ಡೇರ್‌ ಡೆವಿಲ್ ಮುಸ್ತಾಫಾ ಸ್ಟೈಲ್​ನಲ್ಲಿ ಶಿವಮೊಗ್ಗ ರಾಗಿಗುಡ್ಡದಲ್ಲಿ ಎಸ್​ಪಿ, ಡಿಸಿ ಕ್ರಿಕೆಟ್! ಇದರ ವಿಶೇಷನೇ ಬೇರೆ

SHIVAMOGGA  |  Jan 24, 2024  | ಶಿವಮೊಗ್ಗದಲ್ಲಿ ಈ ಹಿಂದೆ  ಈದ್ ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ಶಿವಮೊಗ್ಗದ ರಾಗಿಗುಡ್ಡದ ಶಾಂತಿ ನಗರದಲ್ಲಿ ನಡೆದ ತಲ್ಲಣದ ಬಗ್ಗೆ ನಿಮಗೆ ಗೊತ್ತೆ ಇದೆ. ಆದರೆ  ಒಡೆದ  ಮನಸ್ಸುಗಳು ಬೆಸೆಯುವುದಕ್ಕೆ ಇನ್ನಷ್ಟು ಸಮಯ ಬೇಕಿದೆ. ಅದಕ್ಕೆ ವೇದಿಕೆಯು ಬೇಕಿದೆ. ಅಂತಹದ್ದೊಂದು ವೇದಿಕೆ ಮೂಲಕ ಮನಸ್ಸುಗಳನ್ನ ಬೆಸೆಯುವ ಪ್ರಯತ್ನಕ್ಕೆ ಶಿವಮೊಗ್ಗ ಪೊಲೀಸರು ಮುಂದಾಗಿದ್ದಾರೆ. ಎಸ್ಪಿ ಮಿಥುನ್ ಕುಮಾರ್ ಆಶಯದಂತೆ ಶಾಂತಿ ನಗರದ ಯುವಕರನ್ನು ಧರ್ಮಾತೀತವಾಗಿ ಒಂದು ತಂಡದಲ್ಲಿ ಸೇರಿಸಿ, ಕ್ರಿಕೇಟ್ ಆಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತ ವರದಿ ಇಲ್ಲಿದೆ.

Shivamogga SP and Shivamogga DC had organised a friendly cricket cup tournament at Ragigudda

Shivamogga SP and Shivamogga DC had organised a friendly cricket cup tournament at Ragigudda

ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ

ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಈದ್ ಮಿಲಾದ್ ಮೆರವಣಿಗೆ ಶಿವಮೊಗ್ಗದಲ್ಲಿ ಶಾಂತಿಯುತವಾಗಿ ನಡೆಯುತ್ತಿತ್ತು. ಆದರೆ ಶಿವಮೊಗ್ಗದ ರಾಗಿಗುಡ್ಡದ ಶಾಂತಿ ನಗರದಲ್ಲಿ ಮಾತ್ರ ಅಂದು ಅಶಾಂತಿ ಮನೆ ಮಾಡಿತ್ತು.ಪೊಲೀಸರ ಲಾಠಿಚಾರ್ಜ್​ , ಸೆಕ್ಷನ್ ಜಾರಿ, ಆರೋಪಿಗಳ ಅರೆಸ್ಟ್ ಹೀಗೆ ನಡೆದು ನಂತರದಲ್ಲಿ ಶಾಂತಿನಗರದಲ್ಲಿ  ಪರಿಸ್ಥಿತಿ ಶಾಂತಿಯುತವಾಗಿತ್ತು.  .

Shivamogga SP and Shivamogga DC had organised a friendly cricket cup tournament at Ragigudda

ಮನಸ್ಸುಗಳ ಬೆಸುಗುಗೆ ಮುಂದಾದ ಪೊಲೀಸರು

ಶಾಂತಿ ನಗರರದಲ್ಲಿ ಹಿಂದು ಮುಸ್ಲಿಂ ಕ್ರಿಶ್ಚಿಯನ್ ಮೂರು ಸಮದಾಯವರು ಇದ್ದಾರೆ ಮತ್ತು ಹೆಚ್ಚು ಇದ್ದಾರೆ. ಇಲ್ಲಿನ ಯುವಕರು ಮತೀಯ ಭಾವನೆಯಿಂದ ಹೊರಬಬರಬೇಕು. ಭಾವೈಕ್ಯತೆಯನ್ನು ಬೆಳೆಸಿಕೊಳ್ಳಬೇಕು ಎಂಬ ಉದ್ದೇಶದಿಂದ ಶಿವಮೊಗ್ಗ ಡಿಸಿ ಡಾ.ಆರ್ ಸೆಲ್ವಮಣಿ ಮತ್ತು ಎಸ್ಪಿ ಮಿಥುನ್ ಕುಮಾರ್ ಯುವಕರ ಮನಸ್ಸುಗಳನ್ನು ಬೆಸೆಯುವ ಕಾರ್ಯಕ್ಕೆ ಮುಂದಾದರು.

Shivamogga SP and Shivamogga DC had organised a friendly cricket cup tournament at Ragigudda

 ಅದರ ಮುಂದುವರಿದ ಭಾಗವಾಗಿ ಶಾಂತಿನಗದ ಮೈದಾನದಲ್ಲಿ ಕ್ರಿಕೇಟ್ ಪಂದ್ಯ ಆಯೋಜಿಸಿದ್ದರು. ಹಿಂದು ಮುಸ್ಲಿಂ ಕ್ರಿಶ್ಚಿಯನ್ ಸಮುದಾಯದ ಯುವಕರನ್ನು ಒಂದು ಟೀಂ ನಲ್ಲಿ ಸೇರಿಸಿ ತಂಡ ರಚಿಸಲಾಗಿದೆ.  ಶಾಂತಿ ನಗರದ ಯುವಕರು ಜಿಲ್ಲಾಡಳಿತ ಮತ್ತು ಪೊಲೀಸರ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. ಶಾಂತಿ ನಗರದ ಯುವಕರು, ಪೊಲೀಸರು ಹಾಗು ಪತ್ರಕರ್ತರು ಒಳಗೊಂಡ 150 ಮಂದಿಯ ಒಟ್ಟು ಎಂಟು  ತಂಡಗಳನ್ನುರಚಿಸಲಾಗಿದೆ. ಈ ತಂಡಗಳು ಪರಸ್ಪರ ಸ್ಪರ್ಧೆಯಲ್ಲಿ ಪಾಲ್ಗೊಂಡು ಸಾಮರಸ್ಯ ಹಾಗೂ ಸ್ನೇಹದ ಗೆಲುವು ಸಾಧಿಸಲು ಸೆಣಸಾಡಲಿವೆ. 

Shivamogga SP and Shivamogga DC had organised a friendly cricket cup tournament at Ragigudda

ಸೌಹಾರ್ದ ರಿಪಬ್ಲಿಕ್ ಕಪ್  -2024

ಇಂದಿನಿಂದ ಆರಂಭಗೊಂಡ ಕ್ರಿಕೇಟ್ ಪಂದ್ಯಾವಳಿ ನಾಳೆ ಸಂಜೆ (25-01-24) ಮುಕ್ತಾಯವಾಗಲಿದೆ. ಇಂದಿನ ಕಾರ್ಯಕ್ರಮಕ್ಕೆ ಡಿಸಿ ಸೆಲ್ವಮಣಿ ಎಸ್ಪಿ ಮಿಥುನ್ ಕುಮಾರ್ ಚಾಲನೆ ನೀಡಿದರು. ನಗರದ ಎಲ್ಲಾ ಠಾಣೆಯ ಇನ್ ಸ್ಪೆಕ್ಟರ್ ಸಬ್ ಇನ್ ಸ್ಪೆಕ್ಟರ್ ಗಳು ಸೇರಿದಂತೆ ಪೊಲೀಸ್ ಸಿಬ್ಬಂದಿ ಶಾಂತಿ ನಗರದ ಯುವಕರೊಂದಿಗೆ ಕ್ರಿಕೇಟ್ ಪಂದ್ಯದಲ್ಲಿ ತೊಡಗಿಸಿಕೊಂಡಿದೆ.

Shivamogga SP and Shivamogga DC had organised a friendly cricket cup tournament at Ragigudda

ಶಾಂತಿ ನಗರದ ಜನತೆಯನ್ನು ಸೇರಿಸುವ ಪ್ರಯತ್ನವಾಗಬೇಕಿತ್ತು

ಇಂದು ಕ್ರಿಕೇಟ್ ಪಂದ್ಯಾವಳಿ ಆರಂಭವಾದಾಗ ಮೈದಾನದಲ್ಲಿ ಕೇವಲ ಕ್ರೀಕೇಟ್ ಟೀಂ ನ ಸದಸ್ಯರು, ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಶಾಂತಿ ನಗರದ ಮನೆ ಮನೆಗೆ ಪೊಲೀಸರು ಹೋಗಿ ಕ್ರಿಕೇಟ್ ಪಂದ್ಯ ನೋಡಿ ಬೆಂಬಲಿಸುವಂತೆ ಮನವಿ ಮಾಡಿದ್ರು. ನೂರಾರು ಸಂಖ್ಯೆಯಲ್ಲಿ ಜನರು ಮೈದಾನದಲ್ಲಿ ಜಮಾಯಿಸುತ್ತಿದ್ದರು. ಆಗ ಪೊಲೀಸರ ಉದ್ದೇಶ ಇನ್ನಷ್ಟು ಸಾರ್ಥಕತೆ ಕಾಣುತ್ತಿತ್ತು ಎಂಬ ಅಭಿಪ್ರಾಯವನ್ನು ಶಾಂತಿ ನಗರದ ಜನತೆ ಮಲೆನಾಡು ಟುಡೆಗೆ ತಿಳಿಸಿದರು. ಇದರ ಹೊರತಾಗಿಯೂ ಎಸ್ಪಿ ಮಿಥುನ್ ಕುಮಾರ್ ಗಲಭೆ ಪೀಡಿತ ರಾಗಿಗುಡ್ಡದಲ್ಲಿ ಶಾಂತಿಯ ತೋಟ ನೆಲಸುವಂತೆ ಮಾಡುವ ಪ್ರಯತ್ನದ ಭಾಗವಾಗಿ ಕ್ರಿಕೇಟ್ ಪಂದ್ಯಾವಳಿ ಆಯೋಜಿಸಿದ್ದು ನಿಜಕ್ಕೂ ಶ್ಲಾಘನೀಯ

Shivamogga SP and Shivamogga DC had organised a friendly cricket cup tournament at Ragigudda

Leave a Comment

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು