sigandur bridge news ಸಿಗಂದೂರು ಸೇತುವೆ ಶರಾವತಿ ಹಿನ್ನೀರಿನಲ್ಲಿ ವಾಸಿಸುತ್ತಿರುವ ಎಷ್ಟೂ ಜನರ ಕನಸು. ಸತತ ಆರೇಳು ದಶಕದಿಂದ ಅನೇಕ ರಾಜಕಾರಣಿಗಳ ಪ್ರಯತ್ನ ಫಲವಾಗಿ ಶೀಘ್ರದಲ್ಲೇ ಸಿಗಂದೂರು ಸೇತುವೆ ಸಾರ್ವಜನಿಕ ಸಂಚಾರಕ್ಕೆ ಸಿದ್ದವಾಗಲಿದೆ. ಈಗಾಗಲೇ ಸೇತುವೆಯ ಕಾಮಗಾರಿಗಳು ಪೂರ್ಣಗೊಂಡಿದ್ದು, ಸೇತುವೆಯ ಮೇಲೆ ಡಾಂಬರೀಕರಣ ಸುಣ್ಣ ಬಳಿಯುವ ಕಾರ್ಯಗಳು ನಡೆಯುತ್ತಿದೆ. ಇದರ ನಡುವೆ ಇಷ್ಟು ವರ್ಷದ ಪ್ರಯತ್ನದ ಫಲವಾಗಿ ಈ ಸೇತುವೆ ಹೇಗೆ ನಿರ್ಮಾಣವಾಯಿತು. ಇದರ ನಿರ್ಮಾಣಕ್ಕೆ ಬಿಡುಗಡೆ ಮಾಡಿದ ಹಣವೆಷ್ಟು. ಇದರ ಉದ್ದ ಅಗಲ ಇದರಿಂದ ಜನರಿಗೆ ಆಗುವ ಉಪಯೋಗಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಈ ಸೇತುವೆ ಅಂಬಾರಗೋಡ್ಲು ಮತ್ತು ಹೊಸನಗರ ತಾಲ್ಲೂಕಿನ ಕಳಸವಳ್ಳಿ ಗ್ರಾಮಗಳನ್ನು ಸಂಪರ್ಕಿಸುತ್ತದೆ. ಈ ಹಿಂದೆಲ್ಲ ಹಿನ್ನೀರಿನಲ್ಲಿ ವಾಸಿಸುತ್ತಿರುವ ಜನರು ಹುಷಾರಿಲ್ಲದಿದ್ದಾಗ ಆಸ್ಪತ್ರೆಗೆ ಹೋಗಬೇಕೆಂದರೂ ಸಹ ಲಾಂಚ್ ಮೂಲಕವೇ ತೆರಳಬೇಕಿತ್ತು. ಇದರಿಂದಾಗಿ ಹೆಚ್ಚಿನ ಸಮಯ ವ್ಯರ್ಥವಾಗುತ್ತಿತ್ತು. ಇದೀಗ ನಿರ್ಮಾಣವಾಗತ್ತಿರುವ ಸೇತುವೆಯಿಂದ ಸಾಗರದಿಂದ ಸಿಗಂದೂರಿಗೆ ಪ್ರಯಾಣದ ಸಮಯ ಸುಮಾರು ಒಂದು ಗಂಟೆಗಳಷ್ಟು ಕಡಿಮೆಯಾಗಲಿದೆ. ಹಾಗೆಯೇ ಸಿಗಂದೂರು ದೇವಸ್ಥಾನಕ್ಕೆ ಬರುವ ಭಕ್ತರಿಗೆ ಹೆಚ್ಚಿನ ಅನುಕೂಲವಾಗಲಿದೆ.
sigandur bridge news ಸಿಗಂದೂರು ಸೇತುವೆ ನಿರ್ಮಾಣಕ್ಕೆ ತಗುಲಿದ ವೆಚ್ಚವೆಷ್ಟು
ಈ ಸಿಗಂಧೂರು ಸೇತುವೆ ಸರಿಸುಮಾರು 423 ಕೋಟಿ ವೆಚ್ಚದಲ್ಲಿ ನಿರ್ಮಾಣವಾತ್ತಿದೆ. ಈ ಕಾಮಗಾರಿಗೆ 2019 ರಲ್ಲಿ ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅಡಿಪಾಯವನ್ನು ಹಾಕಿ ಕಾಮಗಾರಿಗೆ ಚಾಲನೆಯನ್ನು ನೀಡಿದರು. ಅದಾದ ಬಳಿಕ ಸೇತುವೆ ನಿರ್ಮಾಣ ಕಾರ್ಯ ಪ್ರಾರಂಭವಾಯಿತು.

ಸೇತುವೆಯ ಉದ್ದವೆಷ್ಟು?
ಸರಿಸುಮಾರು 2.25 ಕಿಲೋಮೀಟರ್ ಉದ್ದವಿರುವ ಈ ಸೇತುವೆ ದೇಶದಲ್ಲಿಯೇ 2 ನೇ ಅತಿ ಉದ್ದದ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದು ಈ ಸೇತುವೆಯನ್ನು ಸುಧಾರಿತ ಕೇಬಲ್-ಸ್ಟೇಡ್ ತಂತ್ರಜ್ಞಾನವನ್ನು ಬಳಸಿ ನಿರ್ಮಿಸಲಾಗಿದ್ದು, ರಾಜ್ಯದಲ್ಲಿಯೇ ಮೊದಲ ಬಾರಿಗೆ ಈ ಮಾದರಿಯ ಸೇತುವೆಯನ್ನು ನಿರ್ಮಿಸಲಾಗಿದೆ.
sigandur bridge news ಸೇತುವೆ ಉದ್ಘಾಟನೆ ಯಾವಾಗ?
ಮಾಹಿತಿಗಳ ಪ್ರಕಾರ ಈ ಸೇತುವೆಯನ್ನು ಇದೇ ವರ್ಷ ಜುಲೈ ಅಂತ್ಯದ ಒಳಗೆ ಮುಗಿಸಲು ಯೋಜಿಸಲಾಗಿದೆ. ಆದರೆ ಸೇತುವೆ ಕಂಟ್ರ್ಯಾಕ್ಟರ್ ಈ ಸೇತುವೆಯನ್ನು ಪೂರ್ಣಗೊಳಿಸಲು ಆಗಸ್ಟ್ ಕೊನೆಯವರೆಗೆ ಸಮಯ ತೆಗೆದುಕೊಂಡಿದ್ದು, ಸೇತುವೆ ಉದ್ಘಾಟನಾ ಕಾರ್ಯ ತಡವಾದರೂ ಅಗಬಹುದು, ಈ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಸೇತುವೆಯ ಉದ್ಘಾಟನೆಯನ್ನು ಮಾಡಲಿದ್ದಾರೆ.

ಈ ಸೇತುವೆ ಎಷ್ಟೋ ಜನರ ಕನಸಾಗಿತ್ತು. ಅನೇಕರು ಸೇತುವೆಯ ಡ್ರೋನ್ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದು, ಈ ಸೇತುವೆ ಮಲೆನಾಡಿನ ಅದ್ಬುತ ಅಕರ್ಷಣೆಗಳಲ್ಲಿ ಒಂದು ಎಂದು ಹೇಳುತ್ತಿದ್ದಾರೆ. ಆ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗುತ್ತಿವೆ.
Siganduru Bridge 🌉
Taking final shape!
It will be iconic Bridge for #Karnataka !#Shivamogga@BYRBJP https://t.co/HvtILgLjwi pic.twitter.com/oh8P2hAAaI— Karnataka Development Index (@IndexKarnataka) June 19, 2025