ಸಾರ್ವಜನಿಕರಿಗೆ ಸೂಚನೆ | ಇವತ್ತು ಸಾಗರ ತಾಲ್ಲೂಕಿನ ಈ ಭಾಗಗಳಲ್ಲಿ ಪವರ್ ಕಟ್
ಸಾಗರ, ಶಿವಮೊಗ್ಗ :ಬಿ.ಹೆಚ್. ರಸ್ತೆ ಅಗಲೀಕರಣದ ಹಿನ್ನೆಲೆ ಯಲ್ಲಿ ಮಾರ್ಗದಲ್ಲಿರುವ ವಿದ್ಯುತ್ ಕಂಬಗಳ ಸ್ಥಳಾಂತರ ಕಾರ್ಯ ನಡೆಯಲಿದೆ. ಈ ಸಂಬಂಧ ಸಂಬಂಧ ಸಾಗರ ನಗರ ಉಪವಿಭಾಗ ವ್ಯಾಪ್ತಿಯ ಜಂಬಗಾರು,ತ್ಯಾಗರ್ತಿಕ್ರಾಸ್ ಹತ್ತಿರ, ಬಸವನ ಹೊಳೆ, ಪಾಂಡುರಂಗ ರುಕ್ಮಿಣಿ ಲೇಔಟ್, ಜಂಬಗಾರು ಮಹಿಳಾ ವಿದ್ಯಾರ್ಥಿನಿ ನಿಲಯ ಕಡೆಗೆ ಹಾಗೂ ಜಜಂಬಗಾರು ಆಶ್ರಯ ಲೇಔಟ್‍ಗಳಲ್ಲಿ ಇವತ್ತು ವಿದ್ಯುತ್ ವ್ಯತ್ಯಯವಾಗಲಿದೆ. ಬೆಳಗ್ಗೆ 10 ಗಂಟೆಯಿಂದ ಸಂಜೆ ಐದರವರೆಗೂ ಕರೆಂಟ್ ಇರುವುದಿಲ್ಲ. ಈ ಹಿನ್ನಲೆಯಲ್ಲಿಸಾರ್ವ ಜನಿಕರು ಸಹಕರಿಸುವಂತೆ ಮೆಸ್ಕಾಂ ಸಹಾಯಕ ‘ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. … Read more