₹17 ಲಕ್ಷದ ಚಾಮುಂಡಿ ಎಕ್ಸ್ಪ್ರೆಸ್ ಇನ್ನಿಲ್ಲ, ಬಯಲು ಸೀಮೆಯ ಫೇಮಸ್ ಹೋರಿಗಿರಲಿಲ್ಲ ಸರಿಸಾಟಿ
ಇತ್ತೀಚೆಗಷ್ಟೆ 17 ಲಕ್ಷ ರೂಪಾಯಿಗೆ ಖರೀದಿಯಾಗಿ, ಜನರ ಹುಬ್ಬೇರುವಂತೆ ಮಾಡಿದ್ದ ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕು ಸಮನವಳ್ಳಿಯ ಹೋರಿ ಚಾಮುಂಡಿ ಎಕ್ಸ್ಪ್ರೆಸ್ ಸಾವನ್ನಪ್ಪಿದೆ. ಈ ಸುದ್ದಿ ಹೋರಿ ಓಟ (horihabba) ಸ್ಪರ್ಧೆಯ ಅಭಿಮಾನಿಗಳಲ್ಲಿ ದುಃಖ ಮೂಡಿಸಿದೆ. ಚಾಮುಂಡಿ ಎಕ್ಸ್ಪ್ರೆಸ್ (chamundi express) ಎಂದೇ ಪ್ರಖ್ಯಾತವಾಗಿದ್ದ ಈ ಹೋರಿಯ ವಿಡಿಯೋಗಳು ಸೋಶಿಯಲ್ ಮೀಡಿಯಾಗಳಲ್ಲಿ ಜಬರ್ದಸ್ತ್ ಹಿಟ್ ಆಗಿದ್ದವು. ಸಿನಿಮಾ ಹಾಡುಗಳಿಗೆ ಈ ಹೋರಿಯ ವಿಡಿಯೋಗಳನ್ನು ಎಡಿಟ್ ಮಾಡಿ ಹರಿಬಿಡಲಾಗುತ್ತಿತ್ತು. ಮತ್ತವು ಫೇಮಸ್ ಸಹ ಆಗಿದ್ದವು. ಇದನ್ನು ಸಹ ಓದಿ … Read more