KARNATAKA NEWS/ ONLINE / Malenadu today/ Oct 2, 2023 SHIVAMOGGA NEWS
ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದ ಗಲಾಟೆಯ ಕುರಿತಾಗಿ ಎಸ್ಪಿ ಮಿಥುನ್ ಕುಮಾರ್ ಮಾಹಿತಿ ನೋಡಿದ್ದಾರೆ. ರಾಗಿಗುಡ್ಡದಲ್ಲಿ ಪರಿಸ್ಥಿತಿ ಶಾಂತವಾಗಿದ್ದು, ಯಾವುದೇ ಧಗ..ಧಗ ಕೊತ …ಕೊತ ಇಲ್ಲ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ವಾಟ್ಸ್ಯಾಪ್ ಸಂದೇಶ ನೀಡಿರುವ ಅವರು, ರಾಗಿ ಗುಡ್ಡದ ಘಟನೆಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಒಟ್ಟು 24 ಪ್ರಕರಣಗಳನ್ನು ದಾಖಲಿಸಲಾಗಿದೆ. ಇದುವರೆಗೂ 60 ಜನರನ್ನು ಬಂಧಿಸಲಾಗಿದೆ..
ಒಂದು 4 ಚಕ್ರ, ಒಂದು 3 ಚಕ್ರ ಮತ್ತು 2 ದ್ವಿಚಕ್ರ ವಾಹನಗಳು ಘಟನೆಯಲ್ಲಿ ಜಖಂಗೊಂಡಿದ್ದು, ಒಟ್ಟು. 7 ಮನೆಗಳ ಗಾಜು ಒಡೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇನ್ನೂ ಸ್ಥಳದಲ್ಲಿ ಘಟನೆ ನಡೆದು ಅರ್ಧಗಂಟೆಯ ಒಳಗಾಗಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಶಿವಮೊಗ್ಗ ನಗರದಲ್ಲಿ ಘಟನೆಯು ಯಾವುದೇ ಪರಿಣಾಮ ಬೀರಿಲ್ಲ.. ಪರಿಸ್ಥಿತಿ ಶಾಂತವಾಗಿದ್ದು, ಇಲ್ಲಿ ಯಾವುದೇ ಧಗಾ ಧಗಾ ಅಥವಾ ಕೊತ ಕೊತ ನಡೆಯುತ್ತಿಲ್ಲ.. ಸಾರ್ವಜನಿಕರು ಗಾಬರಿಯಾಗುವ ಅಥವಾ ವಿಚಲಿತರಾಗುವ ಅವಶ್ಯಕತೆ ಇಲ್ಲ ಎಂದು ತಿಳಿಸಿದ್ದಾರೆ.
ಇನ್ನಷ್ಟು ಸುದ್ದಿಗಳು
