ರಾಗಿಗುಡ್ಡ ಕೇಸ್​ | ಮತ್ತೊಂದು ಇನ್​ಸ್ಟಾ ವಿಡಿಯೋ ವಿರುದ್ಧ ದಾಖಲಾಯ್ತು FIR

ಶಿವಮೊಗ್ಗದ ರಾಗಿಗುಡ್ಡದ ಘಟನೆ ಸಂಬಂಧ ವಿಡಿಯೋ ಹರಿಬಿಟ್ಟ ವ್ಯಕ್ತಿ ವಿರುದ್ಧ ಕೇಸ್ ದಾಖಲಾಗಿದೆ |Shimoga Tunganagar Police Station FIR Case ಶಿವಮೊಗ್ಗ ತುಂಗಾನಗರ ಪೊಲೀಸ್ ಸ್ಟೇಷನ್​ ಎಫ್​ಐಆರ್​ ಪ್ರಕರಣ

ರಾಗಿಗುಡ್ಡ ಕೇಸ್​ |  ಮತ್ತೊಂದು ಇನ್​ಸ್ಟಾ ವಿಡಿಯೋ ವಿರುದ್ಧ ದಾಖಲಾಯ್ತು FIR

KARNATAKA NEWS/ ONLINE / Malenadu today/ Oct 30, 2023 SHIVAMOGGA NEWS

TUNGA NAGARA POLICE STATION | ಶಿವಮೊಗ್ಗದಲ್ಲಿ ರಾಗಿಗುಡ್ಡದಲ್ಲಿ ನಡೆದ ಘಟನೆಯ ವಿಚಾರದಲ್ಲಿ ಇನ್ನೂ ಸಹ ಸೋಶಿಯಲ್ ಮೀಡಿಯಾದ ಪೋಸ್ಟ್​ಗಳು ಹರಿದಾಡುತ್ತಲೇ ಇದೆ. ಈ ಸಂಬಂಧ ಶಿವಮೊಗ್ಗದ ತುಂಗಾನಗರ ಪೊಲೀಸ್ ಸ್ಟೇಷನ್​ನಲ್ಲಿ ಮತ್ತೊಂದು ಸು ಮೋಟೋ  (suo moto)ಎಫ್ಐಆರ್ ದಾಖಲಾಗಿದೆ. 

READ : ಇಸ್ರೇಲ್​ನಿಂದ ಮಧು ಬಂಗಾರಪ್ಪರಿಗೆ ವಿಡಿಯೋ ಕಾಲ್ | ಶಿವಮೊಗ್ಗದ ವ್ಯಕ್ತಿಗೆ ಸಚಿವರ ಸಹಾಯ!

IPC 1860 (U/s-505(2)) ಸೆಕ್ಷನ್​ ಅಡಿಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ Royal King sameer  ಎಂಬ ಇನ್​ಸ್ಟಾಗ್ರಾಂ ಅಕೌಂಟ್​ನ ಮಾಲೀಕನ ವಿರುದ್ಧ ಕೇಸ್ ದಾಖಲಾಗಿದೆ. ಈ ಹಿಂದೆ ಶಿವಮೊಗ್ಗ ರಾಗಿಗುಡ್ಡ ಕಟ್ ಔಟ್ ನ ಗಲಭೆಗೆ ಸಂಬಂದಿಸಿದ ಪ್ರಚೋಧನಾಕಾರಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಈತ ಹರಿಬಿಟ್ಟಿರುವ ಆರೋಪ ಎದುರಿಸುತ್ತಿದ್ಧಾನೆ. 



12 ಸೆಕೆಂಡ್  ವಿಡಿಯೋ ಅಪ್​ಲೋಡ್​ ಮಾಡಿದ್ದ್ದ ವ್ಯಕ್ತಿ ಅದರಲ್ಲಿ  ಜನರನ್ನು ಉದ್ರಿಕ್ತಗೊಳಿಸುವ ಹಾಗೂ ಸಾಮಾಜಿಕ ಶಾಂತಿ ಕದಡುತ್ತಿರುವ ಪ್ರಚೋಧನಾಕಾರಿ ಅಂಶಗಳಿರುವುದು ಗೊತ್ತಾಗಿದೆ. ಹೀಗಾಗಿ ವಿಡಿಯೋ ಸಾಕ್ಷಿಕರಿಸಿ, ಅದನ್ನು ಪೋಸ್ಟ್ ಮಾಡಿದವರ ವಿರುದ್ದ ಪಿಎಸ್​ಐ ದೂರು ನೀಡಿ ಎಫ್​ಐಆರ್ ದಾಖಲಿಸಿದ್ದಾರೆ.