ವಿಚಾರಣೆಗೆ ಹಾಜರಾಗದ ತುಮಕೂರು ಮೂಲದ ಕಳ್ಳತನ ಕೇಸ್ನ ಆರೋಪಿ ಮತ್ತೆ ಬಂಧನ! ತುಂಗಾನಗರ ಸ್ಟೇಷನ್ವೊಂದರಲ್ಲಿಯೇ 6 ಕೇಸ್!
MALENADUTODAY.COM |SHIVAMOGGA| #KANNADANEWSWEB ಕೋರ್ಟ್ನಲ್ಲಿ ಜಾಮೀನು ಪಡೆದು ವಿಚಾರಣೆಗೂ ಹಾಜರಾಗದ ವ್ಯಕ್ತಿಯನ್ನು ಶಿವಮೊಗ್ಗ ತುಂಗಾನಗರ ಪೊಲೀಸರು ವಶಕ್ಕೆ ಪಡೆದು ಕೇಸ್ ದಾಖಲಿಸಿದ್ದಾರೆ.. ಮೂಲತಃ ತುಮಕೂರು ಜಿಲ್ಲೆಯವನಾದ ಚಂದ್ರು ಅಲಿಯಾಸ್ ಕರಿಯಾ ಎಂಬಾತನ ಮೇಲೆ ತುಂಗಾನಗರ ಠಾಣೆಯೊಂದರಲ್ಲಿ ಆರು ಕೇಸ್ಗಳಿವೆ. ಈ ಪೈಕಿ ಕೋರ್ಟ್ನಲ್ಲಿ ನಾಲ್ಕು ಕೇಸ್ಗಳಿದ್ದು, ಜಾಮೀನು ಪಡೆದಿದ್ದ ಈತ ಮತ್ತೆ ವಿಚಾರಣೆಗೂ ಹಾಜರಾಗಿರಲಿಲ್ಲ. ಹೀಗಾಗಿ ಪೊಲೀಸರು ಈತನನ್ನ ವಶಕ್ಕೆ ಪಡೆದುಕೊಂಡು ಬಂದು ಮತ್ತೊಂದು ಎಫ್ಐಆರ್ ದಾಖಲಿಸಿದ್ದಾರೆ. Shivamogga City Assembly Constituency : ಬದಲಾಯ್ತು ಗುಜರಾತ್ … Read more