student bus pass karnataka ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC) 2025-26 ನೇ ಸಾಲಿನ ವಿದ್ಯಾರ್ಥಿ ಬಸ್ ಪಾಸ್ ವಿತರಣೆಯನ್ನು ಆರಂಭಿಸಲಾಗಿದೆ. ಸರ್ಕಾರದ ನಿರ್ದೇಶನದಂತೆ, ವಿದ್ಯಾರ್ಥಿಗಳು ಸೇವಾಸಿಂಧು ಪೋರ್ಟಲ್ ಮೂಲಕ ಆನ್ಲೈನ್ ಅರ್ಜಿ ಸಲ್ಲಿಸಬಹುದಾಗಿದೆ. ಪಾಸ್ಗಳನ್ನು ನಂತರ ಕೆ-1 (ಕರ್ನಾಟಕ ಒನ್) ಮತ್ತು ಜಿ-1 (ಗ್ರಾಮ ಒನ್) ಕೇಂದ್ರಗಳ ಮೂಲಕ ವಿತರಿಸಲಾಗುವುದು ಎಂದು ತಿಳಿಸಲಾಗಿದೆ. ಪಾಸ್ ವಿತರಣೆಗಾಗಿ KSRTC ಬಸ್ ನಿಲ್ದಾಣಗಳಲ್ಲಿ ವಿಶೇಷ ಕೌಂಟರ್ಗಳನ್ನು ಸ್ಥಾಪಿಸಲಾಗಿದೆ. ಇದರ ಜೊತೆಗೆ, ಅಗತ್ಯವಿರುವ ಶಾಲೆಗಳು ಮತ್ತು ಕಾಲೇಜುಗಳಲ್ಲಿ ತಾತ್ಕಾಲಿಕ ಕೌಂಟರ್ಗಳನ್ನು ತೆರೆಯಲಾಗುವುದು. ಇಡಿಸಿಎಸ್ ಸಿಬ್ಬಂದಿಯು ಈ ಪ್ರಕ್ರಿಯೆಯನ್ನು ನಿರ್ವಹಿಸಲು ನಿಯೋಜಿಸಲಾಗಿದೆ.
ವಿದ್ಯಾರ್ಥಿಗಳಿಗೆ ಪಾಸ್ ಪಡೆಯಲು ಆನ್ಲೈನ್ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿದೆ. ಗಣಕೀಕೃತ ವ್ಯವಸ್ಥೆಯಿಂದ ಪಾರದರ್ಶಕತೆ ಮತ್ತು ಸುಗಮವಾದ ವಿತರಣೆ ಖಚಿತವಾಗಲಿದೆ ಎಂದು ನಿಗಮವು ನಿರೀಕ್ಷಿಸಿದೆ. ಹೆಚ್ಚಿನ ಮಾಹಿತಿಗಾಗಿ ಸೇವಾಸಿಂಧು ಪೋರ್ಟಲ್ ಅಥವಾ KSRTC ಅಧಿಕೃತ ವೆಬ್ಸೈಟ್ ಪರಿಶೀಲಿಸಬಹುದು.
student bus pass karnataka ವಿದ್ಯಾರ್ಥಿ ಬಸ್ ಪಾಸ್ ವಿತರಣೆಯಲ್ಲಿ ಗಮನಿಸಬೇಕಂದ ನಿರ್ದಿಷ್ಟ ಅಂಶಗಳು:
- ವಿದ್ಯಾರ್ಥಿ ಬಸ್ ಪಾಸ್ ವೈಯಕ್ತಿಕ ಮಾಹಿತಿಯುಳ್ಳ ಪಿವಿಸಿ ಕಾರ್ಡ್ ಆಗಿದ್ದು, ಸದರಿ ಕಾರ್ಡಿನ ಮೇಲೆ ವಿದ್ಯಾರ್ಥಿಯ ಭಾವಚಿತ್ರ, ಹೆಸರು. ಪ್ರಯಾಣದ ಮಾರ್ಗ, ಪಾಸಿನ ಮಾನ್ಯತಾ ಅವಧಿ ಮುದ್ರಿತವಾಗುತ್ತದೆ. ಪ್ರತಿಯೊಂದು ಕಾರ್ಡಿಗೂ ಅನನ್ಯ (unique) ಸಂಖ್ಯೆಯಿದ್ದು ಕಾರ್ಡಿನ ಮೇಲ್ಬಾಗದಲ್ಲಿ ಮುದ್ರಿತವಾಗುತ್ತದೆ. ಅಲ್ಲದೇ ಕ್ಯೂಆರ್ ಕೋಡ್ ನಲ್ಲಿ ವಿದ್ಯಾರ್ಥಿ ಮಾಹಿತಿ, ಪ್ರಯಾಣದ ಮಾರ್ಗ, ಪಾಸ್ ಮಾನ್ಯತೆ, ಅವಧಿ ಒಳಗೊಂಡಿರುತ್ತದೆ.
- ಸರ್ಕಾರದ ನೂತನ ಯೋಜನೆಯಾದ “ಶಕ್ತಿ ಯೋಜನೆ ಯಡಿಯಲ್ಲಿ ರಾಜ್ಯದ ಎಲ್ಲಾ ಮಹಿಳೆಯರು (ವಿದ್ಯಾರ್ಥಿನಿಯರು ಹಾಗೂ ಅಂಗತ್ವ ಅಲ್ಪಸಂಖ್ಯಾತರು ಸೇರಿದಂತೆ) ರಾಜ್ಯದೊಳಗೆ ನಗರ, ಸಾಮಾನ್ಯ ಹಾಗೂ ವೇಗದೂತ ಸಾರಿಗೆಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿರುತ್ತದೆ. ಈ ಯೋಜನೆಯಡಿ ರಾಜ್ಯದೊಳಗೆ ಪ್ರಯಾಣಿಸುವ ವಿದ್ಯಾರ್ಥಿನಿಯರು ವಿದ್ಯಾರ್ಥಿ ಬಸ್ ಪಾಸ್ ಪಡೆಯುವ ಅಗತ್ಯವಿರುವುದಿಲ್ಲ. ಆದರೆ, ವಿದ್ಯಾರ್ಥಿನಿಯರು ಬಸ್ ಪಾಸ್ ಪಡೆಯಲು ಇಚ್ಛಿಸಿದಲ್ಲಿ ಪಾಸನ್ನು ವಿತರಿಸಬಹುದಾಗಿರುತ್ತದೆ.
- ನೆರೆರಾಜ್ಯದಲ್ಲಿ ವಾಸವಿದ್ದು ಕರ್ನಾಟಕ ರಾಜ್ಯದ ಶಾಲೆ / ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹಾಗೂ ಕರ್ನಾಟಕ ರಾಜ್ಯದಲ್ಲಿ ವಾಸವಿದ್ದು, ನೆರೆ ರಾಜ್ಯದ ಶಾಲೆ / ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ, ಗಡಿಭಾಗದ ಮಾರ್ಗಗಳಲ್ಲಿನ ವಿದ್ಯಾರ್ಥಿನಿಯರು, ವಿದ್ಯಾರ್ಥಿ ರಿಯಾಯಿತಿ ಬಸ್ ಪಾಸ್ ಪಡೆಯುವ ಅಗತ್ಯವಿದೆ. ಮೇಲ್ಕಂಡ ಕ್ರಮಗಳನ್ನು ಅನುಸರಿಸಿ ಗಡಿಭಾಗದ ವಿದ್ಯಾರ್ಥಿಗಳು ಪಾಸುಗಳನ್ನು ಪಡೆಯಬಹುದಾಗಿರುತ್ತದೆ.
. ವಿದ್ಯಾರ್ಥಿಗಳ ಆಧಾರ್ ಸಂಖ್ಯೆಯನ್ನು ದಾಖಲಿಸಿದಲ್ಲಿ ವಿದ್ಯಾರ್ಥಿಗಳ ವೈಯಕ್ತಿಕ ವಿವರಗಳು ಸ್ವಯಂ ಪ್ರಕಟಗೊಳ್ಳಲು ಕ್ರಮವಹಿಸಲಾಗಿದೆ.

- ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಆರ್.ಡಿ.ಸಂಖ್ಯೆಯನ್ನು ನಮೂದಿಸಿದಲ್ಲಿ ವಿದ್ಯಾರ್ಥಿಗಳ ವಿವರಗಳು ತಂತ್ರಾಂಶದಲ್ಲಿ ಪರಿಶೀಲನೆಗೊಳ್ಳುವಂತೆ ಕ್ರಮವಹಿಸಲಾಗಿದೆ.
infromaiton news today student bus pass karnataka
ವಿದ್ಯಾರ್ಥಿ ಬಸ್ ಪಾಸ್ ವಿತರಣೆಯಲ್ಲಿ ಕೈಗೊಳ್ಳಬೇಕಾದ ಕ್ರಮ:
- ವಿದ್ಯಾರ್ಥಿಗಳು ಪಾಸಿಗಾಗಿ ಅರ್ಜಿ ಸಲ್ಲಿಸುವ ವಿಧಾನ:
- ವಿದ್ಯಾರ್ಥಿಗಳು ಸೇವಾಸಿಂಧು ಪೋರ್ಟಲ್‌ನಲ್ಲಿ ಆನ್‌ಲೈನ್ ಮುಖೇನ ಅರ್ಜಿಯನ್ನು ಸಲ್ಲಿಸಬೇಕಿರುತ್ತದೆ.
- ម – 2 (URL-sevasindhu.karnataka.gov.in).
- ಆನ್‌ಲೈನ್ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ಇರುವುದಿಲ್ಲ. ಇದಲ್ಲದೇ, ವಿದ್ಯಾರ್ಥಿಗಳು ಕರ್ನಾಟಕ-ಒನ್, ಗ್ರಾಮ-ಒನ್ ಮತ್ತು ಬೆಂಗಳೂರು-ಒನ್ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ಸಿಬ್ಬಂದಿಗಳ ಮೂಲಕವು ಅರ್ಜಿ ಸಲ್ಲಿಸಬಹುದಾಗಿದೆ. ಈ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಲು ರೂ.30/- ಸೇವಾ ಶುಲ್ಕವನ್ನು ಸದರಿ ಕೇಂದ್ರಗಳ ಸಿಬ್ಬಂದಿಗಳು ಪಡೆಯಲು ಅವಕಾಶವಿರುತ್ತದೆ.
- ರಾಜ್ಯದಲ್ಲಿ ವಾಸವಿದ್ದು ನೆರೆರಾಜ್ಯಗಳಲ್ಲಿನ ವಿದ್ಯಾಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹಾಗೂ ನೆರೆರಾಜ್ಯಗಳಲ್ಲಿ ವಾಸವಿದ್ದು, ರಾಜ್ಯದೊಳಗಿನ ವಿದ್ಯಾಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಸಹ ಸೇವಾಸಿಂಧು ಪೋರ್ಟಲ್ ಮುಖಾಂತರ ಅರ್ಜಿ ಸಲ್ಲಿಸಬೇಕಿರುತ್ತದೆ.
infromaiton news today student bus pass karnataka
- SATS/ UUCMS/ PUEಸಂಖ್ಯೆಯನ್ನು ಹೊಂದಿರುವ ವಿದ್ಯಾರ್ಥಿಗಳು ಪಾಸ್‌ಗಾಗಿ ಅರ್ಜಿ ಸಲ್ಲಿಸುವಿಕೆ:
- ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆಯು ಒದಗಿಸಿರುವ SATS (Student Achievement Tracking System), PUE (Pre University Education) asarie UUCMS (Unified University College Management System) ಸಂಖ್ಯೆಯನ್ನು ಹೊಂದಿರುವ ವಿದ್ಯಾರ್ಥಿಯು ಸಲ್ಲಿಸುವ ಅರ್ಜಿಯಲ್ಲಿ ಅಗತ್ಯವಿರುವ ಮಾಹಿತಿಯನ್ನು ಸ್ವಯಂಚಾಲಿತವಾಗಿ ತೆಗೆದುಕೊಳ್ಳಲಿದ್ದು, ಪ್ರಯಾಣದ ಮಾರ್ಗ ಮತ್ತು ಪಾಸ್ ವಿತರಣೆಯ ಕಛೇರಿ (ಕೆ1/ಜಿ1/ ಪಾಸ್ ಕೌಂಟರ್) ಆಯ್ಕೆ ಮಾಡಿ ಮಾಹಿತಿಯನ್ನು ಭರ್ತಿ ಮಾಡಿ ಆನ್‌ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸುವುದು.
- ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ ನಂತರ ಸಂಬಂಧಿಸಿದ ಎಲ್ಲಾ ವಿವರಗಳು ಸಮರ್ಪಕವಾಗಿದ್ದಲ್ಲಿ ಸ್ವಯಂಚಾಲಿತವಾಗಿ (automatic approval) ಅನುಮೋದನೆ ದೊರಕಲಿದೆ.
- ತದನಂತರ ವಿದ್ಯಾರ್ಥಿಗಳ ನೋಂದಾಯಿತ ಮೊಬೈಲ್ ಸಂಖ್ಯೆಗೆ ಪಾಸ್ ಪಡೆಯುವ ದಿನಾಂಕ, ಸಂಪರ್ಕಿಸಬೇಕಾದ ಕೆ1/ಜಿ1/ ಪಾಸ್ ಕೌಂಟರ್ನನ ವಿವರಗಳ ಸಂಬಂಧಿತ ಎಸ್‌ಎಂಎಸ್ ರವಾನೆಯಾಗಲಿದೆ.
- ವಿದ್ಯಾರ್ಥಿಗಳು ಸಂಬಂಧಿಸಿದ ಪಾಸ್ ಕೌಂಟರ್ ಗೆ ತೆರಳಿ ನಿಗದಿತ ಪಾಸ್ ಶುಲ್ಕವನ್ನು ನಗದು, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್. ಯುಪಿಐ ಮುಖೇನ ಪಾವತಿಸಿ ಪಾಸನ್ನು ಪಡೆಯಬಹುದಾಗಿದೆ.
infromaiton news today student bus pass karnataka
III. SATS/ UUCMS/ PUE ಸಂಖ್ಯೆಯನ್ನು ಹೊಂದಿಲ್ಲದ ವಿದ್ಯಾರ್ಥಿಗಳು ಪಾಸ್ ಗಾಗಿ ಅರ್ಜಿ ಸಲ್ಲಿಸುವಿಕೆ:infromaiton news today student bus pass karnataka
- SATS/UUCMS/ PUE /ಐಸಿಎಸ್‌ಇ ವಿದ್ಯಾರ್ಥಿಗಳು ಅರ್ಜಿಯಲ್ಲಿ ಅಗತ್ಯವಿರುವ ಮಾಹಿತಿಯನ್ನು ಅಂದರೆ jpg ಮಾದರಿಯಲ್ಲಿ (i) ವಿದ್ಯಾಸಂಸ್ಥೆಯಲ್ಲಿ ಅಭ್ಯಸಿಸುತ್ತಿರುವ ಬಗ್ಗೆ ನಿಗದಿತ ನಮೂನೆಯಲ್ಲಿ ಧೃಢೀಕರಣವನ್ನು, (ii) ನಿಗದಿತ ನಮೂನೆಯಲ್ಲಿ ಭಾವಚಿತ್ರವನ್ನು ಮತ್ತು (iii) ಶುಲ್ಕ ಪಾವತಿಸಿರುವ ರಸೀದಿ ಪ್ರತಿಯನ್ನು ಅಪ್‌ಲೋಡ್ ಮಾಡುವುದು. ವಿದ್ಯಾಸಂಸ್ಥೆ / ವಾಸಸ್ಥಳದಲ್ಲಿನ ವಿಳಾಸದಲ್ಲಿ ಸೂಚಿಸಿರುವಂತೆ ಪ್ರಯಾಣದ ಮಾರ್ಗ ಮತ್ತು ಪಾಸ್ ವಿತರಣೆಯ ಕಛೇರಿ (ಕೆ1/ಜಿ1/ ಪಾಸ್ ಕೌಂಟರ್) ಆಯ್ಕೆ ಮಾಡಿ ಸೂಕ್ತ ದಾಖಲೆಗಳನ್ನು jpg / image or pdf ನಮೂನೆಯಲ್ಲಿ ಅಪ್ ಲೋಡ್ ಮಾಡಿ ಅರ್ಜಿಯನ್ನು ಸಲ್ಲಿಸುವುದು.
- ನಿಗಮದ ವ್ಯಾಪ್ತಿಯ ಎಲ್ಲಾ ಶಾಲಾ / ಕಾಲೇಜುಗಳ ವಿವರಗಳನ್ನು ತಂತ್ರಾಂಶದಲ್ಲಿ ಸೇರಿಸಲಾಗಿರುತ್ತದೆ. ಒಂದು ವೇಳೆ ಶಾಲಾ / ಕಾಲೇಜುಗಳ ಹೆಸರು ಡ್ರಾಪ್‌ಡೌನ್‌ನಲ್ಲಿ ಲಭ್ಯವಿಲ್ಲದಿದ್ದಲ್ಲಿ ಅಥವಾ ವಿದ್ಯಾರ್ಥಿಯು ಪ್ರಯಾಣಿಸಬೇಕಿರುವ ಮಾರ್ಗ ಡ್ರಾಪ್ ಡೌನ್‌ನಲ್ಲಿ ಲಭ್ಯವಿಲ್ಲದೇ ಇದ್ದಲ್ಲ. OTHERS ಆಯ್ಕೆ ಬರಲಿದೆ. ಸದರಿ ವಿವರಗಳನ್ನು ಕ್ಲಿಕ್ ಮಾಡಿ. ಅಗತ್ಯ ಮಾಹಿತಿಯನ್ನು ಎಂಟ್ರಿ ಮಾಡಬೇಕಿರುತ್ತದೆ.
- ಸದರಿ ವಿದ್ಯಾರ್ಥಿಗಳ ಅರ್ಜಿಗಳನ್ನು ನಿಗಮದ ಕೌಂಟರ್ಗಗಳಿಗೆ (ಬಸ್ ನಿಲ್ದಾಣದಲ್ಲಿನ ಕೌಂಟರ್ /ವಿಭಾಗೀಯ ಕಛೇರಿ) ವರ್ಗಾಯಿಸಲಾಗುವುದು. ನಿಗಮದ ಕೌಂಟರ್ನ ಅಧಿಕಾರಿ / ಸಿಬ್ಬಂದಿಗಳು ಅರ್ಜಿಗಳನ್ನು ಪರಿಶೀಲಿಸಿ, ಅನುಮೋದಿಸಲು / ತಿರಸ್ಕರಿಸಲು ಅವಕಾಶವಿರುತ್ತದೆ. ಅರ್ಜಿ ತಿರಸ್ಕೃತಗೊಂಡಲ್ಲಿ ಸೂಕ್ತ ಕಾರಣ / ಷರಾವನ್ನು ನಿಗಮದ ಸಿಬ್ಬಂದಿಗಳು ದಾಖಲಿಸಬೇಕಿರುತ್ತದೆ. ತಿರಸ್ಕರಿಸುವ ಕಾರಣಗಳು ಡ್ರಾಪ್ ಡೌನ್‌ನಲ್ಲಿ ಲಭ್ಯವಾಗಲಿದೆ. ಅದರನ್ವಯ ವಿದ್ಯಾರ್ಥಿಗಳಿಗೆ ಎಸ್‌ಎಂಎಸ್ ರವಾನೆಯಾಗಲಿದೆ.
- ಅರ್ಜಿ ತಿರಸ್ಕೃತಗೊಂಡ ವಿದ್ಯಾರ್ಥಿಗಳು ಸರಿಯಾದ ದಾಖಲೆಗಳೊಂದಿಗೆ ಮತ್ತೊಮ್ಮೆ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ.
- ನಿಗಮದ ಅಧಿಕಾರಿಗಳು ಅನುಮೋದನೆ ನೀಡಿದ ನಂತರ, ವಿದ್ಯಾರ್ಥಿಗಳು ಅವರು ಆಯ್ಕೆ ಮಾಡಿದ ಕೆ1 / ಜಿ-1 ಪಾಸ್ ವಿತರಣಾ ಕೌಂಟರ್ಗಗಳಿಗೆ ತೆರಳಿ ನಿಗದಿತ ಪಾಸಿನ ಶುಲ್ಕವನ್ನು ನಗದು. ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್. ಯುಪಿಐ ಮುಖೇನ ಪಾವತಿಸಿ ಪಾಸನ್ನು ಪಡೆಯಬಹುದಾಗಿರುತ್ತದೆ.
infromaiton news today student bus pass karnataka
- SATS / UUCMS / PUE ಸಂಖ್ಯೆ ಹೊಂದಿರುವ ಹಾಗೂ ಹೊಂದದೇ ಇರುವ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಪ್ರತ್ಯೇಕ flow chart ಇರುತ್ತದೆ.
- SATS/UUCMS/ PUE ವಾಸಸ್ಥಳದ ವಿಳಾಸ ಮತ್ತು ವಿದ್ಯಾಸಂಸ್ಥೆಯ ವಿಳಾಸದ ನಡುವೆ ಪಾಸ್ ಪಡೆಯಲು ಅವಕಾಶವಿರುತ್ತದೆ. ಒಂದು ವೇಳೆ ಅವರ ಪ್ರಸ್ತುತ ವಾಸಸ್ಥಳ ವಿಳಾಸದಲ್ಲಿ ಬದಲಾವಣೆಯಿದ್ದಲ್ಲಿ SATS / UUCMS / PUE ತಂತ್ರಾಂಶದಲ್ಲಿ ವಿಳಾಸವನ್ನು ಅಪ್‌ಡೇಟ್ ಮಾಡುವುದು ಅವಶ್ಯವಿರುತ್ತದೆ.
- ಡಿಪ್ಲೋಮಾ, ಐಟಿಐ, ವೃತ್ತಿಪರ, ಮೆಡಿಕಲ್ ಇತ್ಯಾದಿ ತರಗತಿಗಳ ವಿದ್ಯಾರ್ಥಿಗಳು SATS / UUCMS / PUE ಸಂಖ್ಯೆ ಹೊಂದಿರದ ವಿದ್ಯಾರ್ಥಿ ವರ್ಗದಡಿ ಬರಲಿದ್ದಾರೆ.
- ಸಿಬಿಎಸ್‌ಇ ಮತ್ತು ಐಸಿಎಸ್ ಇ ವಿದ್ಯಾರ್ಥಿಗಳು SATS ಸಂಖ್ಯೆಯನ್ನು ಹೊಂದಿರದ ವರ್ಗದಡಿಯಲ್ಲಿ ಅರ್ಜಿ ಸಲ್ಲಿಸುವುದು.
- SATS / UUCMS / PUE ಸಂಖ್ಯೆಯನ್ನು ಹೊಂದಿರದ ವಿದ್ಯಾರ್ಥಿಗಳು ವಾಸಸ್ಥಳ ವಿಳಾಸ ಹಾಗೂ ಇತರೆ ಮಾಹಿತಿ ಬಗ್ಗೆ ವಿದ್ಯಾ ಸಂಸ್ಥೆಯ ಮುಖ್ಯಸ್ಥರಿಂದ ಧೃಡೀಕರಣ ಪತ್ರ ಪಡೆದು ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ.
- ವಿದ್ಯಾರ್ಥಿ ಬಸ್‌ಪಾಸ್ ವಿತರಿಸಲು ಗರಿಷ್ಠ ಪ್ರಯಾಣ ಮಿತಿ 60 ಕಿ.ಮೀ ಆಗಿರುತ್ತದೆ.
- ವಿದ್ಯಾರ್ಥಿಗಳು ಕೌಂಟರ್ನ ನಲ್ಲಿ ವಿದ್ಯಾರ್ಥಿ ಪಾಸು ಪಡೆಯಲು ಖುದ್ದಾಗಿ ಮುದ್ರಿತ ಸಕಾಲ ಸ್ವೀಕೃತಿ (Sakala Acknowledgement) ಹಾಗೂ ನಿಗದಿತ ಪಾಸಿನ ಶುಲ್ಕದೊಂದಿಗೆ ಹಾಜರಾಗತಕ್ಕದ್ದು.
infromaiton news today student bus pass karnataka
- ಸಂಸ್ಕರಣಾ ಶುಲ್ಕವಾಗಿ ರೂ.100/- ಪಡೆಯುವುದನ್ನು ಮುಂದುವರೆಸಲಾಗಿದೆ.
- ಅಪಘಾತ ಪರಿಹಾರ ನಿಧಿ ವಂತಿಕೆ ಮಾಸಿಕ ರೂ.5/- ರಂತೆ 10 ತಿಂಗಳಿಗೆ ರೂ.50/- ಮತ್ತು 12 ತಿಂಗಳಿಗೆ ರೂ.60/- ಪಡೆಯುವುದನ್ನು ಮುಂದುವರೆಸಲಾಗಿದೆ.
- ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಿಸುವ ವ್ಯವಸ್ಥೆಯನ್ನು ಮುಂದುವರೆಸಲಾಗಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಂದ ಸಂಸ್ಕರಣಾ ಶುಲ್ಕ ಮತ್ತು ಅಪಘಾತ ಪರಿಹಾರ ನಿಧಿ ಶುಲ್ಕ ಮಾತ್ರ ಪಡೆಯುವುದು.
- ಶೈಕ್ಷಣಿಕ ಕೋರ್ಸ್ ಗಳನ್ನು ಗಮನದಲ್ಲಿರಿಸಿ ಐಟಿಐ ವರ್ಗದ ವಿದ್ಯಾರ್ಥಿಗಳಿಗೆ 12 ತಿಂಗಳು ಅವಧಿಯ ಬಸ್ ಪಾಸ್ ವಿತರಿಸುವುದು. ಇತರೆ ವರ್ಗದ ವಿದ್ಯಾರ್ಥಿಗಳಿಗೆ 10 ತಿಂಗಳು ಅವಧಿಯ ಬಸ್ ಪಾಸ್‌ಗಳನ್ನು ವಿತರಿಸುವುದು.
- ಮೇಲ್ಕಂಡ ದರಗಳನ್ನು ವಿದ್ಯಾರ್ಥಿಯು ಕೆ1/ಜಿ1/ ಬಸ್ ನಿಲ್ದಾಣದ ಪಾಸ್ ಕೌಂಟರ್‌ಗಳಲ್ಲಿ ಪಾವತಿಸಿ ಪಾಸ್‌ಗಳನ್ನು ಪಡೆಯಬೇಕಿರುತ್ತದೆ
infromaiton news today student bus pass karnataka