shivamogga news : ಶಿವಮೊಗ್ಗ ಎಸ್ಎಸ್ಯುಐ ನಗರ ಅಧ್ಯಕ್ಷರಾಗಿ ರವಿಕುಮಾರ್ ಆಯ್ಕೆ
ಶಿವಮೊಗ್ಗ ನಗರ ಎನ್ಎಸ್ಯುಐ ಅಧ್ಯಕ್ಷರನ್ನಾಗಿ ರವಿಕುಮಾರ್ ರವರನ್ನು ಆಯ್ಕೆ ಮಾಡಲಾಗಿದೆ.
ರವಿಕುಮಾರ್ ಶಿವಮೊಗ್ಗ ಜಿಲ್ಲಾ ಎನ್ ಎಸ್ ಯು ಐ ನಲ್ಲಿ ಸುಮಾರು 7 ವರ್ಷ ಗಳಿಂದ ಸಂಘಟನೆಯಲ್ಲಿದ್ದು ನಗರ ಕಾರ್ಯದರ್ಶಿ ಹಾಗು ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಸಂಘಟನೆಯನ್ನು ಬೆಳೆಸಲು ಶ್ರಮಿಸಿದ್ದಾರೆ. ಈ ಹಿನ್ನಲೆ ಜಿಲ್ಲಾ ನಾಯಕರ ಸೂಚನೆಯಂತೆ ಶಿವಮೊಗ್ಗ ನಗರ ಎನ್ಎಸ್ ಯು ಐ ನ ಅಧ್ಯಕ್ಷರನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ಜಿಲ್ಲಾ ಅಧ್ಯಕ್ಷರಾದ ವಿಜಯ ಕುಮಾರ್ ರವರು ಆದೇಶಿಸಿದ್ದಾರೆ.ಹಾಗೆಯೇ ತಮಗೆ ವಹಿಸಿರುವ ಜವಬ್ದಾರಿಯನ್ನು ತಮ್ಮ ವಿಧಾನಸಭಾಕ್ಷೇತ್ರದಲ್ಲಿ ಬರುವ ಸ್ಥಳಿಯ ನಾಯಕರೊಡನೆ ಸೇರಿಕೊಂಡು ಸಂಘಟನೆಯನ್ನು ಹಾಗೂ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಎಲ್ಲಾ ರೀತಿಯಲ್ಲಿ ಶ್ರಮಿಸಬೇಕೆಂದು ಕೋರಿದ್ದಾರೆ.