ಶೋರೂಂ ಬಳಿ ಬೈಕ್​ ನಿಲ್ಲಿಸಿದಾತನಿಗೆ ಬೆಳಿಗ್ಗೆ ಎದ್ದು ನೋಡಿದಾಗ ಕಾದಿತ್ತು ಶಾಕ್​ : ಏನಿದು ಘಟನೆ

prathapa thirthahalli
Prathapa thirthahalli - content producer

Stolen motorcycle  ಶೋರೂಂ ಬಳಿ ಬೈಕ್​ ನಿಲ್ಲಿಸಿದಾತನಿಗೆ ಬೆಳಿಗ್ಗೆ ಎದ್ದು ನೋಡಿದಾಗ ಕಾದಿತ್ತು ಶಾಕ್​ : ಏನಿದು ಘಟನೆ

ಶಿವಮೊಗ್ಗ ನಗರದ ಬೈಪಾಸ್ ರಸ್ತೆ, ವಾದಿಎಹುದಾದಲ್ಲಿ  ರಾತ್ರಿ ನಿಲ್ಲಿಸಿದ್ದ ಬೈಕ್​ ಕಳುವಾಗಿದೆ ಎಂದು  ಆರೋಪಿಸಿ ತುಂಗಾನಗರದ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿಲಾಗಿದೆ.

ಶಿವಮೊಗ್ಗದ ಹೊಟೆಲ್​ ಒಂದರಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ತನ್ನ ಕೆಲಸ ಮುಗಿಸಿ ರಾತ್ರಿ 10 ಗಂಟೆಗೆ ಕಾರ್​​ ಶೋರೂಂ ಒಂದರ ಬಳಿ ತಮ್ಮ  ಟಿವಿಎಸ್ ಸ್ಮಾರ್ ಸ್ಪೋರ್ಟ್ ಬೈಕನ್ನು ನಿಲ್ಲಿಸಿದ್ದರು. ಹಾಗೆಯೇ ತನ್ನ ಮನೆಗೆ ಹೋಗಿದ್ದರು. ಆದರೆ, ಬೆಳಿಗ್ಗೆ ಬಂದು ನೋಡಿದಾಗ ಬೈಕ್ ಅಲ್ಲಿ ಇರಲಿಲ್ಲ. ಇದನ್ನು ಕಂಡು ಆಘಾತಕ್ಕೊಳಗಾದ ಬೈಕ್ ಮಾಲೀಕ, ಯಾರೋ ಕಳ್ಳರು ತಮ್ಮ 20 ಸಾವಿರ ರೂ. ಮೌಲ್ಯದ ಬೈಕನ್ನು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. 

ಈ ಸಂಬಂಧ ಅವರು ತುಂಗಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಕಳ್ಳರನ್ನು ಶೀಘ್ರವಾಗಿ ಪತ್ತೆಹಚ್ಚುವಂತೆ ಮನವಿ ಮಾಡಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.

 

Share This Article