕೊಟ್ಟಿತ್ತು ಎನ್ನತ್ತಾ ಜಿಲ್ಲಾಧಿಕಾರಿ ಗುರುದತ್​ ಹೆಗೆಡೆ ತಮ್ಮ ಅಧಿಕಾರಾವಧಿಯ ಅನುಭವಗಳನ್ನು ಮೆಲುಕು ಹಾಕಿದ್ದಾರೆ.  ನಶೆ ಮುಕ್ತ ಶಿವಮೊಗ್ಗ ಜಿಲ್ಲೆ ಸಂಕಲ್ಪ- ವಾರ್ ಫೂಟ್ ನಲ್ಲಿ ಕೆಲಸ … Read more

ರೈಲ್ವೇ ಸ್ಟೇಷನ್​​ ಬಳಿಕ ಇದೀಗ ಶಿವಮೊಗ್ಗ ಬಸ್​ ನಿಲ್ದಾಣಗಳಲ್ಲಿಯೂ ಬರಲಿದೆ ಪ್ರೀ-ಪೇಯ್ಡ್ ಆಟೋ

auto Pre paid Counters at Bus Stands from Jan 15

ಶಿವಮೊಗ್ಗ: ನಗರದ ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್ ನಿಲ್ದಾಣಗಳಿಗೆ ಬರುವ ಪ್ರಯಾಣಿಕರ ಸುಗಮ ಸಂಚಾರಕ್ಕಾಗಿ ನೂತನವಾಗಿ ಆಟೋ ರಿಕ್ಷಾ ಪ್ರೀ-ಪೇಯ್ಡ್ ಕೌಂಟರ್‌ಗಳನ್ನು ತೆರೆಯಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು. ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಹಾಗೂ ಆಟೋ ಸಂಘಗಳ ಜಂಟಿ ಸಭೆಯಲ್ಲಿ ಅವರು ಈ ಮಾಹಿತಿ ನೀಡಿದರು.  ಎಂಗೇಜ್ಮೆಂಟ್​ಗೆಂದು ಹೋಗಿದ್ದ ತಾಯಿ ಮಗಳು ನಾಪತ್ತೆ ರೈಲ್ವೆ ನಿಲ್ದಾಣದಲ್ಲಿ ಈಗಾಗಲೇ ಕಾರ್ಯಾಚರಿಸುತ್ತಿರುವ ಪ್ರೀ-ಪೇಯ್ಡ್ ಕೌಂಟರ್ ಮಾದರಿಯಲ್ಲೇ ಬಸ್ ನಿಲ್ದಾಣಗಳಲ್ಲೂ ವ್ಯವಸ್ಥೆ ಜಾರಿಗೆ … Read more

ಡಿಸಿ ಗುರುದತ್ತ ಹೆಗಡೆ ಆದೇಶ: ಸಿಟಿಯ ಈ ರೋಡಲ್ಲಿ ಏಕಮುಖ ಸಂಚಾರ ಜಾರಿ

KFD Fatality Shivamogga Round up

ಶಿವಮೊಗ್ಗ: ಮಲೆನಾಡು ಟುಡೆ ಸುದ್ದಿ: ಶಿವಮೊಗ್ಗ ನಗರದಲ್ಲಿ ಮತ್ತೊಂದು ರಸ್ತೆಯಲ್ಲಿ ಏಕಮುಖ ಸಂಚಾರ ನಿಯಮ ಜಾರಿಗೊಳಿಸಲಾಗಿದೆ. ಈ ಮೊದಲು ಕಾಂಗ್ರೆಸ್​ ಕಚೇರಿ ಇರುವ ರಸ್ತೆಯಲ್ಲಿ ಏಕಮುಖ ಸಂಚಾರಕ್ಕೆ ಆದೇಶ ಮಾಡಲಾಗಿತ್ತು. ಇದೀಗ  ನಗರದ ಪ್ರಮುಖ ಪ್ರದೇಶಗಳಲ್ಲಿ ಒಂದಾದ ವಿನೋಬನಗರ ಪೊಲೀಸ್ ಚೌಕಿ ಪ್ರದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಾಹನ ಮತ್ತು ಸಂಚಾರ ದಟ್ಟಣೆಯನ್ನು ನಿಯಂತ್ರಿಸುವ ಉದ್ದೇಶದಿಂದ ವಿನೋಬನಗರದ 2ನೇ ಹಂತದ 2ನೇ ಮುಖ್ಯ ರಸ್ತೆಯ ಆಯ್ದ ಭಾಗದಲ್ಲಿ ಏಕಮುಖ ಸಂಚಾರಕ್ಕೆ ನಿಯಮ ಮಾಡಲಾಗಿದೆ. ಈ ಸಂಬಂಧ  ಜಿಲ್ಲಾಧಿಕಾರಿ … Read more

ಜಾತಿಗಣತಿ : ಶಿವಮೊಗ್ಗದಲ್ಲಿ ಓರ್ವ ಅಧಿಕಾರಿ ಅಮಾನತ್ತು! ಇಲಾಖಾ ವಿಚಾರಣೆಗೆ ಸೂಚನೆ! ಏನಿದು ಪ್ರಕರಣ

KFD Fatality Shivamogga Round up

ಮಲೆನಾಡು ಟುಡೆ ಸುದ್ದಿ,  ಸೆಪ್ಟೆಂಬರ್ 26 2025 : ಶಿವಮೊಗ್ಗದಲ್ಲಿ ನಡೆಯುತ್ತಿರುವ ಜಾತಿಗಣತಿಗೆ ಸಂಬಂಧಿಸಿದಂತೆ ಹಲವು ಸಮಸ್ಯೆ ಹಾಗೂ ಸವಾಲುಗಳು ಕಂಡುಬರುತ್ತಿರುವ ನಡುವೆ ಜಿಲ್ಲಾಡಳಿತ ಜಾತಿಗಣಿಯಲ್ಲಿ ಪಾಲ್ಗೊಳ್ಳದ ಅಧಿಕಾರಿಯೊಬ್ಬರ ವಿರುದ್ಧ ಶಿಸ್ತುಕ್ರಮ ಕೈಗೊಂಡಿದೆ. ಜಾತಿಗಣತಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಈ ಮೊದಲೇ ಜಿಲ್ಲಾಡಳಿತ ತಿಳಿಸಿತ್ತಷ್ಟೆ ಅಲ್ಲದೆ, ಈ ಸಂಬಂಧ ಗುರುದತ್ತ ಹೆಗಡೆಯವರು ಶಿಸ್ತುಕ್ರಮದ ಎಚ್ಚರಿಕೆಯನ್ನು ಖುದ್ದಾಗಿ ನೀಡಿದ್ದರು. ಇದೀಗ ಓರ್ವ  ಅಧಿಕಾರಿಯನ್ನು ಅಮಾನತ್ತು ಮಾಡಿದೆ. ಈ ಸಂಬಂಧ ಹೊರಬಿದ್ದ ಆದೇಶದಲ್ಲಿ ಸಾಮಾಜಿಕ ಮತ್ತು … Read more

ಗುಡ್ ನ್ಯೂಸ್! ಶಿವಮೊಗ್ಗ ರೈಲ್ವೆ ನಿಲ್ಧಾಣದಲ್ಲಿ ಸಿಗಲಿದೆ ಪ್ರೀಪೇಯ್ಡ್‌ ಆಟೋ! ರಿಕ್ಷಾ ಚಾಲಕರಿಗೆ ಮಾರ್ಗಸೂಚಿ!

Prepaid Auto Counters Shimoga Railway Station Sep 1

Prepaid Auto Counters Shimoga Railway Station Sep 1 ಸೆಪ್ಟೆಂಬರ್ 1ರಿಂದ ಶಿವಮೊಗ್ಗ ರೈಲ್ವೇ ನಿಲ್ದಾಣದಲ್ಲಿ ಪ್ರೀಪೇಯ್ಡ್‌ ಆಟೋ ಕೌಂಟರ್‌ ಆರಂಭ: ಜಿಲ್ಲಾಧಿಕಾರಿ ಗುರುದತ್ತ ಹೆಗಡೆ Prepaid Auto Counters Shimoga Railway Station Sep 1 ಶಿವಮೊಗ್ಗ, ಜುಲೈ 25 (ಮಲೆನಾಡು ಟುಡೆ ಸುದ್ದಿ): ಸಾರ್ವಜನಿಕ ಆಟೋ ಪ್ರಯಾಣಿಕರಿಗೆ ಎದುರಾಗುತ್ತಿದ್ದ ಕಿರಿಕಿರಿಯನ್ನು ನಿವಾರಿಸಿ, ಸುಗಮ ಸಂಚಾರ ವ್ಯವಸ್ಥೆ [Smooth traffic system] ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮಹತ್ವದ ನಿರ್ಣಯ ಕೈಗೊಂಡಿದೆ. ಸೆಪ್ಟೆಂಬರ್ 01ರಿಂದಲೇ ಅನ್ವಯವಾಗುವಂತೆ, … Read more