ಗಾಂಧಿಬಜಾರ್‌ & ಹೊಸನಗರದಲ್ಲಿ ಲೋಕಾಯುಕ್ತ ರೇಡ್!‌ ಕಾರಣ ಇಲ್ಲಿದೆ

This Article Written by / Malenadu Today / ಮಾರ್ಚ್ 27, 2024

Shivamogga  Mar 26, 2024 Lokayukta raid   ಅತ್ತ ಎನ್‌ಐಎ ಅಧಿಕಾರಿಗಳು ತೀರ್ಥಹಳ್ಳಿಯಲ್ಲಿ ರೇಡ್‌ ನಡೆಸಿದ್ದರೇ ಇತ್ತ ಶಿವಮೊಗ್ಗದಲ್ಲಿ ಎರಡು ಕಡೆಗಳಲ್ಲಿ ಲೋಕಾಯಕ್ತ ರೇಡ್‌ ನಡೆದಿದೆ.  ಶಿವಮೊಗ್ಗ ನಗರದ ಗಾಂಧಿ ಬಜಾರ್ ಹಾಗೂ ಹೊಸನಗರದಲ್ಲಿ ದಾಳಿ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. 

4 ಜೀಪ್ ನಲ್ಲಿ ಬಂದಿರುವ 10ಕ್ಕೂ ಹೆಚ್ಚು ಅಧಿಕಾರಿಗಳು ದಾಳಿ ನಡೆಸಿದ್ದು, ಪರಿಶೀಲನೆ ಮುಂದುವರಿದಿದೆ. ಬಿಬಿಎಂಪಿ ಚೀಫ್ ಇಂಜಿನಿಯರ್ ಒಬ್ಬರ  ಪತ್ನಿಯ ಮನೆ & ಕಾಂಪ್ಲೆಕ್ಸ್ ಮೇಲೆ ದಾಳಿ ನಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಶಿವಮೊಗ್ಗದ ಗಾಂಧಿ ಬಜಾರ್‌ನಲ್ಲಿರುವ ಕಾಂಪ್ಲೆಕ್ಸ್‌ ಒಂದರ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸ್ತಿದ್ದಾರೆ. 

ಅತ್ತ ಹೊಸನಗರ ತಾಲ್ಲೂಕಿನ ಮಳಲಿ ಗ್ರಾಮದಲ್ಲಿರುವ ತೋಟದ ಮನೆಯೊಂದರ ಮೇಲೆಯು ಅಧಿಕಾರಿಗಳು ದಾಳಿ ನಡೆಸಿದ್ದು, ಕಾರವಾರದ ಅಬಕಾರಿ ಅಧಿಕಾರಿಯೊಬ್ಬರಿಗೆ ಸೇರಿದ ಆಸ್ತಿ ಇದಾಗಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳು ಕಾರ್ಯಾಚರಣೆ ಮುಗಿದ ಬಳಿಕ ಮಾಹಿತಿ ನೀಡುವ ಸಾಧ್ಯತೆ ಇದೆ. 

ಮುಂದಿನ ಸುದ್ದಿ ಒದಿ

Leave a Comment