sigandur bridge : ಸಿಗಂದೂರು ಸೇತುವೆ ವೀಕ್ಷಿಸಿದ ಕಾಗೋಡು | ಹೇಳಿದ್ದೇನು

prathapa thirthahalli
Prathapa thirthahalli - content producer

sigandur bridge : ಸಿಗಂದೂರು ಸೇತುವೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಲಿದೆ.ಇದರ ನಡುವೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಸೇತುವೆಗೆ ಭೇಟಿ ನೀಡಿ ವೀಕ್ಷಣೆ ಮಾಡಿ ಮೆಚ್ಚುಗೆಯ ಮಾತನ್ನು ಆಡಿದ್ದಾರೆ.

sigandur bridge : ಮುಳುಗಡೆ ಪ್ರದೇಶದ ಜನರಿಗೆ ಮುಕ್ತಿ ಸಿಕ್ಕಿದೆ

ಈ ಹಿಂದೆ ಕಾಗೋಡು ತಿಮ್ಮಪ್ಪರವರು  ಕೇಂದ್ರ ಭೂ ಸಾರಿಗೆ ಸಚಿವ ನಿತಿನ್​ ಗಡ್ಕರಿ ಅವರ ಮನೆಗೆ  ತೆರಳಿ ಸಿಗಂದೂರು  ಜನರಿಗೆ ಈ ಸೇತುವೆಯ ಅವಶ್ಯಕತೆ ಬಹಳಾ ಇದೆ ಇದರಿಂದಾಗಿ ಬೇಗ ಅನುದಾನ ದೊರಕಿಸಿ ಕೊಡಿ ಎಂದು ಮನವಿ ಮಾಡಿದ್ದರು. ನಂತರ ಕೆಲವು ರಾಜಕಾರಣಿಗಳ ಪ್ರಯತ್ನದ ಫಲದಿಂದ ಇಂದು ಆ ಸೇತುವೆಯ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ.  ಇಂದು ಈ ಸೇತುವೆಯ  ಕುರಿತು ಮಾತನಾಡಿರುವ ಅವರು ಇದೊಂದು ಅಪೂರ್ವವಾದ ದಿನ. ಸೇತುವೆ ನಿರ್ಮಾಣಕ್ಕೆ ಹಣ ಮಂಜೂರು ಮಾಡಿದ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿರವರಿಗೆ  ಸೇತುವೆಗೆ ದುಡಿದ ಸಣ್ಣ ಕಾರ್ಮಿಕರಿಂದ ದೊಡ್ಡ ಇಂಜಿನಿಯರ್ ಗಳಿಗೆ  ಸುತ್ತಮುತ್ತಲಿನ ಜನರ ಪರವಾಗಿ ಕೃತಜ್ಞತೆ ಸಲ್ಲಿಸುವೆ. ಕರೂರು ಬಾರಂಗೀ ಹೋಬಳಿಯ ಮುಳುಗಡೆ ಪ್ರದೇಶದ ಜನರಿಗೆ  ಸೇತುವೆಯ ನಿರ್ಮಾಣದಿಂದ ಬಿಡುಗಡೆ ಸಿಕ್ಕಿದೆ ಎಂದರು.

- Advertisement -

 

Share This Article