ನಿಲ್ಲಿಸಿದ್ದ ಜಾಗದಲ್ಲಿಯೇ ಎರಡು ದಿನ ಇದ್ದ ಬೈಕ್ ಮೂಡಿಸಿದ ಅನುಮಾನ! ಆಮೇಲೇನಾಯ್ತು ಗೊತ್ತಾ?
It is suspected that the bike was parked in the parking lot for two days. Do you know what happened after that?

Shivamogga Mar 26, 2024 2 ದಿನಗಳಿಂದ ಬೈಕ್‌ವೊಂದು ನಿಲ್ಲಿಸಿದ್ದಲ್ಲಿಯೇ ಇರುವುದನ್ನ ಕಂಡು ಸ್ಥಳೀಯರಲ್ಲಿ ಅನುಮಾನ ಮೂಡಿ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ ಘಟನೆಯೊಂದು ವಿನೋಬನಗರ ಪೊಲೀಸ್ ಸ್ಟೇಷನ್ ಲಿಮಿಟ್ಸ್ ನಲ್ಲಿ ನಡೆದಿದೆ.
ಕಳೆದ 24 ನೇ ತಾರೀಖು ಈ ಘಟನೆ ನಡೆದಿದ್ದು ಸ್ಟೇಷನ್ ಏರಿಯಾದಲ್ಲಿ ಬೈಕ್‌ವೊಂದು 2 ದಿನಗಳಿಂದ ಒಂದೇ ಸ್ಥಳದಲ್ಲಿ ನಿಂತಿತ್ತು. ಯಾರೋಬ್ಬರು ಬೈಕ್ ತೆಗೆದುಕೊಂಡು ಹೋಗಲು ಬಂದಿರಲಿಲ್ಲ. ಎರಡು ದಿನದಿಂದ ಬೈಕ್ ಇಲ್ಲೆ ಇದೆ. ಇದರಲ್ಲಿ ಏನಾದರೂ ಇರಬಹುದಾ ಎಂದು ಸ್ಥಳೀಯರು ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದು ಪೊಲೀಸರು ಬೈಕ್‌ನ ಮಾಹಿತಿ ತೆಗೆದುಕೊಂಡು ಅದರ ಮಾಲೀಕನ ವಿವರ ಪಡೆದು ಅವರಿಗೆ ಕರೆ ಮಾಡಿ ತಿಳಿಸಿದ್ದಾರೆ. ಆ ಬಳಿಕ ಪೊಲೀಸರು ವಿಚಾರಣೆ ನಡೆಸಿ ಬೈಕ್ ಮಾಲೀಕರಿಗೆ ಹಸ್ತಾಂತರಿಸಿದ್ದಾರೆ.