ಖುದ್ದು ಕೋರ್ಟ್ ಗೆ ಹಾಜರಾಗಿ ಸಾಕ್ಷಿಗಳಿಗೆ ಧೈರ್ಯ ತುಂಬುತ್ತಿದ್ದ ಎಸ್ಪಿ ಅಭಿನವ್ ಖರೆ. ಕೇಸ್​ ಗೆದ್ದಿದ್ದು ಹೇಗೆ ಗೊತ್ತಾ..?  ಜೆಪಿ ಬರೆಯುತ್ತಾರೆ Part-02

SP Abhinav Khares ಶಿವಮೊಗ್ಗ | ಶಿವಮೊಗ್ಗ ನಗರದಲ್ಲಿದೆ 8 ನಟೋರಿಯಸ್ ರೌಡಿಗಳ ಗ್ಯಾಂಗ್. ನಗರದಲ್ಲಿದ್ದಾರೆ 1500 ಅಧಿಕ ಬಡ್ಡಿಂಗ್ ರೌಡಿಗಳು. ಶಿವಮೊಗ್ಗ ನಗರದ ರೌಡಿಗಳಿಗೆ ಕೊಲೆ ಪ್ರಕರಣದಲ್ಲಿ ಗ್ಯಾಂಗ್ ಸಮೇತ ಶಾಶ್ವಾತವಾಗಿ ಜೈಲಿನಲ್ಲಿ ಮುದ್ದೆ ಮುರಿಯುವಂತೆ ಮಾಡಬೇಕೆಂಬ ಪಣತೊಟ್ಟ ಎಸ್ಪಿ ಅಭಿನವ್ ಖರೆ… ಶಿವಮೊಗ್ಗದಲ್ಲಿ ಪೆಂಡಿಂಗ್ ಇರೋ ನಟೋರಿಯಸ್ ರೌಡಿಗಳ ಕೇಸುಗಳನ್ನು ಮೊದಲು ಸ್ಟಡಿ ಮಾಡ್ದ್ರು… ಅದ್ರಲ್ಲಿ ಶಿವಮೊಗ್ಗದಲ್ಲಿ ರಿಪಿಟೆಡ್ಲಿ ಕ್ರೈಂ ಅಟೆಮ್ಟ್ ಮಾಡ್ತಿರೋ… 8 ಗ್ಯಾಂಗ್ ಪಟ್ಟಿ ರೆಡಿ ಮಾಡಿದ್ರು.. 

SUNCONTROL_FINAL-scaled

1.ಮೃತ ಹಂದಿ ಅಣ್ಣಿ ಮತ್ತು ಸಹಚರರ ತಂಡ. 2. ಮೃತ ಬಂಕ್ ಬಾಲು ಅಂಡ್ ಟೀಂ. 3. ಹೆಬ್ಬೆಟ್ ಮಂಜ ಅಂಡ್ ಟೀಂ 4. ಲೇಟ್ ನವುಲೆ ಮೋಹನ್ ಅಂಡ್ ಟೀಂ. 5. ಮಾರ್ಕೇಟ್ ಲೋಕಿ ಅಂಡ್ ಟೀಂ. 6. ಕೀಲಿ ಇಮ್ರಾನ್ ಮತ್ತು ಮೃತ ಯಾಸಿನ್ ಖುರೇಷಿ ಟೀಂ. 7. ಲೇಟ್ ಬಚ್ಚೆ ಅಂಡ್ ಟೀಂ. 8. ಸಾತು ಅಂಡ್ ಅದರ್ಸ್ ಟೀಂ. 9. ಸಾಗರದ ಮೊಹಮ್ಮದ್ ಆಲಿ ಅಂಡ್ ಟೀಂ. 10. ಕಾಡಾ ಕಾರ್ತಿ ಅಂಡ್ ಟೀಂ (ಪ್ರಸ್ತುತ) 11. ಆದಿಲ್ ಟೀಂ (ಪ್ರಸ್ತುತ). ಆ ಟೀಂ ನಲ್ಲಿ ಪ್ರಮುಖವಾಗಿರೋ ಗ್ಯಾಂಗ್ ಅವರ ಕೇಸ್ ಹಿಸ್ಟರಿ ನೋಡ್ದಾಗ ಅಭಿನವ್ ಖರೆ ಕೂಡ ಅಂದು ದಂಗಾಗಿ ಹೋಗಿದ್ರು.. ಒಬ್ಬೊಬ್ಬ ರೌಡಿ ಮೇಲೆ ಮಿನಿಮಮ್ ಅಂದ್ರೂ 25 ಕೇಸುಗಳಿವೆ… ಈ ನಟೋರಿಯಸ್ ರೌಡಿಗಳ ಟೀಂ ದರೋಡೆ, ಕೊಲೆ ಸುಲಿಗೆ, ಹಪ್ತಾ ವಸೂಲಿ, ರಿಯಲ್ ಎಸ್ಟೇಟ್ ವ್ಯವಹಾರ ಸೇರಿದಂತೆ ಹತ್ತು ಹಲವು ಅಪರಾಧ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದೆ.

ಎಸ್​ ಪಿ ಅಭಿನವ್​ ಖರೆ
ಎಸ್​ ಪಿ ಅಭಿನವ್​ ಖರೆ

SP Abhinav Khares ಜಿಲ್ಲಾಡಳಿತ ಈ ಎಲ್ಲಾ ಟೀಂ ಲೀಡರ್ ಗಳಿಗೆ ಗುಂಡಾ ಕಾಯ್ದೆ ಅಡಿ ಗಡಿಪಾರು ಮಾಡಿ ಜೈಲಿಗಟ್ಟಿದರೂ.., ಜಾಮೀನು ಪಡೆದು ಮತ್ತೆ ನಗರ ಪ್ರವೇಶಿಸುವ ರೌಡಿಗಳು ಮತ್ತೆ ಅಪರಾದ ಕೃತ್ಯ ಮುಂದುವರೆಸಿರೋದು ಗೊತ್ತಾಗುತ್ತೆ. ಈ ಎಂಟು ನಟೋರಿಯಸ್ ರೌಡಿಗಳ ಟೀಂ ಗಳ ವಿರುದ್ಧ ಶಿವಮೊಗ್ಗ ನ್ಯಾಯಾಲಯದಲ್ಲಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿಂತೆ ವಿಚಾರಣೆ ನಡೆಯುತ್ತಿರೋದು ಕೂಡ ಅಭಿನವ್ ಖರೆ ಗಂಭೀರವಾಗಿ ಪರಿಗಣಿಸ್ತಾರೆ. ಈ ಟೀಂ ಪದೇ ಪದೇ ಕ್ರೈಂ ಎಸಗಿ.. ಕಾನೂನಿಂದ ಪಾರೋಗ್ತಿರೋದಕ್ಕೆ ಕಾರಣ ಹುಡುಕಿಕೊಂಡು ಹೊರಟ ಅಭಿನವ್ ಖರೆಗೆ ಕೊನೆಗೆ ಗೊತ್ತಾಗಿದ್ದು.. ಅವರೆಲ್ಲಾ ಸಾಕ್ಷಿಗಳಿಗೆ ಬೆದರಿಕೆ ಹಾಕಿರೋ ಅಂಶ ಗಮನಕ್ಕೆ ಬರುತ್ತೆ. ಆಗ ಅಭಿನವ್ ಖರೆ ಸರ್ಕಾರಿ ಅಭಿಯೋಜಕ ಯಳಗೇರಿಯವರೊಂದಿಗೆ ಸಮಾಲೋಚನೆ ನಡೆಸಿ… ನಾವು ಸಾಕ್ಷಿಗಳಿಗೆ ಧೈರ್ಯ ತುಂಬ್ತಿವಿ.. ನೀವು ಕೇಸು ಗೆಲ್ಲಿಸಿಕೊಡಿ. ಸಾಕ್ಷಿಗಳಿಗೆ ವಿಟ್ಸೆಸ್ ಟ್ರೈಯಲ್ ಕೊಡಬೇಕು ಅಂತಾ ಹೇಳ್ದಾಗ ಯಳಗೇರಿ ಅದಕ್ಕೆ ಒಪ್ಪಿಕೊಳ್ತಾರೆ. ಪಿಪಿ ಯಳಗೇರಿಯವರಿಗೆ ಎಪಿಪಿ ಪೂರ್ಣೇಶ್ ಸಾಥ್ ನೀಡಿ ವಾದ ಮಂಡನೆ ಮಾಡ್ತರೆ. ಆಗ ಶುರುವಾಗುತ್ತೆ… ನ್ಯಾಯಕ್ಕಾಗಿ ಕಾನೂನು ಸಮರ. 

SP Abhinav Khares ನ್ಯಾಯಾಲಯಕ್ಕೆ ಖುದ್ದು ಹಾಜರಾದ ಎಸ್ಪಿ. ಸಾಕ್ಷ್ಯಾದಾರಿಗಳಿಗೆ ತುಂಬಿದರು ಧೈರ್ಯ. ಸಾಕ್ಷ್ಯ ಹೇಳುವವರೆಗೂ ಎಸ್ಪಿಯವರೆ ಎದುರಿದ್ದು ಸ್ಥೈರ್ಯ.

ಶಿವಮೊಗ್ಗದ ನ್ಯಾಯಾಲಯದಲ್ಲಿ ಹಾಲಿ ಯಾವ ರೌಡಿಗಳ ಕೊಲೆ ಕೇಸುಗಳು ಟ್ರೈಯಲ್ ನಲ್ಲಿದೆ.. ಆ ಪ್ರಕರಣದಲ್ಲಿನ ಪ್ರಮುಖ ಸಾಕ್ಷಿಗಳಾರು.. ಕೋರ್ಟ್ ದಿನಾಂಕ ಇದೆಲ್ಲದರ ಮೇಲೆ ಹದ್ದಿನ ಕಣ್ಣಿಡಲು ಅಭಿನವ್ ಖರೆ ವಿಶೇಷ ಪೊಲೀಸ್ ತಂಡ ನೇಮಕ ಮಾಡ್ತಾರೆ. ಹಾಲಿ ಚಾಲ್ತಿಯಲ್ಲಿರುವ ರೌಡಿಗಳ ಕೇಸುಗಳಲ್ಲಿ ವಿಟ್ನೆಸ್ ಆದವರನ್ನು ಎಸ್ಪಿ ಅಭಿನವ್ ಖರೆ ಖುದ್ದು ತಮ್ಮ ಛೇಂಬರ್ ಗೆ ಕರೆಸಿಕೊಂಡು ದೈರ್ಯ ತುಂಬುತ್ತಾರೆ. ನೋಡಿ.. ಕೇಸಲ್ಲಿ ವಿಟ್ನೆಸ್ ಆಗಿರೋ ನೀವು ಭಯಪಡೋ ಅಗತ್ಯವಿಲ್ಲ… ನಿಮಗೆ ನಾವು ರಕ್ಷಣೆ ಕೊಡ್ತಿವಿ.. ಅಂತಾ ಹೇಳ್ದಾಗ ಬಹಳಷ್ಟು ಸಾಕ್ಷಿಧಾರರು ಅದಕ್ಕೆ ಸೊಪ್ಪು ಹಾಕಲಿಲ್ಲ… ನಮಗ್ಯಾಕೆ ಸ್ವಾಮಿ ಉಸಾಬರಿ… ಕೊನೆವರೆಗೂ ನೀವು ನಮಗೆ ರಕ್ಷಣೆ ಕೊಡ್ತಿರಾ ಅಂತಾ ಮರು ಪ್ರಶ್ನೆ ಹಾಕಿದಾಗ.. ಅಭಿನವ್ ಖರೆ.. ಅವರ ಮನವೊಲಿಸಿದ್ರು. 

ಹಾಗಲ್ಲ.. ಶಿವಮೊಗ್ಗ ನಗರದಲ್ಲಿರುವ ಈ ರೌಡಿಗಳನ್ನು ಶಾಶ್ವತವಾಗಿ ಮಟ್ಟ ಹಾಕಬೇಕಾದ್ರೆ… ನೀವು ಹೇಳೋ ಸಾಕ್ಷ್ಯ ಬೈಬಲ್ ಸ್ಟೇಟ್ ಮೆಂಟ್ ಇದ್ದಹಾಗೆ… ನೀವೇನು ಯೋಚಿಸಬೇಡಿ.. ನಿಮಗೆ ರಕ್ಷಣೆ ನೀಡ್ಲಿಲ್ಲ ಅಂದಾಗ ಮಾತಾಡಿ ಅಂದಾಗ ಸಾಕ್ಷಿಧಾರರು ಕೋರ್ಟ್ ನಲ್ಲಿ ವಿಚಾರಣೆ ನಡೆಯುವಾಗ .. ಎದುರಾಳಿ ತಂಡದವರು ಕಣ್ಣು ಬಿಟ್ರು ನಮಗೆ ಭಯವಾಗುತ್ತೆ ಅಂದಾಗ.. ಅಭಿನವ್ ಖರೆ… ನೀವು ಸಾಕ್ಷಿಧಾರರಾಗಿರೋ ಕೇಸು ಅಂತ್ಯಕಾಣೋವರೆಗೂ ನಿಮ್ ಜೊತೆ ನಾನಿರ್ತಿನಿ ಅಂದಾಗ.. ವಿಟ್ಸೆಸ್ ಆದವರಿಗೆ ಧೈರ್ಯ ಬರುತ್ತೆ. ಆಗ ಅಭಿನವ್ ಖರೆ… ಸಾಕ್ಷ್ಯಾದಾರರಿಗೆ ಇನ್ನು ವಿಶ್ವಾಸ ಮೂಡಿಸುವ ಸಲುವಾಗಿ ವಿಚಾರಣೆ ದಿನ ಖುದ್ದು ನ್ಯಾಯಾಲಯಕ್ಕೆ ಹಾಜರಾಗ್ತಿದಾರೆ, ಅಭಿಯೋಜಕರಿಂದ ಕೇಸಿಗೆ ಸಂಬಂಧಿಸಿದಂತೆ ಚರ್ಚಿಸೋ .., ಖರೆಯವರು, ಅವರಿಂದ ಸಮಗ್ರ ಮಾಹಿತಿ ಕಲೆ ಹಾಕ್ತರೆ. ಸಾಕ್ಷ್ಯಾದಾರರ ಸಮ್ಮುಖದಲ್ಲಿ ನಿಂತು ಅವರಲ್ಲಿ ಭರವಸೆ ಮೂಡಿಸುತ್ತಾರೆ. ಅವರು ಹೇಳಿಕೆ ನೀಡೋವರೆಗೂ. ಖುದ್ದು ನ್ಯಾಯಾಲಯದಲ್ಲಿ ಅಭಿನವ್ ಖರೆ ಸಾಕ್ಷಿದಾರರಿಗೆ ಅಂಗರಕ್ಷಕರಂತೆ ನಿಂತು ರಕ್ಷಣೆಯ ಭರವಸೆ ನೀಡಿದ್ದು ಒಂದು ಐತಿಹಾಸಿಕ ಮೈಲುಗಲ್ಲು. 

ಸಾಕ್ಷಿದಾರರಿಗೆ ವಿಟ್ಸೆಸ್ ಟ್ರೈಯಲ್. ಪೊಲೀಸ್ ಶ್ರಮಕ್ಕೆ ಸಾಥ್ ನೀಡಿದ ಪ್ರಾಸಿಕ್ಯೂಷನ್. ಒಂದೆಡೆ ಎಸ್ಪಿ ಅಭಿನವ್ ಖರೆ ನಟೋರಿಯಸ್ ರೌಡಿಗಳ ಟ್ರಯಲ್​  ಕೇಸಿನಲ್ಲಿ ಸಾಕ್ಷಿಧಾರರಿಗೆ ಧೈರ್ಯ ತುಂಬಿ ನ್ಯಾಯಾಲಯದ ಕಟಕಟೆ ಹತ್ತುವಂತೆ ಮಾಡಿದ್ರೆ.. ಮತ್ತೊಂದೆಡೆ ಪ್ರಾಸಿಕ್ಯೂಷನ್ ಡಿಪಾರ್ಟ್ ಮೆಂಟ್ ಕೂಡ… ದಿಟ್ಟ ಹೆಜ್ಜೆ ಮುಂದಿಟ್ಟಿತು. ಪಬ್ಲಿಕ್ ಪ್ರಾಸಿಕ್ಯೂಟರ್ ಯಳಗೇರಿಯವರು.. ಕೊಲೆ ಪ್ರಕರಣದಲ್ಲಿ ಸಾಕ್ಷಿದಾರರಾಗಿರುವವರಿಗೆ ವಿಟ್ಸೆಸ್ ಟ್ರೈಯಲ್ ಅಂದ್ರೆ ಸಾಕ್ಷಿ ಹೇಗೆ ನುಡಿಯಬೇಕು ಅನ್ನೋ ಬಗ್ಗೆ ರಿಹರ್ಸಲ್ ಮಾಡ್ಸೋದಕ್ಕೆ ಅಣಿಯಾದ್ರು.. ಪ್ರಕರಣ ನಡೆದು ಹಲವು ವರ್ಷಗಳಾದ ಸಂದರ್ಭದಲ್ಲಿ ಅಂದು ಸಾಕ್ಷಿ ನುಡಿದ ವ್ಯಕ್ತಿ.. ಬಹಳ ವರ್ಷಗಳ ನಂತ್ರ ಹೇಳಿಕೆಯನ್ನು ಜ್ಞಾಪಕದಲ್ಲಿಟ್ಟುಕೊಳ್ಳೋದಕ್ಕೆ ಸಾಧ್ಯವಾಗೋದಿಲ್ಲ… ಹೀಗಾಗಿ ಸಾಕ್ಷಿದಾರರು ತನಿಖಾ ಸಂದರ್ಭದಲ್ಲಿ ನೀಡಿದ ಹೇಳಿಕೆಯನ್ನೇ ಮತ್ತೆ ತರಬೇತಿ ಕೊಟ್ಟು… ಅಂದು ನೀಡಿದ ಹೇಳಿಕೆಯನ್ನೇ ನ್ಯಾಯಾಲಯದಲ್ಲಿ ನುಡಿಯಬೇಕೆಂಬ ಉದ್ದೇಶದಿಂದ ಯಳಗೇರಿ. ಸಾಕ್ಷಿದಾರರನ್ನು ಸಿದ್ದಪಡಿಸಿದ್ರು… ಸಾಕ್ಷಿದಾರರಿಗೆ ಪೊಲೀಸರ ಭದ್ರತೆ,, ಅಭಿಯೋಜಕರ ಸಹಕಾರ…. ಅವರ ನಿರ್ಧಾರವನ್ನು ಮತ್ತಷ್ಟು ಗಟ್ಟಿಗೊಳಿಸಿತು. 

ಸಾಕ್ಷಿದಾರರು ಕೋರ್ಟ್ ನಲ್ಲಿ ಕೊಲೆ ಆರೋಪಿ ಎದುರು ಯಾವುದೇ ಅಂಜಿಕೆಯಿಲ್ಲದೆ ಹರಳು ಹುರಿದಂತೆ ಸಾಕ್ಷ್ಯ ನುಡಿದರು. ಎಸ್ಪಿ ಅಭಿನವ್ ಖರೆ ವಿಚಾರಣೆ ಮುಗಿಯುವವರೆಗೂ ಸಾಕ್ಷಿದಾರರ ಜೊತೆಗಿದ್ದು ಧೈರ್ಯ ತುಂಬಿದರು. ಅಂತಿಮವಾಗಿ, ಅಭಿನವ್ ಖರೆ ಮತ್ತು ಯಳಗೇರಿಯವರ ಶ್ರಮ ಎರಡು ಜಡ್ಜ್ ಮೆಂಟ್ ಗಳಲ್ಲಿ , ಕೊಲೆ ಆರೋಪಿಗಳಿಗೆ ಸಾಯುವವರೆಗೂ ಜೀವಾವಧಿ ಶಿಕ್ಷೆ ನೀಡುವಷ್ಟು ಸಾರ್ಥಕ ಯಶಸ್ಸು ತಂದು ಕೊಟ್ಟಿತು. ಹಾಗಾದ್ರೆ ಆ ಪ್ರಕರಣಗಳು ಯಾವ್ದು ಅಂತಿರಾ. 

ಕೊಲೆ ಯತ್ನದ ಕೇಸಿಗಾಯ್ತು.., ಹತ್ತು ವರ್ಷಗಳ ಕಠಿಣ ಸಜೆ. ನಟೋರಿಯಸ್ ಕೀಲಿ ಇಮ್ರಾನ್ ತಂಡವಾಯ್ತು ಅಂದರ್. 

2013ರಲ್ಲಿ ರೌಡಿ ಕಿಲಿ ಇಮ್ರಾನ್ ತಂಡ ಎಸಗಿದ ಕೊಲೆ ಪ್ರಯತ್ನ ಪ್ರಕರಣ ಇದು. ವ್ಯಾಪಾರದ ವೈಮನಸ್ಸಿನಿಂದ ಬಿಸ್ಮಿಲ್ಲಾ ಮಟನ್ ಸ್ಟಾಲ್ ಮಾಲೀಕ ಅಯುಬ್ ಖಾನ್ ಎಂಬುವರ ಹತ್ಯೆಗೆ ಯತ್ನಿಸಿದ್ದ ಯಾಸಿನ್ ಖುರೇಷಿ ಕೀಲಿ ಇಮ್ರಾನ್, ವಾಸಿಂ ಅಕ್ರಂ, ತೌಹಿದ್ ಅಲಿಯಾಸ್ ಜಾಫರ್ ಹರ್ಷದ್ ಖಾನ್ ಎಂಬುವರಿಗೆ ಕೊಲೆ ಯತ್ನ ಕೇಸಿನಲ್ಲಿಯೇ ಶಿವಮೊಗ್ಗ ನ್ಯಾಯಾಲಯ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ, ಪ್ರಕರಣದಲ್ಲಿ ಯಾರಿಗೂ ಸಂಬಂಧವಿಲ್ಲದ ವ್ಯಕ್ತಿ ಕೊಲೆ ಘಟನೆಯ ಪ್ರಮುಖ ಸಾಕ್ಷಿಯಾಗಿದ್ದ. ಈ ಪ್ರಕರಣದಲ್ಲಿ ಎಸ್ಪಿ ಅಭಿನವ್ ಖರೆ ಖುದ್ದು ನ್ಯಾಯಾಲಯಕ್ಕೆ ಹಾಜರಾಗಿ ಸಾಕ್ಷ್ಯಾಧಾರರಿಗೆ ಧೈರ್ಯ ತುಂಬಿದ ಪರಿಣಾಮ, ಸಾಕ್ಷಿದಾರರು ದಿಟ್ಟವಾಗಿ ಸಾಕ್ಷಿ ನುಡಿದಿದ್ದರ ಪರಿಣಾಮ, ಕೊಲೆ ಯತ್ನದಲ್ಲಿಯೇ ಆರೋಪಿಗಳಿಗೆ ಶಿವಮೊಗ್ಗದ ಜೆಎಂಎಪ್ ಸಿ ನ್ಯಾಯಾಲಯದ ನ್ಯಾಯಧೀಶೆ ಬಿ, ಜಿ. ರಮಾರವರು ಆರೋಪಿಗಳಿಗೆ ಹತ್ತು ವರ್ಷಗಳ ಕಠಿಣ ಸಜೆ ವಿಧಿಸಿ ತೀರ್ಪು ನೀಡಿದರು. 

SP Abhinav Khares ಮಲಬಾರಿ ಬಾಬು ಕೊಲೆ ಪ್ರಕರಣದಲ್ಲಿ ಆರೋಪಿಗಳಿಗಾಯ್ತು ಸಾಯುವವರೆಗೂ ಜೀವಾವಧಿ ಶಿಕ್ಷೆ

ಸಾಗರದ ಜನತೆ ಬೆಚ್ಚಿ ಬೀಳಿಸಿದ್ದ ಕೊಲೆ ಪ್ರಕರಣ. ಹಾಡಹಗಲೇ ಜನಜಂಗುಳಿಯ ಮದ್ಯೆ ಕೊಚ್ಚಿ ಕೊಲೆ ಮಾಡಿತ್ತು ತಂಡ. ಇಸ್ಪೀಟ್ ಆಟದ ಹಣದ ವಿಚಾರವಾಗಿ ಸಾಗರದ ನೆಹರು ನಗರದ ಅಮ್ಜದ್ ಹಾಗೂ ಮೊಹಮ್ಮದ್ ಆಲಿ ಎಂಬುವವರ ನಡುವೆ 19.10.2014 ರಂದು ಗಲಾಟೆ ನಡೆದಿತ್ತು. ಇದನ್ನು ಮನಸ್ಸಿನಲ್ಲಿಟ್ಟಿಕೊಂಡು ಅಮ್ಜದ್ ಅಂದು ರಾತ್ರಿಯೇ ತನ್ನ ಸಹಚರರಾದ ಮಲಬಾರಿ ಬಾಬು, ಸುಕ್ಕಾ, ಮುಜಾಮಿಲ್ ಎಂಬುವವರೊಂದಿಗೆ ಸೇರಿಕೊಂಡು ಮೊಹಮ್ಮದ್ ಆಲಿ, ಇಸ್ಮಾಯಿಲ್ ಶರೀಫ್ ಮೇಲೆ ಹಲ್ಲೆ ಮಾಡಿದ್ದ. ಈ ವೇಳೆ ಮಲಬಾರೀ ಬಾಬು ಎಂಬಾತ ತನ್ನ ಕೈಯಲ್ಲಿದ್ದ ಮಚ್ಚಿನಿಂದ ಮೊಹಮ್ಮದ್ ಅಲಿ ಹಾಗೂ ಇಸ್ಮಾಯಿಲ್ ಶರೀಫ್ ಗೆ ಹಲ್ಲೆ ಮಾಡಿದ್ದ. ಇದರಿಂದಾಗಿ ಮಹಮ್ಮದ್ ಅಲಿ ತಲೆಗೆ ಗಂಬೀರ ಗಾಯವಾಗಿತ್ತು, ಜೊತೆಗೆ ಇಸ್ಮಾಯಿಲ್ ಕಣ್ಣು ಗುಡ್ಡೆಗೆ ಮಚ್ಚು ಬಿದ್ದು ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದರು. ಈ ಬಗ್ಗೆ ದೂರು ದಾಖಸಿಕೊಂಡ ಸಾಗರ ಪೊಲೀಸ್ರು.., ಮಲಬಾರಿ ಬಾಬು, ಸುಕ್ಕಾ, ಅಮ್ಜದ್, ಮುಜಾಮಿಲ್ ಎಂಬುವವರನ್ನು ಬಂಧಿಸಿದ್ದರು. 

ಪ್ರಕರಣ ಸಾಗರ ನ್ಯಾಯಾಲದಲ್ಲಿ ವಿಚಾರಣೆ ನಡೆದು, ಮಲಬಾರೀ ಬಾಬು ಜಾಮೀನಿನ ಮೇಲೆ ಹೊರ ಬಂದಿದ್ದ. ಹಳೇ ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದ ಅಮ್ಜದ್ ನ ಸಹಚರರಾದ ಮೊಹಮ್ಮದ್ ಅಲಿ, ಇಸ್ಮಾಯಿಲ್ ತಂಡ 20.03.2015 ರಲ್ಲಿ ಮಲಬಾರಿ ಬಾಬುನನ್ನು ಜನನಿಬಿಡ ಪ್ರದೇಶದಲ್ಲಿ ಅಟ್ಟಾಡಿಸಿಕೊಂಡು ಮಾರಕಾಸ್ತ್ರಗಳಿಂದ ಕೊಚ್ಚಿಕೊಲೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂದಿಸಿಂತೆ ಸಾಗರ ಪೊಲೀಸರು ಮೊಹಮ್ಮದ್ ಅಲಿ, ಇಸ್ಮಾಯಿಲ್ ಶರೀಫ್, ಬೊಮ್ಮ, ರಾಕೇಶ್, ಪ್ರತಾಪ್, ಅಬ್ದುಲ್ ರಹೀಲ್, ಇಮ್ರಾನ್, ಶಾಹೀದ್ ಎಂಬುವವನ್ನು ಬಂದಿಸಿದ್ದರು. ಈ ಬಗ್ಗೆ ಕಳೆದ ಎರಡು ವರ್ಷಗಳಿಂದ ವಾದ ಪ್ರತಿವಾದ ಆಲಿಸಿದ ಸಾಗರ ಐದನೇ ಹೆಚ್ಚುವರಿ ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶೆ ಮಹೇಶ್ವರಿ ಎಸ್ ಹಿರೇಮಠ್ ರವರು, ಏಳು ಮಂದಿ ಆರೋಪಿಗಳಿಗೆ ಸಾಯುವವರೆಗೂ ಜೀವಾವಧಿ ಶಿಕ್ಷೆ ಹಾಗೂ ತಲಾ 33 ಸಾವಿರ ದಂಡ ವಿಧಿಸಿ ಅಂದು ತೀರ್ಪು ಪ್ರಕಟಿಸಿದರು. ಅಲ್ಲದೇ, ಸಾರ್ಜಜನಿಕ ಸ್ಥಳದಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿದ್ದಕ್ಕೆ ಐದು ವರ್ಷಗಳ ಶಿಕ್ಷೆಯನ್ನು ನೀಡಿದರು. ದಂಡದಲ್ಲಿ ಸಂಗ್ರಹವಾದ ಮೊತ್ತದಲ್ಲಿ ಒಂದು ಲಕ್ಷ ಹಣವನ್ನು ಮೃತನ ಕುಟುಂಬಕ್ಕೆ ನೀಡುವಂತೆ ಆದೇಶ ಮಾಡಿದರು. ಈ ಪ್ರಕರಣದಲ್ಲಿ ಸಹ ಅಭಿನವ್ ಖರೆ ಸಾಕ್ಷಿದಾರರಿಗೆ ಧೈರ್ಯ ತುಂಬಿದರೆ , ಯಳಗೇರಿಯವರು ಸಾಕ್ಷಿದಾರರಿಗೆ ವಿಟ್ಸೆಸ್ ರಿಹರ್ಸೆಲ್ ಚೆನ್ನಾಗಿಯೇ ಮಾಡಿಸಿದ್ರು. 

Shivamogga Underworld ಅಂದಿನ ಎಸ್ಪಿ ಅಭಿನವ್ ಖರೆ ಮತ್ತು ಪ್ರಾಸಿಕ್ಯೂಷನ್ ನ ಪಿಪಿ ವಿ.ಜಿ ಯಳಗೆರೆ
Shivamogga Underworld ಅಂದಿನ ಎಸ್ಪಿ ಅಭಿನವ್ ಖರೆ ಮತ್ತು ಪ್ರಾಸಿಕ್ಯೂಷನ್ ನ ಪಿಪಿ ವಿ.ಜಿ ಯಳಗೆರೆ

SP Abhinav Khares ನಟೋರಿಯಸ್ ರೌಡಿಗಳಿಗೆ ಶಾಶ್ವತ ಜೈಲು. ತೀರ್ಪಿನಿಂದ ರೌಡಿಗಳಾಗಿದ್ದಾರೆ ಕಂಗಾಲು. 

ಈ ಎರಡು ಪ್ರಕರಣಗಳಲ್ಲಿ ರೌಡಿಗಳ ಗ್ಯಾಂಗ್ ಗೆ ನೀಡಿರುವ ತೀರ್ಪು ನಟೋರಿಯಸ್ ರೌಡಿಗಳಿಗೆ ನುಂಗಲಾರದ ತುತ್ತಾಗಿ ಪರಿಣಾಮಿಸಿದೆ. ಶಿವಮೊಗ್ಗ ನ್ಯಾಯಾಲಯದಲ್ಲಿ ಚಾಲ್ತಿಯಲ್ಲಿರುವ ಹಂದಿ ಅಣ್ಣಿ, ಬಂಕ್ ಬಾಲು, ನವುಲೆ ಆನಂದ, ಮಾರ್ಕೇಟ್ ಲೋಕಿ, ಹೆಬ್ಬೆಟ್ ಮಂಜ ಸೇರಿದಂತೆ ನಗರದಲ್ಲಿರುವ ನಟೋರಿಯಸ್ ರೌಡಿಗಳ ಕೊಲೆ ಪ್ರಕರಣಗಳ ವಿಚಾರಣೆಯಲ್ಲಿ ಸಹ ಅಭಿನವ್ ಖರೆ ಖುದ್ದು ನ್ಯಾಯಾಲಯಕ್ಕೆ ಹಾಜರಾಗಿ,. ಸಾಕ್ಷಿದಾರರಿಗೆ ಧೈರ್ಯ ತುಂಬಿದ್ದರು. ಆದರೆ ಅವರ ವರ್ಗಾವಣೆಯಿಂದ ರೌಡಿಗಳು ಸೆಫ್ ಆಗಿ ಹೋದ್ರು. ಹಂದಿ ಅಣ್ಣಿ ಮರ್ಡರ್ ಕೇಸ್ ನಲ್ಲಿ ಕಾಡಾ ಕಾರ್ತಿ ಅಂಡ್ ಟೀಂ ಸೇಫ್ ಆಗಿ ಖುಲಾಸೆಯಾಯ್ತು. ಇದು ಪೊಲೀಸ್ ಇಲಾಖೆಗೆ ಸೆಟ್ ಬ್ಯಾಕ್ ಅಂತಾನೇ ಹೇಳಬಹುದು.

ಒಂದು ಪೊಲೀಸ್ ವ್ಯವಸ್ಥೆ ಹಾಗು ಪ್ರಾಸಿಕ್ಯೂಷನ್ ವಾದ ಖಡಕ್ ಆಗಿ ಇದ್ರೆ.. ಆರೋಪಿಗಳಿಗೆ ಕಾನೂನಿನಲ್ಲಿ ಕಠಿಣ ಶಿಕ್ಷೆ ಕೊಡಿಸಬಹುದು ಎಂಬುದಕ್ಕೆ ಎರಡು ಜಡ್ಜ್ ಮೆಂಟ್ ಗಳು ಸಾಕ್ಷಿಯಾಗಿದೆ ಶಿವಮೊಗ್ಗ ನಗರದಲ್ಲಿ ರೌಡಿಗಳ ಅಟ್ಟಹಾಸ ಕೊನೆಗಾಣಿಸಿ, ಶಾಶ್ವತವಾಗಿ ಶಾಂತಿ ನೆಲೆಯೂರುವಂತೆ ಮಾಡಬೇಕೆಂಬ ಛಲದೊಂದಿಗೆ ಎಸ್ಪಿ ಅಭಿನವ್ ಖರೆ ಅಂದು ಸಾಕ್ಷಿದಾರರಿಗೆ ಧೈರ್ಯ ತುಂಬಿ ನ್ಯಾಯಾಲಯಕ್ಕೆ ಹಾಜಾರಾಗಿದ್ದು.. ನಿಜಕ್ಕೂ ಹೆಮ್ಮೆಯ ವಿಷಯ. ಇನ್ನು ನೊಂದ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ಸರ್ಕಾರದ ಪರ ವಾದಿಸುವ ಅಭಿಯೋಜಕ ವಿಜಿ ಯಳಗೆರೆ ವಾದದ ಶ್ರಮ ಕೂಡ ಅಷ್ಟೆ ಶ್ಲಾಘನೀಯ ವಿಚಾರ. ಇಂದು ಟ್ರೈಯಲ್ ಮಾನಟರಿಂಗ್ ಸೆಲ್ ಆಗಿ ಪರಿವರ್ತನೆಯಾಗಿರುವ ವಿಂಗ್ ನ ಸಬ್ ಇನ್ ಸ್ಪೆಕ್ಟರ್ ಶಕುಂತಲರಿಗೆ ನೊಂದವರಿಗೆ ನ್ಯಾಯ ಕೊಡಿಸಿದ ಫಲವಾಗಿ ರಾಷ್ಟ್ರಪತಿ ಪದಕ ಲಭಿಸುವಂತೆ ಮಾಡಿದೆ. ಅವರಿಗೆ ಮಲೆನಾಡು ಟುಡೆ ಶುಭ ಹಾರೈಸುತ್ತದೆ.

ಹೆಚ್​ ಕೆ ಶಕುಂತಲ
ಹೆಚ್​ ಕೆ ಶಕುಂತಲ

SP Abhinav Khares Brave Fight Against Rowdys

 Tirthahalli ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣ, ಶಿವಮೊಗ್ಗ.
ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣ, ಶಿವಮೊಗ್ಗ.
SUNCONTROL_FINAL-scaled