ಲಾಡ್ಜ್​ನಲ್ಲಿ ದರೋಡೆಗೆ ಸ್ಕೆಚ್​! ಸೀಗೇಹಟ್ಟಿಯ ಓರ್ವ ಸೇರಿ ಐವರು ಅರೆಸ್ಟ್!10 ದಿನದಲ್ಲಿ ರಾಬರಿ ಕೇಸ್​ ಕ್ಲೀಯರ್​! ಶಿವಮೊಗ್ಗ ಪೊಲೀಸರ ರೋಚಕ ಕಾರ್ಯಾಚರಣೆ!

Malenadu Today

ಶಿವಮೊಗ್ಗದಲ್ಲಿ ಸದ್ಯ ದರೋಡೆ ಪ್ರಕರಣಗಳು ಸಖತ್ ಸದ್ದು ಮಾಡುತ್ತಿದೆ.  ಸಾಗರ ರಸ್ತೆಯಲ್ಲಿ ನಡೆದ ದರೋಡೆ ಪ್ರಕರಣದ ಬೆನ್ನಲ್ಲೆ ಈ ಘಟನೆಗಳನ್ನು ಶಿವಮೊಗ್ಗ ಎಸ್​ಪಿ ಮಿಥುನ್ ಕುಮಾರ್ (sp mithunkumar) ಗಂಭೀರವಾಗಿ ಪರಿಗಣಿಸಿದ್ದಾರೆ. ಇದರ ನಡುವೆ ಲಾಡ್ಜ್​ವೊಂದರಲ್ಲಿ ದರೋಡೆಗೆ ಸಂಚು ರೂಪಿಸುತ್ತಿದ್ದ (robbery) ಐವರನ್ನ ಶಿವಮೊಗ್ಗ ಪೊಲೀಸರು ಬಂಧಿಸಿದ್ಧಾರೆ. ಶಿವಮೊಗ್ಗ ನಗರದ  ಅಮೀತ್ ಅಹಮದ್ ಸರ್ಕಲ್​ಗೆ ಹೊಂದಿಕೊಂಡಿರುವ ಪಲ್ಲವಿ ಹೋಟೆಲ್​ನಲ್ಲಿ ಆಲ್ಕೊಳದ ಅಮಿತ್, ಸೀಗೆಹಟ್ಟಿಯ ವರ್ಷಿತ್, ಊರುಗಡೂರಿನ ದಿಲೀಪ, ಭದ್ರಾವತಿಯ ತೇಜಸ್, ಆಕಾಶ್ ಎಂಬ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಗಾಜನೂರು ರಸ್ತೆಯಲ್ಲಿ ಇವರು ದರೋಡೆಗೆ ಸ್ಕೆಚ್ ಹಾಕಿದ್ದರು ಎಂಬ ಆರೋಪ ಹೊರಿಸಲಾಗಿದೆ. 

Malenadu Today

ಶಿವಮೊಗ್ಗ ಹೈವೆಯಲ್ಲಿ ಸಾಗರ ಮಾರಿ ಜಾತ್ರೆಗೆ ಹೊರಟಿದ್ದವರ ಕಾರು ಅಡ್ಡಗಟ್ಟಿ ದರೋಡೆ!

ತುಂಗಾನಗರ ಪೊಲೀಸರ ಕಾರ್ಯಾಚರಣೆ

ಇನ್ನೊಂದೆಡೆ ಶಿವಮೊಗ್ಗದ ತುಂಗಾನಗರ ಪೊಲೀಸರು (tunganagara police) ದರೋಡೆ ಮಾಡಿದ್ದ ತಂಡವೊಂದನ್ನ ಬಂಧಿಸಿದ್ದಾರೆ. ಸಿಪ್ಪೆಗೋಟು ಅಡಿಕೆ ಇದೆ ಕೊಡುತ್ತೇವೆ ಎಂದು ಹೇಳಿ, ಖರೀದಿದಾರನ್ನು ನಿರ್ದಿಷ್ಟ ಸ್ಥಳವೊಂದಕ್ಕೆ  ಕರೆಸಿಕೊಂಡು ಬೆತ್ತದಿಂದ ಹೊಡೆದು ಅವರ ಬಳಿ ಇದ್ದ 5 ಲಕ್ಷ ರೂಪಾಯಿಯನ್ನು ದೋಚಿಸಿತ್ತು. ಕಳೆದ ಫೆಬ್ರವರಿ 6 ರಂದು ನಡೆದಿದ್ದ ಘಟನೆ ಸಂಬಂಧ ಕೇಸ್​  ದಾಖಲಾಗಿದ್ದು, ಇದೀಗ 10 ದಿನಗಳಲ್ಲಿ ಆರೋಪಿಗಳನ್ನು ಪೊಲೀಸರು ಬಂದಿಸಿದ್ದರು  ಗೋಪಾಳದ ಮಂಜನಾಯ್ಕ್, ಶಿಕಾರಿಪುರದ ಆಸೀಫುಲ್ಲಾ, ಕೊನಗವಳ್ಳಿಯ ಗಣೇಶ್ ನಾಯ್ಕ್, ಶಿವಮೊಗ್ಗದ ದಾವಲ ಬಡಗಿ, ಶಿವಮೊಗ್ಗದ ರಿಜ್ವಾನ್ ಅಹ್ಮದ್ ಬಂಧಿತ ಆರೋಪಿಗಳು. 

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com

Share This Article