sunil Shivamogga on hockey 15-06-2025 / ಅಂತರಾಷ್ಟ್ರೀಯ ಹಾಕಿಯಲ್ಲಿ ಉಜ್ವಲಿಸಲಿದೆ ಶಿವಮೊಗ್ಗ ಜಿಲ್ಲೆ ಸೊರಬದ ಈ ಪ್ರತಿಭೆ!

Malenadu Today

sunil Shivamogga on hockey  ಶಿವಮೊಗ್ಗಕ್ಕೆ ಹೆಮ್ಮೆ ತಂದ ಸುನಿಲ್ ಪಿ.ಬಿ: ಅಂತರಾಷ್ಟ್ರೀಯ ಹಾಕಿ ಪಂದ್ಯಾವಳಿಗೆ ಆಯ್ಕೆ

ಶಿವಮೊಗ್ಗ: ಈ ಮಣ್ಣಿನ ಪ್ರತಿಭಾವಂತ ಕ್ರೀಡಾಪಟು, ಇಪ್ಪತ್ತು ವರ್ಷದ  ಸುನಿಲ್ ಪಿ.ಬಿ. ಅವರು ಮುಂದಿನ ತಿಂಗಳು ಬರ್ಲಿನ್‌ನಲ್ಲಿ ನಡೆಯಲಿರುವ ನಾಲ್ಕು ರಾಷ್ಟ್ರಗಳ ಕಿರಿಯರ ಹಾಕಿ ಪಂದ್ಯಾವಳಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲು ಸಜ್ಜಾಗಿದ್ದಾರೆ.

ಸೊರಬ ತಾಲೂಕಿನ ತಲ್ಲೂರಿನಲ್ಲಿ ದಿನಗೂಲಿ ನೌಕರರ ಕುಟುಂಬದಲ್ಲಿ ಜನಿಸಿದ ಸುನಿಲ್, ಬಡತನ ಮತ್ತು ಕಷ್ಟದ ನಡುವೆಯೂ ಯಶಸ್ಸಿನ ಹಾದಿಯಲ್ಲಿ ಬಹಳ ಮುಂದೆ ಸಾಗಿ ಬಂದಿದ್ದಾರೆ. ಇವರ ತಂದೆ  ಪಾಲಕ್ಷಪ್ಪ,  ತಾಯಿ ರತ್ನಮ್ಮ ಮತ್ತು ಅಣ್ಣ ಸಂದೀಪ್,  ಸುಂದರೇಶ್ ಎಂಬವರು ಈತನನ್ನು ಹಾಕಿ ಫೀಲ್ಡ್​ಗೆ ಬರುವಂತೆ ಮಾಡಿದರು.  ಸುನಿಲ್ 2015-16ರಲ್ಲಿ ಶಿವಮೊಗ್ಗ ಕ್ರೀಡಾ ವಸತಿ ನಿಲಯಕ್ಕೆ ಸೇರಿ, ಆರನೇ ತರಗತಿಗೆ ಸರ್ವೋದಯ ಶಾಲೆಗೆ ದಾಖಲಾದ ಸುನಿಲ್​ ಬಳಿಕ ಡಿವಿಎಸ್ ಪ್ರೌಢಶಾಲೆಗೆ ಸೇರಿದರು. ಅಲ್ಲಿಂದ  ಕೊಡಗಿನ ಕ್ರೀಡಾ ವಸತಿ ನಿಲಿಯದಲ್ಲಿ ಪಿಯುಸಿ ಮುಗಿಸಿದ್ದಾರೆ.  ನಂತರ ಬೆಂಗಳೂರಿನ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (SAI) ಹಾಸ್ಟೆಲ್ ಸೇರಿಕೊಂಡ ಸದ್ಯ ಅಂತಾರಾಷ್ಟ್ರೀಯ ಹಾಕಿ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿದ್ದಾರೆ. 

sunil Shivamogga on hockey 
sunil Shivamogga on hockey

sunil Shivamogga on hockey 

2022ರಲ್ಲಿ  ಸುನಿಲ್ ಕರ್ನಾಟಕ ಜೂನಿಯರ್ ತಂಡಕ್ಕೆ ಆಯ್ಕೆಯಾದರು ಮತ್ತು 2023ರಲ್ಲಿ ರಾಜ್ಯವನ್ನು ಪ್ರತಿನಿಧಿಸಿದರು. 2024ರಲ್ಲಿ, ಅವರು ಜಲಂಧರ್‌ನಲ್ಲಿ ನಡೆದ ಜೂನಿಯರ್ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ತಂಡವನ್ನು ಮುನ್ನಡೆಸಿ, ನಾಲ್ಕನೇ ಸ್ಥಾನಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಈಗ  ಅಂತರಾಷ್ಟ್ರೀಯ ಪಂದ್ಯಾವಳಿಯಲ್ಲಿ  ದೇಶವನ್ನು ಪ್ರತಿನಿಧಿಸಲು ಸಿದ್ಧರಾಗಿದ್ದಾರೆ. ಡಿಫೆಂಡರ್​ ಆಗಿರುವ  ಸುನಿಲ್​ ಈಗಾಗಲೇ ತಮ್ಮ ಸಾಮರ್ಥ್ಯವನ್ನು ಒರೆ ಹಚ್ಚಿದ್ದು, ವಿಶ್ವಕ್ಕೆ ಅದನ್ನು ಪ್ರದರ್ಶಿಸುವ ಉತ್ಸಾಹದಲ್ಲಿದ್ದಾರೆ.

Share This Article